ಗಾಂಜಾ ಮಾರಾಟ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಗಂಗಾವತಿ : ಕಳೆದ 04-02-2019 ರಂದು ಗಂಗಾವತಿ ವಲಯ ಕಛೇರಿಯ ಅಬಕಾರಿ ನಿರೀಕ್ಷಕರು. ಹಾಗೂ ಕೊಪ್ಪಳ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರು ಮತ್ತು ಗಂಗಾವತಿ ವಲಯ ಸಿಬ್ಬಂದಿಯೊಂದಿಗೆ ಗಂಗಾವತಿ ತಾಲ್ಲೂಕು ವೀರಪಾಪುರ ಗಡ್ಡಿಯಿಂದ ಸಣಾಪೂರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಬಲಬದಿಯಲ್ಲಿರುವ ಹೋಲಿ ಟ್ರೇ ಫ್ಯಾಮೀಲಿ ಫಾಸ್ಟಪುಡ್ ಹೋಟೇಲ್ ಎದುರುಗಡೆ ಇರುವ ಜಾಗದಲ್ಲಿ ಆರೋಪಿತನಾದ ಪಂಪಣ್ಣ ತಂದೆ ಈರಣ್ಣ ಸಾಃ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಹಿಂದುಗಡೆ ಜನತಾ ಪ್ಲಾಟ ಸಣಾಪೂರ ಗಾಮ ತಾ। ಗಂಗಾವತಿ ಜಿ.ಕೊಪ್ಪಳ ಈತನನ್ನು ಶೋಧನೆ ಮಾಡಿದಾಗ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಒಂದು ಕಪ್ಪು ಬಣ್ಣದ ಪಾಲಿಥಿನ್ ಪ್ಲಾಸ್ಟಿಕ್ ಚೀಲದಲ್ಲಿ 500 ಗ್ರಾಂ ಒಣಗಿದ ಗಾಂಜಾ ಹೂವು, ಗಾಂಜಾ ಬೀಜ, ಗಾಂಜಾ ಎಲೆ ಮಿಶ್ರಿತ ಗಾಂಜಾ ಪುಡಿ ಇರುವುದು ಕಂಡುಬಂದಿರುವುದರಿಂದ ಎನ್.ಡಿ.ಪಿ.ಎಸ್ ಕಾಯ್ದೆ 1985 ಕಲಂ 8(ಬಿ), 8(ಸಿ) ರಂತೆ ಉಲ್ಲಂಘನೆ ಹಾಗೂ 20(ಬಿ), 25 ರಂತೆ ಹಾಗೂ ಮನೋಧಿಕಾರಿ ವಸ್ತುಗಳ ಬಳಕೆಗಾಗಿ ಎನ್.ಡಿ.ಪಿ.ಎಸ್ ಕಾಯ್ದೆ 1985 ರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಎಂದು ದೋಷಾರೋಪಣ ಪಟ್ಟಿಯನ್ನ ಆಗಿನ ತನಿಖಾಧಿಕಾರಿಯಾದ ಅಜಯ್ ಉಮದಗಿ ಅಬಕಾರಿ ನೀರಿಕ್ಷಕರು ಗಂಗಾವತಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತದನಂತರ ಪ್ರಕರಣದ ಸವಿಸ್ತಾರ ವಿಚಾರಣೆ ನಡೆಸಿದ ನಂತರ ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ದಿನಾಂಕ 12-08-2025 ರಂದು ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ್ ನ್ಯಾಯಾಧೀಶರವರು ಪ್ರಕರಣದ ಆರೋಪಿ ಪಂಪಣ್ಣ ತಂದೆ ಈರಣ್ಣ ಈತನ ಮೇಲೆ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ಆರೋಪಿತನು ದೋಷಿಯೆಂದು ನಿರ್ಣಹಿಸಿ ತೀರ್ಪು ನೀಡಿದೆ. ಆರೋಪಿಗೆ ಅಪರಾಧ ಕಲಂ 255(2) ರಡಿಯಲ್ಲಿ ಪ್ರದತ್ತವಾದ ಅಧಿಕಾರಿದ
ಮೇರೆಗೆ ಆರೋಪಿತನನ್ನು ಕಲಂ 20(b), 28, 29 8(b) 8(c) NDPS Act ರನ್ವಯ ಹೊರಿಸಲಾಗಿದ್ದ ಶಿಕ್ಷಾರ್ಹ ಅಪರಾಧಗಳಿಗೆ ತಪ್ಪಿಸ್ಥ ಎಂದು ತೀರ್ಮಾನಿಸಲಾಗಿದೆ. ತತ್ಪಪರಿಣಾಮವಾಗಿ ಆರೋಪಿತನಿಗೆ ಕಲಂ 20(b) ರಡಿಯಲ್ಲಿನ ಅಪರಾಧಕ್ಕಾಗಿ ಒಂದು ವರ್ಷಗಳ ಕಾಲ ಸಾದಾ ಸೆರೆವಾಸ ಅನುಭವಿಸಕ್ಕದ್ದು ಮತ್ತು ರೂಪಾಯಿ 11,000-00 ಅನ್ನು ಜುಲ್ಮಾನೆ (ಹನ್ನೊಂದು ಸಾವಿರ ರೂಪಾಯಿ ಮಾತ್ರ) ವಿಧಿಸಲಾಗಿದೆ.
ಪ್ರಕರಣ ದೋಷಾರೋಪಣ ಪಟ್ಟಿಯನ್ನು ಆಗಿನ ತನಿಖಾಧಿಕಾರಿಯಾದ ಸುಮಾ ಜಿ. ಎಮ್ ಅಬಕಾರಿ ನೀರಿಕ್ಷಕರು ಗಂಗಾವತಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇರುತ್ತದೆ. ಮುಂದುವರೆದು ಪ್ರಕರಣದಲ್ಲಿಯ ಸಾಕ್ಷಿಗಳನ್ನು ಸಕಾಲದಲ್ಲಿ ನ್ಯಾಯಲಯದ ಮುಂದೆ ಅಬಕಾರಿ ಮುಖ್ಯ ಪೇದೆಗಳಾದ ನಾಗಮುನಿ ಸ್ವಾಮಿ ಹಾಗೂ ರಮೇಶ ಹೂಗಾರ ರವರು ಹಾಜರುಪಡಿಸಿ ಅಭಿಯೋಜನೆಗೆ ಸಹಾಯ ಮಾಡಿರುತ್ತಾರೆ ಹಾಗೂ ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನ ಸ್ವಾಮಿ ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು