ಗಂಗಾವತಿ

ಸರ್ಕಾರಕ್ಕೆ ಆದಾಯ. ಅಂಜನಾದ್ರಿಗಿಲ್ಲ ಸೌಕರ್ಯ ! ವಿದ್ಯಾದಾಸ ಬಾಬಾರ ಪೂಜೆಗೆ ಅಡೆತಡೆ ಯಾಕೆ ?

ವಿಶೇಷ ವರದಿ ಸುಂದರರಾಜ್ BA ಕಾರಟಗಿ 

ಗಂಗಾವತಿ ; ಇತಿಹಾಸ ಪೌರಾಣಿಕ ಸ್ಥಳವಾದ ಆನೆಗುಂದಿ ಭಾಗದ ಹನುಮನ ಜನ್ಮ ಸ್ಥಾನವಾದ ಅಂಜನಾದ್ರಿಯಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ, ಲಕ್ಷಾಂತರ ಭಕ್ತರು ಭೇಟಿ ನೀಡಿ ಹನುಮನ ದರ್ಶನ ಪಡೆಯುತ್ತಿದ್ದಾರೆ.ಅಂಜನಾದ್ರಿಯ ಹನುಮನ ಪೂಜೆಗೆ ದೇಶ ವಿದೇಶಗಳಿಂದ ಭಕ್ತರು ಬರುತ್ತಿದ್ದಾರೆ ಆದರೆ ಬರುವ ಭಕ್ತರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಪರದಾಡುವಂತಾಗಿದೆ, ಅಂಜನಾದ್ರಿಯ ದೇಗುಲದಲ್ಲಿ ಅರ್ಚಕರಾದ ವಿದ್ಯಾದಾಸ್ ಬಾಬಾ ಇವರು ಎರಡು ದಶಕಗಳಿಂದಲೂ ಹನುಮನ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದಾರೆ. ವಿದ್ಯಾದಾಸ ಬಾಬಾ ಇವರು ಅವರ ಅಪಾರ ಶಿಷ್ಯ ಬಳಗದೊಂದಿಗೆ  ಬರುವ ಭಕ್ತರನ್ನು ಧಾರ್ಮಿಕ ಶ್ರದ್ಧಾ ಭಕ್ತಿ ಭಾವನೆಗಳೊಂದಿಗೆ ದೇಗುಲದ ಮೇಲೆ ಭಕ್ತರಲ್ಲಿ ಧನಾತ್ಮಕ ಭಾವನೆ ಮೂಡುವಂತೆ ಅಚ್ಚುಕಟ್ಟಾಗಿ ಹನುಮ ದೇವರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಬಂದು ದೇಗುಲದ ಪಾವಿತ್ರತೆಯನ್ನು ಕಾಪಾಡುತ್ತಿದ್ದಾರೆ.

ಆದರೆ ಇತ್ತೀಚಿಗೆ ನಡೆದಂತ ಬೆಳವಣಿಗೆಗಳಿಂದ ವಿದ್ಯಾದಾಸ ಬಾಬಾ ಅವರನ್ನು ಅರ್ಚಕ ಸ್ಥಾನದಿಂದ ಕೆಳಗಿಳಿಸಲು ಕೆಲವು ಷಡ್ಯಂತರಗಳು ನಡೆದು ಹೋಗಿವೆ, ಆದರೆ ವಿದ್ಯಾದಾಸ ಬಾಬಾ ಅವರು ಕುಗ್ಗದೆ ನ್ಯಾಯಾಲಯದಲ್ಲಿ ಧಾವೆಯನ್ನು (ಧಾರವಾಡ ಹೈ ಕೋರ್ಟ್ ರಿಟ್ 14917/2025) ಹೂಡಿ ಅಂಜನಾದ್ರಿ ದೇಗುಲದಲ್ಲಿ ಅರ್ಚಕರಾಗಿ ಮುಂದುವರೆಯುವಂತೆ ನ್ಯಾಯಾಲಯ ತೀರ್ಪು ನೀಡಿರುವುದು ಭಕ್ತರು ಸ್ವಾಗತ ಮಾಡಿದ್ದಾರೆ,

