ಮಹಿಳೆಯರು ಪ್ರಗತಿ ಪೂರಕ ಚಟುವಟಿಕೆಯಿಂದ ಸದೃಡರಾಗಿ..! ಜಗದೀಶ,

ಕಿನ್ನಾಳ : ಮಹಿಳೆಯರು ಹೆಚ್ಚು ಕ್ರೀಯಾಶೀಲರಾಗಿದ್ದು ಸ್ವ- ಉದ್ಯೋಗ ಮತ್ತಿತರ ಆರ್ಥಿಕ ಪ್ರಗತಿಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಕುಟುಂಬವನ್ನು ಮಾದರಿಯಾಗಿ ರೂಪಿಸಿಕೊಳ್ಳುವಲ್ಲಿ ಪ್ರಮುಖರಾಗಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಕೆ. ಎಚ್ ಜಗದೀಶ ಹೇಳಿದರು.
ಅವರು ಕಿನ್ನಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ವಿಕಾಸ ಕಾರ್ಯಕ್ರಮದಲ್ಲಿ ಶ್ರೀನಿಧಿ ನೂತನ ಜ್ಞಾನ ವಿಕಾಸ ಕೇಂದ್ರವನ್ನು ಉಧ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಈ ಯೋಜನೆಗಳಿಂದ ಕೊಡ ಮಾಡುವ ಮಾಹಿತಿ ಹಾಗೂ ತರಬೇತಿಯನ್ನು ಪಡೆದು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಸಕಿ ಒನ್ ಸ್ಟಾಪ್ ಸೆಂಟರ್ ನ ಆಡಳಿತಾಧಿಕಾರಿ ಯಮುನಾ ಅವರು ಮಾತನಾಡಿ ಮಹಿಳೆಯರು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಪರಿಹಾರ ಪಡೆದುಕೊಂಡು ತಮ್ಮ ಜೀವನ ನಡೆಸಬೇಕು ಎಂದು ಸದಸ್ಯರಿಗೆ ಮಾಹಿತಿ ನೀಡಿದರು.
ಈ ವೇಳೆ ಕಿನ್ನಾಳ ಗ್ರಾಮ ಪಂಚಾಯತಿ ಸದಸ್ಯೆ ಪೂರ್ಣಿಮಾ ಅವರು ಕಾರ್ಯಕ್ರಮ ಕುರಿತು ಶುಭ ಹಾರೈಸಿದರು. ಕೇಂದ್ರದಲ್ಲಿ ಜ್ಞಾನ ವಿಕಾಸ ದಾಖಲಾತಿಗಳನ್ನು ಯೋಜನಾಧಿಕಾರಿ ಹಸ್ತಾಂತರಿಸಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗೀತಾ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಭವಾನಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.