ರಾಜಕಾರಣದಲ್ಲಿ ತತ್ವ ಸಿದ್ದಾಂತದ ಅರ್ಥ ಏನು?
ಈ ದೇಶವನ್ನು ಮುನ್ನುಡಿಸುವ. ಜನಸಾಮಾನ್ಯರಿಗೆ ಅನುಕೂಲವಾಗುವಂಥ. ಸಂವಿದಾನದ ಆಶಯವನ್ನು ಕಾಪಾಡಿಕೊಂಡು ಹೋಗುವಂತದ್ದು ರಾಜಕೀಯ ಪಕ್ಷಗಳು. ರಾಜಕಾರಣಿಗಳ ಕರ್ತವ್ಯ. ಆದರೆ ಈಗಿನ ಸ್ಥಿತಿ ನೋಡಿದರೆ ರಾಜಕಾರಣದಲ್ಲಿ ಇಂಥದೆ ಸಿದ್ದಾಂತ ಐತಿ ಹೇಳುವ ಧೈರ್ಯ. ಈ ಸಿದ್ದಾಂತಕ್ಕೆ ಬದ್ದವಾಗಿ ರಾಜಕಾರಣ ಮಾಡ್ತೀನಿ ಎನ್ನುವವರ ಸಂಖ್ಯೆ ಎಷ್ಟಿದೆ ಎಂಬುವುದನ್ನು ಬೆರಳಣಿಕೆಯಲ್ಲಿ ಎಣಿಕೆ ಮಾಡಬಹುದು.
ಈ ಹಿಂದೆ ರಾಜಕಾರಣಿಗಳಲ್ಲಿ ರಾಜಕೀಯ ಸಿದ್ದಾಂತ, ಅವರ ಪ್ರತಿನಿಧಿಸುವ ಪಕ್ಷದ ತತ್ವಗಳ ಪಾಲನೆ ಮಾಡುತ್ತಿದ್ದರು. ಆದರೆ ಈಗ ತಮ್ಮ ಸ್ವಂತ ಏಳ್ಗೆ. ತಮ್ಮ ಕುಟುಂಬದ ಏಳ್ಗೆಗಾಗಿ ಇವತ್ತು ಒಂದು ಪಕ್ಷದಲ್ಲಿದ್ದವರು ನಾಳೆ ಇನ್ನೊಂದು ಪಕ್ಷದಲ್ಲಿರುತ್ತಾರೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜೀಗಿದ ವ್ಯಕ್ತಿಯನ್ನು ಕೇಳಿ ಆತ ಹೇಳೋದು ನಾನು ಈ ಪಕ್ಷದ ತತ್ವ ಸಿದ್ಷಾಂತ ಒಪ್ಪಿಕೊಂಡು ಸೇರ್ಪಡೆಯಾಗಿದ್ದೇನೆ ಎನ್ನುತ್ತಾನೆ. ಆ ವ್ಯಕ್ತಿಯನ್ನು ಸೇರಿಸಿಕೊಂಡ ಮುಖಂಡ ಸಹ ಇವರು ನಮ್ಮ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ಬಂದಿದ್ದಾರೆ ಎಂದು ಹೇಳುತ್ತಾರೆ. ಹೀಗೆ ಹೇಳುವ ಮಾತುಗಳು ತೀರಾ ಬಾಲೀಶವಾಗಿರುತ್ತವೆ. ಹೇಳುವವರಿಗೂ ಗೊತ್ತಿದೆ. ನಾವು ಹೇಳುತ್ತಿರುವುದು ಹಸಿ ಸುಳ್ಳು ಎಂಬುವುದು.
ಇತ್ತೀಚಿಗೆ ರಾಜ್ಯದಲ್ಲಿ 2-3 ಜನ ಪಕ್ಷಾಂತರ ಮಾಡಿದರು. ಅವರು ಸಹ ಮೇಲಿನಂತೆ ಹೇಳಿದರು. ಆಗ ನಾನು ವಿಚಾರ ಮಾಡಿದೆ ಏನು ಇವರು ಬಿಟ್ಟ ಪಕ್ಷದ ತತ್ವ ಸಿದ್ಷಾಂತ, ಏನು ಇವರು ಸೇರಿಕೊಂಡ ಪಕ್ಷದ ತತ್ವ ಸಿದ್ದಾಂತ ಎಂದು. ಇದನ್ನು ಕ್ಲಾರಿಫೈ ಮಾಡಿಕೊಳ್ಳಲು ರಾಜಕೀಯ ಪಕ್ಷಗಳ ಮುಖಂಡರಲ್ಲಿ ಏನು ನಿಮ್ಮ ಪಕ್ಷದ ತತ್ವ ಸಿದ್ದಾಂತ ಕೇಳಿದೆ. ಆಗ ಕೆಲವರು ಏನೇನೊ ಸಾಬುಬು ಹೇಳಿ ಜಾರಿಕೊಂಡರು. ಇನ್ನೂ ಕೆಲವರು ನೇರವಾಗಿ ಗೊತ್ತಿಲ್ಲ ಎಂದರು. ಇನ್ಬೂ ಕೆಲವರು ಅಧಿಕಾರ ಹಿಡಿಯೋದೆ ನಮ್ಮ ತತ್ವ ಸಿದ್ದಾಂತ ಎಂದರು.