ಧಾರವಾಡ ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 14917/2025. CCP ಸಂಖ್ಯೆ.100112/2025 ರಲ್ಲಿ 09-04-2025 ರಂದು ಹೊರಡಿಸಿದ ಅಂತಿಮ ತೀರ್ಪು ಮತ್ತು ಆದೇಶ ನೀಡಿರುತ್ತದೆ. ರಿಟ್ ಅರ್ಜಿಯಲ್ಲಿ ಹೈಕೋರ್ಟ್ 14.02.2023 ರಂದು ಹೊರಡಿಸಲಾದ ಮಧ್ಯಂತರ ಆದೇಶವನ್ನು ನಿಷ್ಠೆಯಿಂದ ಪಾಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಮತ್ತು ಅರ್ಜಿದಾರರು ದೇವಾಲಯದ ಅರ್ಚಕರಾಗಿ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಮುಂದುವರಿಸಲು ಹಾಗೂ ಅವರಿಗೆ ಈ ಹಿಂದೆ ಒದಗಿಸಲಾದ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಒಂದೇ ಕೋಣೆಯಲ್ಲಿ ಉಳಿಯಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ಈ ಭಾಗದ ರಾಜಕೀಯ ಕುತಂತ್ರಗಳಿಂದ ವಿದ್ಯಾ ದಾಸ ಬಾಬಾ ಇವರು ಅರ್ಚಕರಾಗಿ ಮುಂದುವರಿಯದಂತೆ ಕೆಲವು ಹುನ್ನಾರಗಳು ನಡೆಯುತ್ತಲೇ ಇವೆ ಎನ್ನುವ ಗುಮಾನಿ ಸಾರ್ವಜನಿಕರಲ್ಲಿದೆ

ಇದರಿಂದಾಗಿ ವಿದ್ಯಾ ದಾಸ ಬಾಬಾ ಅವರ ಅರ್ಚಕ ಸೇವೆ ಕಾಯಕಕ್ಕೆ ನಿರಂತರ ಅಡೆತಡೆಗಳು ಎದುರಿಸುವಂತಾಗಿದೆ, ಸರ್ಕಾರ ವಿದ್ಯಾದಾಸ ಬಾಬಾ ಅವರ ಅರ್ಚಕ ಸೇವೆಗೆ ಅಡೆತಡೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ  ಎನ್ನುವಂತಾಗಿದೆ. ಈ ಎಲ್ಲಾ ಬೆಳವಣಿಗೆಗಳು ಅಂಜನಾದ್ರಿ ಭಕ್ತರಲ್ಲಿ ಅಸಮಾಧಾನವು ಉಂಟು ಮಾಡುವಂತಾಗಿದೆ,

ವಿಪರ್ಯಾಸ ಅಂದ್ರೆ ಅಂಜನಾದ್ರಿ ದೇಗುಲ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆಗೊಂಡು ದಶಕಗಳು ಕಳೆದರು ಸರ್ಕಾರ ಅಂಜನಾದ್ರಿಗೆ ಮೂಲಭೂತ ಸೌಕರ್ಯಗಳ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋಟ್ಯಂತರ ರೂಪಾಯಿ ಹುಂಡಿ ಆದಾಯವನ್ನು ಸರ್ಕಾರ ಏನು ಮಾಡುತ್ತಿದೆ ?ಎನ್ನುವಂತಹ ಪ್ರಶ್ನೆ ಉದ್ಭವಿಸುವಂತಾಗಿದೆ, ಅಂಜನಾದ್ರಿಯ ದೇಗುಲದ ಬಳಿ ಬರುವ ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ ಕುಡಿಯುವ ನೀರಿನ ಸೌಕರ್ಯ ಸ್ನಾನ ಗೃಹಗಳ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಭಕ್ತರಿಗಾಗಿ ವಸತಿ ಊಟ ಸೌಕರ್ಯವನ್ನು ಕಲ್ಪಿಸಬೇಕಾಗಿದೆ, ದಿನದ 24×7 ವೈದ್ಯಕೀಯ ತಪಾಸಣಾ ಸೌಲಭ್ಯ ಭಕ್ತರಿಗೆ ನೀಡಬೇಕಾಗಿದೆ,ದೇಗುಲದ ಸುತ್ತಲೂ ಸರ್ಕಾರ ಸೆಕ್ಯೂರಿಟಿ ಗಾಡ್ ಗಳನ್ನು ಪೋಲಿಸ್ ಸಿಬ್ಬಂದಿ ನೇಮಿಸಬೇಕಾಗಿದೆ,

ಈ ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ನ್ಯಾಯಾಲಯದ ಆದೇಶವನ್ನು ಪಾಲಿಸಿ ಅರ್ಚಕರಾದ ವಿದ್ಯಾದಾಸ ಬಾಬಾ ಅವರಿಗೆ ರಕ್ಷಣೆ ನೀಡಬೇಕಾಗಿದೆ ಹಾಗೂ ಅಂಜನಾದ್ರಿ ಗೆ ಬರುವ ಭಕ್ತರಿಗಾಗಿ ಮೂಲರಿಭೂತ ಸೌಕರ್ಯಗಳನ್ನು ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎನ್ನುವುದು ಅಪಾರ ಭಕ್ತರ ಒತ್ತಾಸೆಯಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!