ಹಾಲುಮತದವರು ಸಾವಿರಾರು ವರ್ಷಗಳ ವಾರಸುದಾರರು – ಶ್ರೀ ಸಿದ್ದರಮಾನಂದಪುರಿ ಸ್ವಾಮೀಜಿ

ಕೊಪ್ಪಳ – ಹಾಲುಮತದವರು ಸಾವಿರಾರು ವರ್ಷಗಳ ವಾರಸುದಾರರು ಸುಮಾರು 3,000 ವರ್ಷಗಳ ಪುರಾತನವಾಗಿರುವ ಹಾಲುಮತ ಸಂಸ್ಕೃತಿ ಹೊಂದಿದ್ದೇವೆ. ಆದರೆ ನಾವು ದಾಖಲೆಗಳನ್ನು ಮಾಡಿಲ್ಲ, ನಾವುಗಳೆಲ್ಲರೂ ಇಂತಹ ಸಮಾಜದ ಸಂಸ್ಕೃತಿ ಯನ್ನು ಮರೆಯುತ್ತಿದ್ದೇವೆ. ನಮ್ಮ ದೇಶವು ಮಾತೃ ಪ್ರಧಾನ ಸಾರುವ ದೇಶ, ಮಾತೃ ಪ್ರಧಾನ ಸಂಸ್ಕೃತಿ ನಮ್ಮದು, ಬೇರೆ ಬೇರೆ ದೇವರುಗಳಿಗೆ ಗೌರವ ಕೊಡುವುದರ ಜೊತೆ ನಮ್ಮ ತಂದೆ ತಾಯಿಯನ್ನು ಪ್ರೀತಿಸುವಂಥದ್ದು ಗೌರವಿಸುವಂತಹದ್ದು ನಮ್ಮ ಧರ್ಮ ಆಗಬೇಕು, ಹಳ್ಳಿ ಹಳ್ಳಿಗು ಇದನ್ನು ಹೇಳುವುದು ನನ್ನ ಧರ್ಮ – ಸತ್ಯವನ್ನು ಹೇಳುವಂತಹದ್ದು ನನ್ನ ಧರ್ಮ ಅದುವೇ ಹಾಲುಮತ ಧರ್ಮ ಎಂದು ಶ್ರೀಸಿದ್ದರಮಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಅವರು ಕೊಪ್ಪಳ ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ರವಿವಾರ ಜರುಗಿದ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಹಮ್ಮಿಕೊಂಡ “ಶ್ರಾವಣ ಯಾತ್ರೆ” ಕಾರ್ಯಕ್ರಮವನ್ನು ಹಾಲುಮತ ಸಂಸ್ಕೃತಿಯ ಸಂಕೇತ ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ಭಂಡಾರ ಜ್ಞಾನದ ಸಂಕೇತ :ನಾನು ಮಾಂಸಹಾರದ ವಿರೋಧಿಯಲ್ಲ, ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವಂತದ್ದು ಮಾನವ ಸಂಸ್ಕೃತಿ ಅಲ್ಲ, ದೋ ನಂಬರ್ ಮಾಡುವಂತದ್ದು ನಮಗೆ ಗೊತ್ತಿಲ್ಲ, ನಾವೆಲ್ಲರೂ ನಶ್ವರ, ಬೀರಪ್ಪ-ರೇವಣಸಿದ್ದರು ಸೂರ್ಯ ಚಂದ್ರ ಇರುವವರೆಗೂ ಅಜರಾಮರ. ಎಲ್ಲ ದೇಶದ ವಿದ್ಯಾರ್ಥಿಗಳು 64 ವಿದ್ಯೆಯನ್ನು ಕಲಿಯಲು ಬರುವಂತಹ ತಕ್ಷಶಿಲಾ, ನಳಂದ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಮಾಡಿದಂತಹ ಜನಾಂಗ ಹಾಲುಮತ. ಪಾಲ್, ಗಂಗಾ, ಹಾಲುಮತ, ಕುರುಬ ಎಂಬ ವಿವಿಧ ಹೆಸರಿನಿಂದ ಸಮುದಾಯವನ್ನು ಕರೆಯುತ್ತಾರೆ ಎಂದು ಶ್ರೀ ಸಮಾಜದ ವೈಭವ ಸಂಸ್ಕೃತಿಯನ್ನು ಪರಿಚಯ ಮಾಡಿಕೊಟ್ಟರು.

ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ – ಪ್ರತಿಯೊಬ್ಬರೂ ಕೂಡ ಹಾಲುಮತ ಧರ್ಮ ಉಳಿಸುವ ನಿಟ್ಟಿನಲ್ಲಿ ಗುರುಗಳು ಏನು ಅಪೇಕ್ಷೆ ಪಟ್ಟಿದ್ದಾರೆ ಆ ನಿಟ್ಟಿನಲ್ಲಿ ನಾವಿರಬೇಕು. ಕನಕದಾಸರು ಪ್ರಪಂಚದ ಯಾವುದೇ ದೇಶದ ಯಾವುದೇ ಸಾಧುಸಂತರಿಂದ ನೇರವಾಗಿ ಕುಲಕುಲವೆಂದು ಹೊಡೆದಾಡಬೇಡಿ ಎಂದು ಹೇಳಿ ಸಮಾಜವನ್ನು ಜಾಗೃತಿ ಮಾಡಿದಂತಹ ಕನಕದಾಸರ ಸಂಸ್ಕೃತಿಗೆ ಹಾಲುಮತ ಸಂಸ್ಕೃತಿ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಬೀರಲಿಂಗೇಶ್ವರ ಸ್ವಾಮೀಜಿ, ಜಕ್ಕಪ್ಪ ಗುರುಗಳು, ಬೂದೇಶ್ವರ ಗುರುಗಳು, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ್,ಕಾಳಿದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಮಂಜುನಾಥ್ ಅಂಗಡಿ, ನಿರ್ದೇಶಕರುಗಳಾದ ಹನುಮೇಶ್ ಮುರಡಿ, ಬರಮಪ್ಪ ಹಟ್ಟಿ, ಜಗದೀಶ್ ಕೆರಹಳ್ಳಿ, ದ್ಯಾಮಣ್ಣ ಚೀಲವಡಿಗಿ,ಜಡಿಯಪ್ಪ ಬಂಗಾಳಿ, ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ಮಹಾಸಭಾ ತಾಲೂಕು ಅಧ್ಯಕ್ಷ ಮುದ್ದಪ್ಪ.ಜಿ, ಬೇವಿನಹಳ್ಳಿ, ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಕೌದಿ, ಉಪಾಧ್ಯಕ್ಷ ಕುಬೇರ್ ಮಜ್ಜಿಗಿ, ದ್ಯಾಮಣ್ಣ ಕರಿಗಾರ, ಜಂಬಣ್ಣ ನಂದಾಪುರ, ವಿರುಪಾಕ್ಷಪ್ಪ ಮೊರ್ನಾಳ, ಆನಂದ ಕಿನ್ನಾಳ, ಲಿಂಗರಾಜು ಚಳಿಗೇರಿ, ಪರಶುರಾಮ್ ಅಣ್ಣಿಗೇರಿ, ರಾಜು ಬಂಡಿಹಾಳ ಸೇರಿದಂತೆ ಹಲವು ಗಣ್ಯರು
ಫೋಟೋ :- 1) ಕೊಪ್ಪಳ ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ರವಿವಾರ ಜರುಗಿದ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಹಮ್ಮಿಕೊಂಡ “ಶ್ರಾವಣ ಯಾತ್ರೆ” ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು
2) ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡಿದರು..