ಕ್ರೀಡಾ ಸುದ್ದಿ

ಶ್ರೀಕಾಂತ್ ಕಲಾಲ್ ತಂಡಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ

ಮೈಸೂರ: ನಡೆದ ವಾಡೋರಿಯ ಕರಾಟೆ ಡು ಅಸೋಸಿಯೇಷನ್ ಏರ್ಪಡಿಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀಕಾಂತ್ ಕಲಾಲ್ ತಂಡಕ್ಕೆ ಪ್ರಥಮ ಸ್ಥಾನ ಲಭಿಸಿದೆ.

ಕೊಪ್ಪಳದ ಸಾಯಿ ಬುಡಕನ್ ಕರಾಟೆ ಸಂಸ್ಥೆ ಸುಮಾರು ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಾ ಬಂದಿದ್ದು ಹಾಗೂ ಅನೇಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವ ಸಂಸ್ಥೆ ಅಂತಹ ಸಂಸ್ಥೆ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹನುಮಂತ ಮುಂಡರಗಿ ಹಾಗೂ ಗಿರೀಶ್ ಮುಂಡರಗಿ ಎಂಬ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ವೇಳೆ ಸಾಯಿ ಬುಡಕನ್ ಕರಾಟೆ ಸಂಸ್ಥೆ ಮುಖ್ಯಸ್ಥ ಶ್ರೀಕಾಂತ್ ಕಲಾಲ್ ಹಾಗೂ ಸೈಯದ್ ಹೂಗಾರ್ ತರಬೇತಿದಾರರಾದ ಮೌಲ ಮುಂಡರಗಿ ಅಗಸ್ತ್ಯ ಅರಕೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button