ಆದರ್ಶ ದಂಪತಿಗಳ ಪುರಸ್ಕಾರಕ್ಕೆ ಗೋನಾಳ ದಂಪತಿಗಳು ಆಯ್ಕೆ.

ಕೊಪ್ಪಳ: 26. ಕರ್ನಾಟಕ ರಾಜ್ಯ ಸಮಾನ ಮಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಸಮಾಜ ಸ್ಪಂದನ ಸೇವಾ ಒಕ್ಕೂಟ ಬೆಂಗಳೂರು. ಇವರ ಹಾಗೂ ಕೆ. ಎಂ. ಎಚ್. ಅಭಿಮಾನಿಗಳ ಸೇವಾ ಸಮಿತಿ ದೊಡ್ಡಬಳ್ಳಾಪುರ. ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ. 29. 6 .2025. ಭಾನುವಾರ ದಂದು. ಕೆ.ಎಂ. ಹೆಚ್. ಕನ್ವೆನ್ಷನ್ ಸಭಾಭವನದಲ್ಲಿ. ಬೆಳಗ್ಗೆ 9:00 ರಿಂದ. ಹಿರಿಯ ಲೇಖಕ ಮಾ.ಚಿ. ಕೃಷ್ಣ ರವರ ರಚಿತ. “ವನಸುಮದೋಳನ್ನ ಮನ ಕುಣಿನಲಿದಾಡುತ್ತಿರೆ.” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ. ಕೃತಿ ಲೋಕಾರ್ಪಣೆಯನ್ನು ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಬಿಡುಗಡೆ ಮಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಕಟಿಗಾನಹಳ್ಳಿ ವಿ. ಕೃಷ್ಣಪ್ಪನವರು. ವಹಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಸೋಮನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ ವಿಜಯನಗರ, ಬೆಂಗಳೂರು. ಹಾಗೂ ಶ್ರೀ ಶ್ರೀ ದಿವ್ಯಾನಂದಗಿರಿ ಸ್ವಾಮೀಜಿ ತಪಸಿಹಳ್ಳಿ ಸೇವಾಶ್ರಮ ದೊಡ್ಡಬಳ್ಳಾಪುರ ವಯಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಹುಲಿಕಲ್ ನಟರಾಜ್. ಅಧ್ಯಕ್ಷರು ವೈಜ್ಞಾನಿಕ ಪರಿಷತ್ ಇಬರು. ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಹಲವಾರು ಆದರ್ಶ ದಂಪತಿಗಳನ್ನು ಗೌರವಿಸಲಾಗುತ್ತಿದೆ. ರಾಜ್ಯ ಮಟ್ಟದ ಈ ಪುರಸ್ಕಾರಕ್ಕೆ ಕೊಪ್ಪಳದ ಹಿರಿಯ ಸಾಹಿತಿ. ಸಾಹಿತ್ಯ ಸಾಮ್ರಾಟ್, ಜಿ.ಎಸ್. ಗೋನಾಳ್. ಮತ್ತು ಶ್ರೀಮತಿ ರತ್ನಮ್ಮ . ಜಿ. ಗೋನಾಳ್. ಇವರು ಆಯ್ಕೆಯಾಗಿದ್ದಾರೆ.
ಜಿ. ಎಸ್. ಗೋನಾಳರ ಆದರ್ಶ ಜೀವನ ಮತ್ತು ದಾಂಪತ್ಯ ಜೀವನವನ್ನು ಗುರುತಿಸಿದ, ಹಿರಿಯ ಸಾಹಿತಿ, ಮಾ.ಚಿ. ಕೃಷ್ಣರವರು. ಪ್ರಶಸ್ತಿ ಪುರಸ್ಕಾರಕ್ಕೆ ಕೆ.ಎಂ. ಎಚ್. ಅಭಿಮಾನಿಗಳ ಸೇವಾ ಸಮಿತಿಯಿಂದ ಆಯ್ಕೆ ಮಾಡಿದ್ದಾರೆ. ಭಾನುವಾರ 29.6. 2025. ಆದರ್ಶ ದಂಪತಿ ಪುರಸ್ಕಾರಗೊಳಲಿದ್ದಾರೆ.
