ಭೀಮೋತ್ಸವ ಕಾರ್ಯಕ್ರಮದಲ್ಲಿ ಮೊಳಗಿತು ಜೈ ಭೀಮ್ ಜೈ ಭೀಮ್ ಭೀಮವಾದ ಬಂಧುಗಳ ಅರ್ಥಪೂರ್ಣ ಆಚರಣೆ
ವರದಿ: ಸುಂದರರಾಜ್ BA ಕಾರಟಗಿ

ಭೀಮೋತ್ಸವ ಕಾರ್ಯಕ್ರಮದಲ್ಲಿ ಮೊಳಗಿತು ಜೈ ಭೀಮ್ ಜೈ ಭೀಮ್ ಭೀಮವಾದ ಬಂಧುಗಳ ಅರ್ಥಪೂರ್ಣ ಆಚರಣೆ
ಕಾರಟಗಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮಾವಾದ ) ಸಂಘಟನೆ ವತಿಯಿಂದ ಕಾರಟಗಿ ಪಟ್ಟಣದ ಪದ್ಮಶ್ರೀ ಫಂಕ್ಷನ್ ಹಾಲಿನಲ್ಲಿ ಸಂವಿಧಾನ ಶಿಲ್ಪಿ ಬಿ ಆರ್ ಡಾಕ್ಟರ್ ರವರ 134 ನೆ ಜಯಂತಿ ಮತ್ತು ಡಾ.ಬಾಬು ಜಗಜೀವನ ರಾಮ್ ರವರ 118 ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ಕೆಪಿಎಸ್ ಶಾಲೆಯ ಹತ್ತಿರ ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಇವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪ್ರಾರಂಭವಾದ ಮೆರವಣಿಗೆ ನೂತನ ಬಸ್ ನಿಲ್ದಾಣ ಕನಕದಾಸ ವೃತ್ತದ ಮೂಲಕ ಸಾಗಿತು, ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಇವರ ಭವ್ಯ ಭಾವಚಿತ್ರಗಳನ್ನು ಅಲಂಕಾರ ಮಾಡಿದ ಟ್ರಾಕ್ಟರ್ ನಲ್ಲಿ ಇರಿಸಿ ನೂರಾರು ಭೀಮವಾದ ಸಂಗಾತಿಗಳ ಜೈ ಭೀಮ್ ಘೋಷಣೆಗಳ ಮೂಲಕ ರಸ್ತೆ ಯುದ್ಧಕ್ಕೂ ನೀಲಿ ತೋರಣಗಳ ಸ್ವಾಗತ ಮಾಲಿಕೆಗಳ ಮೂಲಕ ಭೀಮ ಘರ್ಜನೆಯ ಎತ್ತಿದ ಕೈಯ ಮುಷ್ಟಿಯಲಿ ಬಿಗಿದಿಟ್ಟ ಸ್ವಾಭಿಮಾನದ ಪ್ರತೀಕವಾದ ನೀಲಿ ಬಾವುಟಗಳ ಝೇಂಕಾರಗಳೊಂದಿಗೆ ಪದ್ಮಶ್ರೀ ಫಂಕ್ಷನ್ ಹಾಲ್ ವರೆಗೆ ಮೆರವಣಿಗೆ ನಡೆಯಿತು.
ದಿ.ತಿಪ್ಪಣ್ಣ ಆರತಿ ವೇದಿಕೆಯಲ್ಲಿ ಕಾರ್ಯಕ್ರಮವನ್ನು ತುಂಬಾ ಅರ್ಥಪೂರ್ಣವಾಗಿ ನಡೆಸಲಾಯಿತು.ವೇದಿಕೆಯ ಬಲಭಾಗದ ಮುಂಭಾಗದಲ್ಲಿ ಬಿ ಆರ್ ಅಂಬೇಡ್ಕರ್ ಅವರ ಮತ್ತು ಡಾ.ಬಾಬು ಜಗಜೀವನ ಜಗಜೀವನ ರಾಮ್ ಅವರ ಭಾವಚಿತ್ರಗಳಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಗತಿಪರ ಚಿಂತಕರು, ಸಮಾಜದ ಮುಖಂಡರುಗಳು, ಜ್ಞಾನಿಗಳು, ವಾಗ್ಮಿಗಳು, ಭಾಷಣಕಾರರು ಗಳು ಸಂಘಟನಾಕಾರರು ಹೂವಿನ ಮಳೆಗೆರೆದು ಧನ್ಯತಾ ಭಾವನೆ ಪಡೆದರು ನಂತರ ದೀನ ದಲಿತ ಬಡವರ ಬಾಳಲ್ಲಿ ಅಜ್ಞಾನ ತೊಲಗಿಸಿ ಸುಜ್ಞಾನದ ಬೆಳಕು ಪಸರಿಸಿದ ಮಹಾತ್ಮರ ನೆನೆದು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಕಾರ್ಯಕ್ರಮದಲ್ಲಿ ವಿಶ್ವಜ್ಞಾನಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿಯ ಅಂಗವಾಗಿ ಸಂವಿಧಾನ ಜಾಗೃತಿ ಮತ್ತು ಬಾಬಾ ಸಾಹೇಬರ ಚಿಂತನೆಗಳನ್ನು ಎಲ್ಲಾ ಯುವ ಜನತೆ ಹಾಗೂ ಎಲ್ಲಾ ಮಹಿಳೆಯರು ಅರ್ಥ ಮಾಡಿಕೊಂಡು ಬಾಬಾ ಸಾಹೇಬರು ತೋರಿಸಿದ ದಾರಿಯಲ್ಲಿ ನಡೆಯಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಮರಿಸ್ವಾಮಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ನಂತರ ಭೀಮೋತ್ಸವ ಕಾರ್ಯಕ್ರಮ ಕುರಿತು
