ಗಂಗಾವತಿ

ಅಕ್ರಮ ಮರಳು.! ಮದ್ಯ.! ಜೂಜಾಟ ಗಳ ವಿರುದ್ಧ ಧ್ವನಿ ಎತ್ತಿದ ಕೆ ಕೆ ಡಿ ಎಸ್ ಎಸ್ .! ಡಿ.ವೈ.ಎಸ್.ಪಿ ಕಚೇರಿಗೆ ಮನವಿ

ವರದಿ ಸುಂದರರಾಜ್ BA. ಕಾರಟಗಿ

ಅಕ್ರಮ ಮರಳು.! ಮದ್ಯ.! ಜೂಜಾಟ ಗಳ ವಿರುದ್ಧ ಧ್ವನಿ ಎತ್ತಿದ ಕೆ ಕೆ ಡಿ ಎಸ್ ಎಸ್ .! ಡಿ.ವೈ.ಎಸ್.ಪಿ ಕಚೇರಿಗೆ ಮನವಿ

ಗಂಗಾವತಿ: ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಾದ್ಯಂತ ಅನಧಿಕೃತ ಮರಳು ಪಾಯಿಂಟ್‌ಗಳು, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಾಣಿಕೆ, ಅಕ್ರಮ ಮದ್ಯ ಮಾರಾಟ, ಅಕ್ರಮ ಪಡಿತರ ಧಾನ್ಯಗಳ ಸಾಗಾಣಿಕೆ, ಅಕ್ರಮ ಜೂಜಾಟಗಳಾದ ಮಟ್ಕಾ, ಇಸ್ಪೀಟ್ ದಂಧೆ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಅವುಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಒತ್ತಾಯಿಸಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿಯವರ ನೇತೃತ್ವದಲ್ಲಿ ಮೇ-21 ಬುಧವಾರ ಗಂಗಾವತಿ ಪೊಲೀಸ್ ಉಪವಿಭಾಗ ಕಛೇರಿ ಮುಂದೆ ಪ್ರತಿಭಟನೆ ನಡೆಯಿತು

ನಗರದ ಶ್ರೀಕೃಷ್ಣದೇವರಾಯ ವೃತ್ತದಿಂದ ಪೊಲಿಸ್ ಠಾಣೆವರೆಗೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಘೋಷಣೆ ಕೂಗುತ್ತಾ, ಗಂಗಾವತಿ ಪೊಲೀಸ್ ಉಪವಿಭಾಗ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು ಅಕ್ರಮ ಮರಳು ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದ್ದು, ಅಕ್ರಮ ಜೂಜಾಟ, ಅಕ್ರಮ ಚಟುವಟಿಕೆಗಳಿಗೆ ಬಡಕುಟುಂಬಗಳು ಬಲಿಯಾಗಿ ಬೀದಿಪಾಲಾಗುತ್ತಿವೆ. ಗಂಗಾವತಿ ಕನಕಗಿರಿ ಕಾರಟಗಿ ತಾಲ್ಲೂಕುಗಳಲ್ಲಿ ಅನಧಿಕೃತವಾಗಿ ಮರಳು ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದ್ದು, ಅದೇರೀತಿ ಅಕ್ರಮ ಜೂಜಾಟಗಳಾದ ಮಟ್ಕಾ, ಇಸ್ಪೀಟ್ ಕ್ಲಬ್‌ಗಳು ಹೆಗ್ಗಿಲ್ಲದೇ ನಡೆಯುತ್ತಿದ್ದು, ಈ ದಂಧೆಯಲ್ಲಿ ಪ್ರಮುಖರು, ಪ್ರಭಾವಿಗಳು ಭಾಗಿಯಾಗಿದ್ದು, ಈ ಎಲ್ಲಾ ಅಕ್ರಮ ದಂಧೆಗಳನ್ನು ತಡೆಯಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರಬೇಕಾಗಿದೆ. ಕಾರಣ ಪೊಲೀಸ್ ಇಲಾಖೆ ವಿಶೇಷವಾದ ಪೊಲೀಸ್ ತಂಡವನ್ನು ರಚಿಸಿ, ಅಕ್ರಮ ಚಟುವಟಿಕೆಗಳ ತಾಣಗಳ ಮೇಲೆ ದಾಳಿ ಮಾಡಿ, ಅಕ್ರಮ ದಂಧೆಕೋರರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಲಾಯಿತು

ಇದೇ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ಈ ಅಕ್ರಮ ದಂಧೆ, ಜೂಜಾಟ ಹಾಗೂ ಅಕ್ರಮ ಚಟುವಟಿಕೆಗಳ ಜೊತೆಗೆ ಸರ್ಕಾರದ ಮಹತ್ತರ ಯೋಜನೆಯಾದ ಅನ್ನಭಾಗ್ಯದಡಿ ಬಡವರಿಗೆ ನೀಡಲಾಗುವ ಪಡಿತರ ಅಕ್ಕಿಯನ್ನು ಹಣದಾಸೆಗೆ ಕೆಲವರು ಶ್ರೀಮಂತರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ, ದೊಡ್ಡ ದೊಡ್ಡ ಗೋದಾಮುಗಳಲ್ಲಿ ಸಂಗ್ರಹಿಸಿ, ಬೇರೆ ಬೇರೆ ಜಿಲ್ಲೆ, ರಾಜ್ಯ ಹಾಗೂ ತಾಲ್ಲೂಕುಗಳಿಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡಲಾಗುತ್ತಿದ್ದು, ಪಡಿತರ ಅಕ್ಕಿಗಳಿಂದ ಶ್ರೀಮಂತರು ಹಣ ಗಳಿಸುತ್ತಿದ್ದಾರೆ ಹೊರತು, ಈ ಯೋಜನೆಯಿಂದ ಬಡಕುಟುಂಬಗಳು ವಂಚನೆಗೊಳಗಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೂಡಲೇ ಅಕ್ರಮ ಪಡಿತರ ದಾಸ್ತಾನು ಮಾಡಿ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಗೌರವಾಧ್ಯಕ್ಷ ನರಸಿಂಹಲು ಚಿಂತಲಕುAಟ, ಗಂಗಾವತಿ ತಾಲೂಕ ಅಧ್ಯಕ್ಷರಾದ ಸುಮಿತ್ರ, ಪ್ರಧಾನ ಕಾರ್ಯದರ್ಶಿಯಾದ ದೇವದಾಸ್, ಮರಳಿ ಹೋಬಳಿ ಘಟಕದ ಅಧ್ಯಕ್ಷರಾದ ಮರಿಸ್ವಾಮಿ ಹೊಸಕೇರಿ ಸೇರಿದಂತೆ ಇತರ ಪದಾಧಿಕಾರಿಗಳಾದ ಮಂಜುನಾಥ ಬಡಿಗೇರ, ನಾಗಪ್ಪ ಗೋಡಿನಾಳ, ಹುಲಿಗೇಶ ಬುಕನಟ್ಟಿ, ದೇವರಾಜ ಬೂದಗುಂಪ, ಕೃಷ್ಣಪ್ಪ ಸಂಗಾಪುರ, ಕೃಷ್ಣಪ್ಪ ನಾಯಕ, ರಾಘವೇಂದ್ರ ಸಂಗಾಪುರ, ಕರಿಬಸವ ಕುಡಗುಂಟಿ, ಹನುಮಂತ ಮುಳ್ಳೂರು, ರಾಜಾನಂದA, ಸುನೀಲಕುಮಾರ್, ಇಮಾನೇಲು, ರವಿಕುಮಾರ, ಮಾರೆಪ್ಪ, ಹನುಮಂತ, ಪಂಪಾಪತಿ ಮಣ್ಣೂರ್, ಚಿದಾನಂದ ಬರಗೂರು, ಪಾಮಣ್ಣ ಹೊಸಕೇರಿಡಗ್ಗಿ, ಸೋಮನಾಥ ಮುಸ್ಟೂರು, ಹುಸೇನಪ್ಪ ಮುಸ್ಟೂರು, ಲೋಕೇಶ ಕೋಟಯ್ಯಕ್ಯಾಂಪ್, ಹುಲುಗಪ್ಪ ಹೊಸಕೇರಾ ಡಗ್ಗಿ, ಮರಿಸ್ವಾಮಿ ಹೊಸಕೇರಾ ಡಗ್ಗಿ, ಮಾರೆಪ್ಪ ಕೋಟಯ್ಯಕ್ಯಾಂಪ್, ಕುಮಾರ್ ಹೊಸಕೇರಾ ಡಗ್ಗಿ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!