ಕೊಪ್ಪಳಜಿಲ್ಲಾ ಸುದ್ದಿ

ಪ್ರಸ್ರವಣ 2025 – ರಾಷ್ಟಿಯ ಆಯುರ್ವೇದ ಸಮ್ಮೇಳನ ಉದ್ಘಾಟನೆ

ಕೊಪ್ಪಳ: ನಗರದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಚನಾ ಶಾರೀರ, ಕ್ರಿಯಾ ಶಾರೀರ, ಕಾಯಚಿಕಿತ್ಸಾ, ಪಂಚಕರ್ಮ ಹಾಗೂ ಶಲ್ಯ ತಂತ್ರ ವಿಭಾಗದಿಂದ “ಪ್ರಸ್ರ‍್ರವಣ 2025” ಎಂಬ ಶೀರ್ಷಿಕೆಯಲ್ಲಿ ರಾಷ್ಟಿçÃಯ ಆಯುರ್ವೇದ ಸಮ್ಮೇಳನ ಇಂದು ದಿನಾಂಕ 13, ಗುರುವಾರದಂದು ನಗರದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಚಾಲನೆಗೊಂಡಿತು.

ಸಮ್ಮೇಳನದ ಮುಖ್ಯ ಅತಿಥಿಗಳು ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯಗಳ ನಿರ್ದೇಶಕರಾದ ಡಾ. ಪ್ರಸನ್ನ. ಎನ್. ರಾವ್ ಹಾಗೂ ಗುಜರಾತಿನ ಎಂ.ಎ.ಎA ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಎನ್.ಗುಪ್ತಾ ಇವರುಗಳು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯಗಳ ನಿರ್ದೇಶಕರಾದ ಡಾ. ಪ್ರಸನ್ನ. ಎನ್. ರಾವ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ ತಮ್ಮ ವೃತ್ತಿಯಲ್ಲಿ ಮೂತ್ರವಹ ರೋಗಗಳಿಗೆ ಮನೆಮದ್ದಿನಿಂದ ಹಿಡಿದು ಶಸ್ತç ಚಿಕಿತ್ಸೆಯವರೆಗೂ ಆಯುರ್ವೇದೋಕ್ತÀ ವಿಶಿಷ್ಟ ಚಿಕಿತ್ಸೆಗಳ ಮಹತ್ವವನ್ನು ತಮ್ಮ ದೀರ್ಘ ಅನುಭವಗಳೊಂದಿಗೆ ಹಂಚಿಕೊAಡರು. ಆಯುರ್ವೇದದಲ್ಲಿ ‘ಬಸ್ತಿ’ ಅಂದರೆ ಮೂತ್ರವಹ ಸ್ರೋತಸ್ ಒಂದು ಪ್ರಾಣಾಯತನವಾಗಿದ್ದು, ವೈದ್ಯರು ಆಯುರ್ವೇದ ಮೂಲಕ ಉತ್ತಮ ಚಿಕಿತ್ಸೆ ನೀಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಗುಜರಾತಿನ ಎಂ.ಎ.ಎA ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಎನ್.ಗುಪ್ತಾ ಮಾತನಾಡಿ ಆಯುರ್ವೇದವನ್ನು ವೈಜ್ಞಾನಿಕವಾಗಿ ನೋಡುವುದರ ಜೊತೆಗೆ ವೈದಿಕವಾಗಿಯೂ ತಿಳಿದುಕೊಂಡು ವೈದ್ಯಕೀಯ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕೆಂದರು. ಇನ್ನೊರ್ವ ಅತಿಥಿಗಳಾದ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶೈಲಜಾ ಮಾತನಾಡಿ ಚಿಕ್ಕಮಕ್ಕಳಲ್ಲಿ ಆಗುವ ಮೂತ್ರರೋಗಗಳ ಬಗ್ಗೆ ವಿಶ್ಲೇಷಿಸಿದರು. ಸಮ್ಮೇಳನದ ವೈಜ್ಞಾನಿಕ ಗೋಷ್ಠಿಯಲ್ಲಿ ರಾಷ್ಟಿçÃಯ ಆಯುರ್ವೇದ ಸಂಸ್ಥಾನ, ಜೈಪುರದ ಡಾ. ಸ್ವಪ್ನಾ. ಬಿ. ವಿವಿಧ ಮೂತ್ರರೋಗ ಶಸ್ತç ಚಿಕಿತ್ಸೆ ಸಂಬAಧಿತ ರೋಗಗಳ ಬಗ್ಗೆ ತಿಳಿಸಿದರು ಹಾಗೂ ತಿಲಕ ಆಯುರ್ವೇದ ಮಹಾವಿದ್ಯಾಲಯ, ಪುಣೆಯ ಡಾ. ತರನ್ನುಮ್ ಪಟೇಲ್ ಇವರು ಮೂತ್ರ ಸ್ರೋತೋವಹ ಕ್ರಿಯೆಗಳ ಮೇಲೆ ವಿಶೇಷ ಉಪನ್ಯಾಸ ಮಂಡನೆ ಮಾಡಿದರು.

ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಮಹಾವಿದ್ಯಾಲಯದ ಕಾರ್ಯಾಧ್ಯಕ್ಷರಾದ ಸಂಜಯ ಕೊತಬಾಳ ಹಾಗೂ ಶ್ರೀಮತಿ ಶಾರದಮ್ಮ ಕೊತಬಾಳ ಬಿ.ಬಿ.ಎಂ ಕಾಲೇಜಿನ ನಿರ್ದೇಶಕರಾದ ಮಹೇಶ ಮುದುಗಲ್ ಇವರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ಇವರು ಮೂತ್ರರೋಗಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ಉದಾಹರಣೆಗಳೊಂದಿಗೆÀ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸಿದರು. ಕಾರ್ಯಕ್ರಮದ ಸಂಘಟಕರಾದ ಡಾ. ಕೆ.ಬಿ.ಹಿರೇಮಠ ಸ್ವಾಗತಿಸಿದರು ಹಾಗೂ ಡಾ. ರಾಜಶೇಖರ ಶೆಟ್ಟರ್ ವಂದನಾರ್ಪಣೆ ಸಲ್ಲಿಸಿದರು. ಉಪಪ್ರಾಂಶುಪಾಲರಾದ ಡಾ. ಸುರೇಶ ಹಕ್ಕಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಾಷ್ಟಿçÃಯ ಸಮ್ಮೇಳನದಲ್ಲಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ವರ್ಗ ಹಾಗೂ ರಾಜ್ಯದ 400 ಪ್ರತಿನಿಧಿಗಳು ಹೊರ ರಾಜ್ಯದ 15 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ: ನಾಳೆಯು ಸಹ ರಾಷ್ಟಿçÃಯ ಆಯುರ್ವೇದ ಸಮ್ಮೇಳನವು ಮುಂದುವರೆಯಲಿದ್ದು ನಾಳೆ ರಾಷ್ಟಿçÃಯ ಆಯುರ್ವೇದ ಸಮ್ಮೇಳನದ ವಿಶೇಷ ಉಪನ್ಯಾಸಕರಾಗಿ ಡಾ.ಅವಿನಾಶ್ ಓದುಗೌಡರ್, ಡಾ.ಶ್ರೀಪತಿ ಅಡಿಗ, ಡಾ.ಪ್ರಸನ್ನ ಕುಲಕರ್ಣಿ ಹಾಗೂ ಡಾ.ಸಿ.ಆರ್. ಯಾದವ್ ಆಗಮಿಸಲಿದ್ದಾರೆ. ಸಾಯಂಕಾಲ ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!