ತರಾತುರಿಯಲ್ಲಿ ಆನೆಗೊಂದಿ ಉತ್ಸವ ಆಚರಣೆ. ಜನಪ್ರತಿ ಅಧಿಕಾರಿಗಳಿಗೆ ಸಿಮೀತ: ರಾಜೇಶ ಆಕ್ರೋಶ
ಗಂಗಾವತಿ.
ಕೇವಲ ನಾಲ್ಕು ದಿನ ಬಾಕಿ ಉಳಿದಿರುವ ಆನೆಗೊಂದು ಉತ್ಸವ ಮಾಡಿ ಮುಗಿಸಿ ಕೈತೊಳೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸಿಮೀತವಾಗುತ್ತಿದೆ ಎಂದು ಅಖಿಲ ಕರ್ನಾಟಕ ಹರಿಹರ ಹಕ್ಕಬುಕ್ಕ ನಾಯಕ ಮಹಾವೇದಕೆ ಅಧ್ಯಕ್ಷ ಹೆಚ್.ರಾಜೇಶ ನಾಕ ದೊರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಲಿ ಜನಾರ್ಧನರೆಡ್ಡಿ ಅವರು ಗಂಗಾವತಿ ಶಾಸಕರಾಗಿ ಒಂದು ವರ್ಷ ಕಳೆಯುತ್ತಾ ಬರುತ್ತಿದೆ. ಮತ್ತು ಅವರಿಗೆ ಗಂಗಾವತಿ ಕ್ಷೇತ್ರದ ಸಂಪೂರ್ಣ ಮಾಹಿತಿ ಕೂಡಾ ಇದೆ. ಆದರೆ ಆನೆಗೊಂದಿ ಉತ್ಸವವನ್ನು ಕನಕಗಿರಿ ಉತ್ಸವ ಘೋಷಣೆಯಾದ ನಂತರ ಕೆಲವು ಪಟ್ಟಭದ್ರ ಹಿತಾಶಕ್ತಿಗೆ ಮಣಿದು ಸಮಯವಕಾಶವಿಲ್ಲದೇ ದಿಡೀರ್ ದಿನಾಂಕ ನಿಗದಿಪಡಿಸಿದ್ದಾರೆ. ಮಾ.೧೧ ಮತ್ತು ೧೨ ಎರಡು ದಿನ ಉತ್ಸವ ಆಚರಿಸಲು ಮುಂದಾಗಿರುವ ಶಾಸಕರು ಉತ್ಸವ ಸಿದ್ಧತೆ ಕನಿಷ್ಟ ಒಂದು ತಿಂಗಳಾದರೂ ಸಮಯವಕಾಶ ನೀಡಬೇಕು. ಅದರೆ ಒಂದು ವಾರದಲ್ಲಿ ಉತ್ಸವ ಆಚರಿಸಲು ಮುಂದಾಗಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಉತ್ಸವ ಆಚರಿಸಬೇಕೆಂಬ ಏಕೈಕ ಉದ್ದೇಶದಿಂದ ಶಾಸಕರು ಮತ್ತು ಅಧಿಕಾರಿಗಳು ಸೇರಿ ತಮಗೆ ಇಷ್ಟ ಬಂದ ಚಲನಚಿತ್ರ ನಟರನ್ನು ಅಹ್ವಾನಿಸಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ. ಆದರೆ ಇಂತಹ ಜನೋತ್ಸವ ಉತ್ಸವ ಆಚರಿಸಬೇಕಾದರೆ ತಾಲೂಕಿನ ಮತ್ತು ಆನೆಗೊಂದಿ ಭಾಗದ ಎಲ್ಲಾ ಸಂಘ, ಸಂಸ್ಥೆ ಮುಖಂಡರನ್ನು, ರಾಜ ಮನೆತನದ ಪ್ರಮುಖರನ್ನು, ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಈ ರೀತಿ ಮಾಡದೇ ಏಕಾ ಏಕಿ ಉತ್ಸವ ಆಚರಿಸಲು ಮುಂದಾಗಿರುವುದರಿಂದ ಉತ್ಸವದಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಮತ್ತು ಈ ಭಾಗದ ರಾಜ ಮನೆತನಗಳು, ಹೋರಾಟಗಾರರು, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸಲು ಮರೆತು ಹೋಗುತ್ತದೆ. ಹಂಪಿ ಉತ್ಸವ ದಿನಾಂಕ ನಿಗದಿಯಾದ ತಕ್ಷಣ ಆನೆಗೊಂದಿ ಉತ್ಸವ ನಿಗದಿಪಡಿಸಲು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಮುಂದಾಗದೇ ಜನರ ಒತ್ತಡಕ್ಕೆ ತರಾ ತುರಿಯಲ್ಲಿ ಮಾಡಲು ಹೊರಟಿರುವುದು ಸರಿಯಲ್ಲ. ಉತ್ಸವದಲ್ಲಿ ಯುವ ಪಿಳಿಗೆಗೆ ಪರಿಚಯಿಸಬೇಕಾಗಿರುವ ಇತಿಹಾಸಕ್ಕೆ ಮನ್ನಣೆ ನೀಡಬೇಕು ಎಂದು ರಾಜೇಶ ನಾಯಕ ದೊರೆ ಅಗ್ರಹಿಸಿದ್ದಾರೆ.