ನಿನ್ನೆಯ ದಿನ ಒಂದು ಪಕ್ಷದಲ್ಲಿದ್ದು, ಪಕ್ಷ, ಪಕ್ಷದ ಮುಖಂಡರ ಅಭಿಮಾನಿ ನಾನು ಎಂದು ಹೊಗಳಿದವರು. ಮರುದಿನ ಇನ್ನೊಂದು ಪಕ್ಷಕ್ಕೆ ಜಂಪ ಮಾಡಿದ ತಕ್ಷಣ ತಾವು ಬಿಟ್ಟು ಪಕ್ಷದ ತತ್ವ ಸಿದ್ದಾಂತ ಸರಿ ಇಲ್ಲ.ಮುಖಂಡರು ಸರಿ ಇಲ್ಲ ಎಂದು ಟೀಕಿಸುತ್ತಾರೆ.ಹಾಗಾದರೆ ನನ್ನ ಕೇವಲ ಅನುಮಾನ 12-24 ತಾಸಿನಲ್ಲಿ ಒಂದು ಪಕ್ಷದ ತತ್ವ ಸಿದ್ದಾಂತ ಅರಿತುಕೊಂಡ್ರಾ. ಅಥವಾ ಒಂದು ಪಕ್ಷ ಬಿಟ್ಟು ಬಂದ ತಕ್ಣಣ ಆ ಪಕ್ಷದ ಮುಖಂಡರು ಸರಿ ಇಲ್ಲದೆ ಹೋದದ್ದು ಹೇಗೆ ಎಂಬುವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಇವತ್ತು ರಾಜಕಾರಣ ಎಂಬುವುದು ಒಂದು ವೃತ್ತಿಯಾಗಿದೆ. ಗರಿ ಗರಿ ಖಾದಿ ಅಂಗಿಕೊಂಡು ರಾಜಕೀಯ ಮುಖಂಡರ ಹಿಂಬಾಲಕರಾಗಿ ತಿರುಗಾಡುವುದು ಒಂದು ವೃತ್ತಿ. ಇಲ್ಲಿ ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ರಾಜಕಾರಣಿಗಳ ಹಿಂದೆ ತಿರುಗಾಡುವುದು ರಾಜಕೀಯ ವೃತ್ತಿ ಎಂಬಂತಾಗಿದೆ. ಕೆಲವು ಜನ ತಮ್ಮ ಇಡೀ ಜೀವನವೇ ರಾಜಕಾರಣ ಎನ್ನುವಂತೆ ಇದ್ದಾರೆ. ಅವರಲ್ಲಿ ಬೇರೆ ಯಾವುದೇ ನಿರ್ದಿಷ್ಠ ಆದಾಯ ತರುವ ವೃತ್ತಿ ಇಲ್ಲದಿದ್ದರು. ರಾಜಕಾರಣದಿಂದಲೇ ಜೀವನ ನಿರ್ವಹಣೆ ಮಾಡುವವರನ್ನು ಕಾಣುತ್ತೇವೆ.
ಇನ್ನೂ ಚುನಾವಣೆ ಸಮಯದಲ್ಲಿ ನಾವು ನಮ್ಮ ಪಕ್ಷದ ಸಿದ್ದಾಂತ ತತ್ವ ಇದು ಇದಕ್ಕೆ ನಾವು ಬದ್ದರಾಗಿದ್ದೇವೆ. ಈ ರೀತಿ ಬದ್ದರಾವದರು ಮಾತ್ರ ನಾವು ಟಿಕೆಟ್ ನೀಡುತ್ತೇವೆ. ನಮ್ಮ ಪಕ್ಷದ ಸಿದ್ದಾಂತದಂತೆ ನಡೆದುಕೊಂಡು ಜನರಿಂದ ಆಯ್ಕೆಯಾಗುತ್ತೀವಿ ಎಂದು ಹೇಳುವ ರಾಜಕೀಯ ಪಕ್ಷಗಳು ಕಡಿಮೆಯಾಗಿವೆ. ಇಲ್ಲಿ ಹಣವಂತನಾಗಿರಬೇಕು. ಚುನಾವಣೆಯಲ್ಲಿ ಹಣ ಚೆಲ್ಲಿ ಆಯ್ಕೆಯಾಗಿ ಅಧಿಕಾರ ಹಿಡಿಯಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆ.
ಈ ತತ್ವ ಸಿದ್ದಾಂತಗಳು ಹಾಳೆಯಲ್ಲಿ ಓದಲು. ವೇದಿಕೆಯನ್ನು ಮಾತನಾಡಲು ಮಾತ್ರ ಸೀಮಿತವಾಗಿದೆ. ಈ ಧೋರಣೆ ಮುಂದುವರಿದರೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗುತ್ತದೆ.
ಶರಣಪ್ಪ ಬಾಚಲಾಪುರ
ಕೊಪ್ಪಳ ಹಿರಿಯ ಪತ್ರಕರ್ತರು