ಬಡವರನ್ನು ದರೋಡೆ ಮಾಡುತ್ತಿವೆ ಕೊಪ್ಪಳದ ಬಾರ್ ಗಳು
ಕೊಪ್ಪಳ ಜಿಬಿ ನ್ಯೂಸ್ ಕನ್ನಡ ಸುದ್ದಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವು ಆಡಿದ್ದೆ ಆಟ ಅನ್ನುತ್ತಿವೆ ಇಲ್ಲಿಯ ಬಾರ್ ಗಳು, ಬಡವರು ಕುಡಿಯುವ ಮಧ್ಯಕ್ಕೆ 40 ರಿಂದ 50 ರೂಪಾಯಿಗಳು ಎಚ್ಚುವರಿ ಮಾರಾಟ ಮಾಡುತ್ತಿದ್ದರು ಕೂಡ ಅಬಕಾರಿ ಅಧಿಕಾರಿಗಳು ಕಣ್ಣು ತೆರೆದು ನೋಡುತ್ತಿಲ್ಲ.
ದಿನಾಪೂರ್ತಿ ದುಡಿದು ಭಾರಗಳಿಗೆ ಹಣ ವ್ಯೆಯಿಸಿ ಮನೆಯ ಊಟಕ್ಕೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ,
ಕೊಪ್ಪಳದ ಬಾರ್ಗಳು ಯಾವ ರೀತಿ ಕೆಲಸ ಮಾಡುತ್ತಿವೆ ಅಂದರೆ ಕೊಟ್ಟ ಹಣಕ್ಕೆ ಯಾವುದೇ ರಸೀದಿ ನೀಡುವುದಿಲ್ಲ ಮತ್ತು ಎಂ ಆರ್ ಪಿ ಬೆಲೆಗೆ ಮಾರಾಟ ಮಾಡಬೇಕು ಎಂದು ಕಾನೂನು ಇದ್ದರೂ ಕೂಡ ಅದನ್ನು ಲೆಕ್ಕಿಸುವುದಿಲ್ಲ ನಮಗೆ ಇಷ್ಟ ಬಂದಂತೆ ಮಧ್ಯದ ಬಾಟಲು ಮೇಲೆ ರೇಟ್ ಫಿಕ್ಸ್ ಮಾಡುತ್ತಾರೆ ಇಲ್ಲಿಯ ಬಾರ್ ಮಾಲೀಕರು,
ಇದಕ್ಕೆ ಸಾತ್ ನೀಡುತ್ತಿವೆ ಅಬಕಾರಿ ಇಲಾಖೆ ಅಧಿಕಾರಿಗಳು, ಇಲಾಖೆಗೆ ತಿಂಗಳಿಗೆ ಇಷ್ಟು ಅಂತ ಮಾಮೂಲು ಕೊಟ್ಟುಬಿಟ್ಟರೆ ಬಾರ್ ಓನರ್ಗಳು ಏನೇ ಮಾಡಿದರು ಅಧಿಕಾರಿಗಳು ಚಕಾರ ಎತ್ತುವುದಿಲ್ಲ ಕೊಪ್ಪಳದ ಅಬಕಾರಿ ಇಲಾಖೆ, ಕೂಡಲೇ ಎಲ್ಲಾ ಭಾರಗಳಿಗೆ ಅಬಕಾರಿ ಇಲಾಖೆ ಸೂಚನೆ ನೀಡಬೇಕು, ಅದು ಯಾವ ಸೂಚನೆ ಅಂದರೆ ಕಡ್ಡಾಯವಾಗಿ ಮಧ್ಯದ ಬಾಟಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಸರಿಯಾದ ಬಿಲ್ ನೀಡಬೇಕು ಮತ್ತು ಎಂ ಆರ್ ಪಿ ಗಿಂತ ಜಾಸ್ತಿ ದುಡ್ಡು ತೆಗೆದುಕೊಳ್ಳುವಂತಿಲ್ಲ ಈ ರೀತಿಯ ಸೂಚನೆ ಕೊಪ್ಪಳದ ಅಬಕಾರಿ ಇಲಾಖೆ ಕೂಡಲೇ ನೀಡದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹ ಪಡಿಸಿದ್ದಾರೆ.
ಅಬಕಾರಿ ತಾಲೂಕ ಮುಖ್ಯ ಅಧಿಕಾರಿ ಮಂಜುನಾಥ್ ಗಲಗಲಿ ಅವರಿಗೆ ಈ ವಿಷಯದ ಬಗ್ಗೆ ಮಾತನಾಡಿದರೆ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ . “ಬದಲಾಗಿ ನಾನು ಚುನಾವಣೆ ಮುಗಿದ ತಕ್ಷಣ ಇಲ್ಲಿಂದ ಹೊರಡುತ್ತೇನೆ ಯಾರು ಏನೇ ಮಾಡಿದರು ಐ ಡೋಂಟ್ ಕೇರ್” ಎಂದು ಮುಲಾಜಿಲ್ಲದೆ ಮಾತನಾಡುತ್ತಾನೆ.