ಕಾರಟಗಿ ತಹಸಿಲ್ ಕಚೇರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ನವರ 247 ಜಯಂತೋತ್ಸವ ಚೆನ್ನಮ್ಮನವರು ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ….. ತಹಸಿಲ್ದಾರ್ ಕುಮಾರಸ್ವಾಮಿ

ವರದಿ ಸುಂದರರಾಜ್ BA
ಕಾರಟಗಿ ; ರಾಣಿ ಚೆನ್ನಮ್ಮ ನವರು ಬ್ರಿಟಿಷರ ವಿರುದ್ಧದ ಭಾರತ ಸ್ವತಂತ್ರ ಹೋರಾಟದಲ್ಲಿ ಅವರ ಧೈರ್ಯ ಸಾಹಸಗಳನ್ನು ತೋರುವ ಮೂಲಕ ಸ್ವತಂತ್ರ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ತಹಶೀಲ್ದಾರರಾದ ಕುಮಾರಸ್ವಾಮಿಯವರು ಹೇಳಿದರು.ಕಾರಟಗಿ ತಹಸಿಲ್ ಕಚೇರಿಯಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ 247 ನೆಯ ಜಯಂತೋತ್ಸವ ಹಾಗೂ 201 ನೆ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಚೆನ್ನಮ್ಮ ನವರ ದೇಶಭಕ್ತಿಯು ಮಹಿಳಾ ಹೋರಾಟಗಾರ್ತಿಯಾಗಿ ಇತರರಿಗೆ ಸ್ಪೂರ್ತಿಯಾಗಿದ್ದರು. ಇಂದಿನ ಮಹಿಳಾ ಸಬಲೀಕರಣದ ಚಳುವಳಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದರು. ಸಮಾಜದ ಮುಖಂಡರುಗಳು ಚನ್ನಮ್ಮನವರ ಭಾವಚಿತ್ರಕ್ಕೆ ಹೂ ನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು.


ನಂತರ ಪಟ್ಟಣದ ಬಸವೇಶ್ವರ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಗೌರವವನ್ನು ಸೂಚಿಸಲಾಯಿತು.ನೆರದಿರುವ ಸಮಾಜದ ಮುಖಂಡರುಗಳು ರಾಣಿ ಚೆನ್ನಮ್ಮ ಅವರ ದೇಶಭಕ್ತಿ ತ್ಯಾಗ ಗುಣಗಳನ್ನು ಹಾಡಿ ಹೊಗಳಿದರು. ಈ ಸಂದರ್ಭದಲ್ಲಿ
ಚನ್ನಬಸಪ್ಪ ಸುಂಕದ ಹಿರಿಯರಾದ, ಜಗದೀಶಪ್ಪ ಅವರಾದಿ, ಶರಣೆಗೌಡ ಯರಡೋಣ,, ತಾಲೂಕ ಅಧ್ಯಕ್ಷ ಪಾಲಾಕ್ಷಪ್ಪ ಕೆಂಡದ, ವಿರುಪಾಕ್ಷಪ್ಪ, ಶಿವಶರಣಪ್ಪ ಶಿವ ಪೂಜಿ, ಪಂಪಾಪತಿ ಜಂತಕಲ್, ಬಸನಗೌಡ ತೆಂಗಿನಕಾಯಿ, ಈಶಪ್ಪ ಇಟ್ಟಂಗಿ, ದೊಡ್ಡಪ್ಪ ಕಂದಕೂರ, ಶರಣು ಅಯೋಧ್ಯ,,ವೀರನ ಗೌಡ ಮಾಲಿ ಪಟೇಲ್,ನಾಗರಾಜ್ ಬೂದುಗುಂಪ, ಶರಣಪ್ಪ ಅಂಗಡಿ, ತ್ರಿಲೋಚನ ಕೋಲ್ಕಾರ್, ಶಿವು ದಾನ ಗೌಡ,ದೇವಪ್ಪ, ಅಮರೇಶ್ ಪಾಟೀಲ್, ಸಂಗನಗೌಡ, ಚನ್ನಪ್ಪ ಶೆಟ್ಟರ್, ಕಲ್ಯಾಣಪ್ಪ ರೌಡಕುಂದ, ಮತ್ತಿತರ ಸಮಾಜದ ಮುಖಂಡರು ಭಾಗವಹಿಸಿದ್ದರು




