
ಕೊಪ್ಪಳ ಜಿಬಿ ನ್ಯೂಸ್ ಕನ್ನಡ ಸುದ್ದಿ: ತಾಲೂಕಿನ ಹುಲಿಗಿಯಲ್ಲಿ ವಾಸವಾಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಮೋದಿಗಿಂತಲೂ ಮೊದಲು ಸ್ವಚ್ಛ ಭಾರತದ ಕನಸು ಕಂಡ ಪ್ರಾಮಾಣಿಕ ರಾಜಕಾರಣಿ ಟಿ ಜನಾರ್ಧನ್ ಅವರು ಹೃದಯಘಾತದಿಂದ ಸಂಜೆ ನಾಲ್ಕು ಮೂವತ್ತಕ್ಕೆ ನಿಧನರಾಗಿದ್ದಾರೆ,
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೇಲೆ ಟಿ ಜನಾರ್ಧನ್. ಅವರು ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ಸ್ವಚ್ಛತೆ ವಿಷಯದಲ್ಲಿ ಯೋಜನೆಗಳಾಗಿ ರೂಪಿಸಿದ ಹೆಗ್ಗಳಿಕೆ ಅವರಿಗಿದೆ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆ ಟಿ ಜನಾರ್ಧನವರು ಮೊದಲೇ ಕಂಡುಕೊಂಡಿದ್ದರು ಸ್ವಚ್ಚ ಭಾರತ ವಿಷಯದಲ್ಲಿ ಈಗ ತೆಗೆದುಕೊಂಡಿರುವ ಕೇಂದ್ರ ಸರಕಾರದ ನಿರ್ಧಾರಗಳನ್ನು ಟೀ ಜನಾರ್ಧನವರು 2014ರ ಮುಂಚೆ ತೆಗೆದುಕೊಂಡಿದ್ದರು ಸ್ವಚ್ಛತೆಯ ವಿಷಯದಲ್ಲಿ ಹೊಸ ಯೋಜನೆಗಳನ್ನು ತಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರು..



