ಗಂಗಾವತಿತಾಲೂಕ ಸುದ್ದಿಗಳು

ಗಂಗಾವತಿ ತಾಲೂಕಿನ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಟನೆ

ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ದುರಾದ್ದೇಶದಿಂದ ಚಳುವಳಿ ನಿರತ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಯೋಗಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಗಂಗಾವತಿ ತಾಲೂಕಿನ ಪಂಚಮಸಾಲಿ ಸಮಾಜದ ವತಿಯಿಂ ಗಂಗಾವತಿಯ ಎಪಿಎಂಸಿಯ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನದಿಂದ ಸಿಬಿಎಸ್ ವೃತ್ತದವರೆಗೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಪಾಲ್ಗೊಂಡರು.

ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ವಿಶ್ವಾಸವಿಲ್ಲವೆಂಬಂತೆ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಕೂಡಲೇ ಪಂಚಮಸಾಲಿ ಸಮಾಜದ ಕ್ಷಮೆ ಯಾಚಿಸಿ, ದಬ್ಬಾಳಿಕೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಲ್ಮಠದ ಕೊಟ್ಟೂರು ಮಹಾಸ್ವಾಮಿಗಳು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ನಗರಸಭೆ ಅಧ್ಯಕ್ಷರಾದ ಮೌಲಾ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಚೌಡ್ಕಿ, ವೀರಶೈವ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಕಳಕನಗೌಡ ಪಾಟೀಲ್, ತಾಲೂಕ ಅಧ್ಯಕ್ಷರಾದ ಶಿವಪ್ಪ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಿಗಿ, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ನಗರಸಭೆ ಸದಸ್ಯರಾದ ಮುಸ್ತಾಕ್ ಅಲಿ ಹಾಗೂ ಪರಶುರಾಮ್ ಮಡ್ಡರ್, ಗಿರೇಗೌಡ್ರು, ಶಿವರಾಜ್ ಗೌಡ, ಮಾಜಿ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಸಿಂಗನಾಳ್, ಶ್ರೀಧರ್ ಕೆಸರಟ್ಟಿ, ಸುಭಾಷ್ ತಿಪ್ಪಾಶೆಟ್ಟಿ, ಬರಗೂರು ನಾಗರಾಜ್, ಏಕೆ ಮಹೇಶ್, ಡಿ.ಕೆ.ಆಗೋಲಿ, ಮನೋಹರ್ ಗೌಡ ಹೇರೂರು, ಯಮನೂರ್ ಚೌಡ್ಕಿ, ಚಂದ್ರು ಹೀರೂರು, ನಾಗರಾಜ್ ಚಳಗೇರಿ, ಚನ್ನವೀರನ ಗೌಡ್ರು, ದುರ್ಗಪ್ಪ ದಳಪತಿ, ವಿರೂಪಾಕ್ಷಗೌಡ ಹೀರೂರು, ದೀಪಕ್ ಬಾಂಟ್ಯ , ವೀರೇಶ್ ಸೂಳಿಕಲ್, ರೇಣುಕನ ಗೌಡ, ನಂದಾಪುರ ಮಲ್ಲಿ, ಶಿವಕುಮಾರ್ , ಮುತ್ತು ರಾಜ್ , ಅಕ್ಕಿ ಪ್ರಕಾಶ್, ನಾಗರಾಜ್ ಅಂಚಿನಾಳ್, ಗವಿ ಸಿದ್ದಪ್ಪ, ವೀರಭದ್ರನಗೌಡ್ರು, ದಾಸನಾಳ್, ವೀರೇಶಪ್ಪ ಜಿ, ಎಲ್ಐಸಿ ವಿರೂಪಾಕ್ಷಗೌಡ ಹಾಗೂ ಅನೇಕ ಸಮಾಜದ ಮುಖಂಡರು, ಹಿರಿಯರು, ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!