ವೀರೇಶ ವಕೀಲರು ಈಳಿಗನೂರು(ಸದಸ್ಯರು, ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಹಾಗೂ ಮೇಲುಸ್ತುವಾರಿ ಉಪ ವಿಭಾಗ ಮಟ್ಟದ ಸಮಿತಿ, ಕೊಪ್ಪಳ ಜಿಲ್ಲೆ) ಇವರು ಮಾತನಾಡಿ
ಸಂವಿಧಾನದ ಮೂಲಕ ಮೀಸಲಾತಿಯನ್ನು ಪಡೆದು ಶಿಕ್ಷಣ ಪಡೆದಂತಹ ಪ್ರತಿಯೊಬ್ಬ ಯುವಕರು ಸಮಾಜದಲ್ಲಿ ಆಗುತ್ತಿರುವ ದೌರ್ಜನ್ಯದ ಬಳಕೆಗಳ ವಿರುದ್ಧ ಅಸ್ಪೃಶ್ಯತೆ ಮತ್ತು ಮೂಡನಂಬಿಕೆಗಳನ್ನು ವಿರುದ್ಧ ಜಾಗೃತಿ ಮೂಡಿಸದೆ ಇದ್ದರೆ ಅಂತಹ ವ್ಯಕ್ತಿ ಇದ್ದರೂ ಸತ್ತಂತೆ ಎಂದು ಬಿ ಆರ್ ಅಂಬೇಡ್ಕರ್ ಅವರ ಮಾತುಗಳ ವಿವರಣೆ ನೀಡಿ ಮಾತನಾಡಿದ ಅವರು ಸಂವಿಧಾನದ ಮೀಸಲಾತಿಯಲ್ಲಿ ವಿದ್ಯೆ ಕಲಿತು, ನೌಕರಿ ಪಡೆದು, ಮತ್ತು ಗುತ್ತಿಗೆದಾರನಾಗಿ ಹಣಗಳಿಸಿ ಶ್ರೀಮಂತನಾದರೆ ಅದು ನಿಮ್ಮ ಮತ್ತು ನಿಮ್ಮ ಕುಟುಂಬಕ್ಕೆ ಸೀಮಿತವಾದರೆ ದಲಿತ ಸಮಾಜ ಅಭಿವೃದ್ಧಿಯತ್ತಾ ಸಾಗುವುದಿಲ್ಲ ಆದರೆ ಕಲಿತ ವಿದ್ಯೆ ಮತ್ತು ಜ್ಞಾನವನ್ನು ದಲಿತ ಸಮಾಜಕ್ಕೆ ಧಾರೆ ಎರೆದು ನಿಮ್ಮ ಜೊತೆ ಸಮಾಜವನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ಅಂಬೇಡ್ಕರರ ಕನಸು ನನಸಾಗುತ್ತದೆ ಎಂದರು
ಮುಂದುವರೆದು ಮಾತನಾಡಿ ನಾವು ದೇವಸ್ಥಾನ ಮುಂದೆ ಕ್ಯೂ ನಿಲ್ಲುವ ಬದಲು ಗ್ರಂಥಾಲಯದ ಮುಂದೆ ನಿಂತರೆ ದೇಶ ಅಭಿವೃದ್ಧಿಯಾಗುತ್ತೆ ಎನ್ನುವ ಬಾಬಾಸಾಹೇಬರ ಮಾತಿನಂತೆ ದಲಿತ ಜನಗಳಾದ ನಾವು ನಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವುದನ್ನು ನಿಲ್ಲಿಸಬೇಕು,ವಿದ್ಯಾವಂತರನ್ನಾಗಿ ಮಾಡಬೇಕು ಉತ್ತಮ ನಡತೆ ಕಲಿಸಿ ಸುಸಂಸ್ಕೃತರನ್ನಾಗಿ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ಶಿವರಾಜ್ ಎಸ್ ತಂಗಡಗಿ (ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ರವರ ಅನುಪಸ್ಥಿತಿಯಲ್ಲಿ ಪರಶುರಾಮ್ ನೀಲನಾಯಕ್ (ಸಂಸ್ಥಾಪಕರು, ಡಿಎಸ್ಎಸ್ ಭೀಮವಾದ) ರಮೇಶ್ ಸುಗ್ಗೇನಹಳ್ಳಿ ಮುಖ್ಯ ಭಾಷಣಕಾರರು (ಪ್ರಗತಿ ಪ್ರಚಂತಕರು) ಯಲ್ಲಪ್ಪ ಹಳೆಮನಿ (ರಾಜ್ಯಾಧ್ಯಕ್ಷರು, ಕೋರ್ ಕಮಿಟಿ ಡಿಎಸ್ಎಸ್ ಭೀಮವಾದ) ದೇವಪ್ಪ ಬಾವಿಕಟ್ಟಿ (ತಾಲೂಕ ಅಧ್ಯಕ್ಷರು ಗ್ಯಾರಂಟಿ ಯೋಜನೆ ಕಾರಟಗಿ) ಮೌನೇಶ್ ದಡೇಸುಗೂರು (ಜಿಲ್ಲಾಧ್ಯಕ್ಷರು, ಬಿಜೆಪಿ ಯುವ ಮೋರ್ಚ) ವಿರೂಪಾಕ್ಷಪ್ಪ ಹಿರೇಮಠ (ಚೇರ್ಮನ್ ಏಕಲವ್ಯ ಗುರುಕುಲ ವಿದ್ಯಾಸಂಸ್ಥೆ) ಯಮನೂರಪ್ಪ ಮರಳಿ ಇನ್ನೂ ಅನೇಕ ಅಥಿತಿಗಳು ಇದ್ದರು