ಅನ್ನದಾನಕ್ಕಿಂತ ವಿದ್ಯಾದಾನ ಮಿಗಿಲು,ಎಸ್.ವಿ.ಹೂಗಾರ

ಗಂಗಾವತಿ.26 : ಗುರುವಂದನೆ ಎಂದರೇ ಕೇವಲ ಶಿಕ್ಷಕರನ್ನು ಒಂದು ವೇದಿಕೆಯಲ್ಲಿ ಕರೆದು ಸನ್ಮಾನಿಸಿ, ಗೌರವಿಸುವ ವೇದಿಕೆಯಾಗದೇ ಇಂತಹ ಗುರುವಂದನಾ ವೇದಿಕೆಗಳು ಪ್ರತಿಯೊಬ್ಬರ ಜೀವನ ಬದಲಿಸುವ ವೇದಿಕೆಗಳಾಗಬೇಕು ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಸಿ.ಕಾಲಿಮಿರ್ಚಿ ಹೇಳಿದರು.
ಅವರು ಸೋಮವಾರದಂದು ಕೊಪ್ಪಳದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆದ 2006-2007ನೇ ಸಾಲಿನ ಬಾಪೂಜಿ ಡಿಇಡಿ ಕಾಲೇಜ ಮಂಗಳೂರು ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂದು ನಾವು ನಿಮಗೆ ಸಮಾಜದಲ್ಲಿ ಬದುಕುವ ರೀತಿ, ನೀತಿಗಳ ಜೊತೆಗೆ ಶಿಸ್ತಿನ ಸಿಫಾಯಿಗಳನ್ನು ಮಾಡುವ ಮೂಲಕ ಜ್ಞಾನಾರ್ಜನೆ ನೀಡಿದ್ದರಿಂದ ಇಂದು ನೀವು ನಮ್ಮನ್ನು ಈ ವೇದಿಕೆಗೆ ಆಮಂತ್ರಿಸಿ, ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದೇವೆ ಎಂದರೇ ಅದು ಶಿಕ್ಷಕರಿಂದ, ಅಂದು ನೀವು ನಮ್ಮ ತಲೆಯಲ್ಲಿ ಬಿತ್ತಿದ ಅಕ್ಷರದಿಂದ ಎನ್ನುವದನ್ನು ಸಾಬೀತು ಪಡಿಸುವ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿರುವುದು ಸಂತಸ ತಂದಿದೆ ಎಂದರು.
ನಂತರ ಉಪನ್ಯಾಸಕ ಎಸ್.ವಿ.ಹೂಗಾರ ಮಾತನಾಡಿ, ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣಕ್ಕೂ ಬಹಳ ವತ್ಯಾಸವಿದೆ. ಹಿಂದಿನ ಶಿಕ್ಷಣದಲ್ಲಿ ಗುರುಗಳಿಗೆ ಭಯ ಪಡುವ ವಿದ್ಯಾರ್ಥಿಗಳಿದ್ದರು, ಆದರೆ ಇಂದು ಶಿಕ್ಷಕರೇ ವಿದ್ಯಾರ್ಥಿಗಳಿಗೆ ಭಯ ಪಡುವ ಸನ್ನಿವೇಶ ಎದುರಾಗಿದೆ.
ಅಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ದಂಡಿಸಿ ಶಿಕ್ಷಣ ನೀಡಲಾಗುತಿತ್ತು, ಇಂದು ಕಾಲ ಬದಲಾಗಿದೆ. ಮಕ್ಕಳಲ್ಲಿ ಮೊದಲಿನ ಚೈತನ್ಯವಿಲ್ಲಾ, ಆಟದ ಜೊತೆಗೆ ಪಾಠ ಮಾಡುತಿದ್ದೇವು ಆದರೂ ವಿದ್ಯಾರ್ಥಿಗಳು ಶಾಲೆಯಲ್ಲಿ ಸ್ಪರ್ಧಾ ಮನೋಭಾವದಿಂದ ವ್ಯಾಸಾಂಗ ಮಾಡುತಿದ್ದರು, ಸದೃಡವಾಗಿ ಆರೋಗ್ಯವಂತರರಾಗಿದ್ದರೂ, ಆದರೆ ಇಂದು ಆಟ ಕಡಿಮೆಯಾಗಿ ಕೇವಲ ಪಾಠ ಹೆಚ್ಚಾಗಿ ಮಕ್ಕಳಲ್ಲಿ ಚೈತನ್ಯ ಉತ್ಸಾಹ ಕಡಿಮೆಯಾಗುತ್ತಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದು ಪ್ರತಿಭೆ ಇದ್ದು ಪಾಲಕರು ಮಕ್ಕಳತ್ತ ಹೆಚ್ಚು ಗಮನ ನೀಡಿ ಅವರನ್ನು ಅವರ ಅಭಿರುಚಿಗೆ ತಕ್ಕಂತೆ ಪ್ರೇರೆಪಿಸಬೇಕು, ಯಾವುದೇ ಕಾರಣಕ್ಕೂ ಒತ್ತಡ ಸರಿಯಲ್ಲಾ, ದೇಶ ಕಟ್ಟುವ ನಿಟ್ಟಿನಲ್ಲಿ ಶಿಕ್ಷಕರು ನಿರ್ವಹಿಸುತ್ತಿರುವ ಕಾರ್ಯ ನಿತ್ಯ ನಿರಂತರವಾಗಿದೆ ಎಂದರು.
ಈ ಸಂದರ್ಭದಲ್ಲಿ ಗುರು ವೃಂದಕ್ಕೆ ಸನ್ಮಾನಿಸಲಾಯಿತು. ಹಲವು ವರ್ಷಗಳ ನಂತರ ಸೇರಿದ್ದ ವಿದ್ಯಾರ್ಥಿಗಳು ಶೈಕ್ಷಣಿಕ ದಿನದ ಸಂಭ್ರಮ, ಅಭ್ಯಾಸ, ಅಂದಿನ ಸಿಹಿ ಕಹಿ ಕ್ಷಣಗಳನ್ನು ನೆನಪಿಸಿಕೊಂಡರು.
ಹಳೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ, ವೃತ್ತಿ ಜೀವನ ಕುರಿತು ಪರಸ್ಪರ ಹಂಚಿಕೊಂಡರು.
ಈ ಸಂದರ್ಭದಲ್ಲಿ ಉಪನ್ಯಾಸಕ ಎಸ್.ಜಿ ಗೌಡರ, ಎಸ್.ಎಸ್ ಸಸಿಮಠ, ಕೃಷ್ಣ ವೇದಪಾಠಕ, ಎಸ್.ಬಿ ಹಳ್ಳಿಕೇರಿ, ಬಿ.ಜಿ ಗಾಣಿಗೇರ, ಜಹೀರ್ ಪಾಷ ಕಲಾಲಬಂಡಿ, ಆರ್.ಎಂ ಮುದ್ದಿ, ಸಿ.ಎ ಪಾಟೀಲ್, ಸಹಾಯಕ ಮಂಗಳಪ್ಪ,. ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ ತರಬಾಳ , ಅಯ್ಯನಗೌಡ, ವಿನಾಯ ಕಡ್ಡಿ, ವಿಜಯಕುಮಾರ ಕುಂಬಾರ,ಪ್ರವೀಣ್ ಮುತ್ತಾಳ,ಶಂಕ್ರಮ್ಮ ದೇಸಾಯಿ, ಶಂಕರ್ ಪಿ,ಬದ್ರಿನಾಥ, ಪ್ರಕಾಶ ಕುಲಕರ್ಣಿ, ಗವಿಸಿದ್ದಪ್ಪ ಮಸಾಲಿ, ರಮೇಶ, ಮಂಜುನಾಥ, ಶರಣಗೌಡ, ಪ್ರಕಾಶ ಕಾರಟಗಿ, ಕನಕಚಲ, ವಿಷ್ಣುವರ್ಧನ್, ಪ್ರಸನ್ನಕುಮಾರ, ಅಕ್ಕಮಹಾದೇವಿ ಯಾರದೊಡ್ಡಿ, ವಿಜಯಲಕ್ಷ್ಮಿ, ಸರಸ್ವತಿ, ಸುನಂದಾ ಸೇರಿದಂತೆ ಇತರರು ಇದ್ದರು.