ಕೊಪ್ಪಳ ಕ್ಷೇತ್ರದಲ್ಲಿ ಇದ್ದಷ್ಟು ಕಾಂಗ್ರೆಸ್ನ ವರ್ಚಸ್ಸು ಹೊರಗಡೆ ಕಾಣುತ್ತಿಲ್ಲ?!
ಸುದ್ದಿ ವಿಶ್ಲೇಷಣೆ: ಗೋವಿಂದರಾಜ್ ಬೂದಗುಂಪಾ
ಜಿಬಿ ನ್ಯೂಸ್ ಕನ್ನಡ ಸುದ್ದಿ ಕೋಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವವರು ಸಂಖ್ಯೆ ಎದ್ದು ಕಾಣುತ್ತಿದೆ,
ಬಿಜೆಪಿಯಿಂದ ಕರಡಿ ಸಂಗಣ್ಣನವರು ಕಾಂಗ್ರೆಸ್ ಸೇರ್ಪಡೆ ಆದ ನಂತರ ಆ ಪ್ರಕ್ರಿಯೆ ಜೋರಾಗಿಯೇ ನಡೆದಿದೆ, ಆದರೆ ಕೊಪ್ಪಳ ಕ್ಷೇತ್ರ ಬಿಟ್ಟು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಅಷ್ಟೊಂದು ತುರುಸು ಕಾಂಗ್ರೆಸ್ಸಿನದು ಕಾಣುತ್ತಿಲ್ಲ,
ಈಗಾಗಲೇ ಬಿಜೆಪಿಯ ಅಭ್ಯರ್ಥಿ ಮತ್ತು ಮುಖಂಡರು ಇಡೀ ಲೋಕ ಸಭಾ ಕ್ಷೇತ್ರವನ್ನು ಎರಡು ಬಾರಿ ಸುತ್ತು ಹಾಕಿದ್ದಾರೆ, ಆದರೆ ಕಾಂಗ್ರೆಸ್ ನವರು ಇನ್ನು ಯಾವುದೇ ರೀತಿ ಸಂಪೂರ್ಣ ಲೋಕಸಭಾ ಕ್ಷೇತ್ರವನ್ನು ಮುಟ್ಟಿಲ್ಲ, ಕೇವಲ ಕೊಪ್ಪಳಕ್ಕೆ ಸೀಮಿತ ಆದಂತೆ ವರ್ತನೆ ಮಾಡುತ್ತಿದೆ ಕಾಂಗ್ರೆಸ್.
ಕೊಪ್ಪಳ ಲೋಕಸಭೆಗೆ ಸಂಬಂಧಿಸಿದ ಮಸ್ಕಿ ಸಿರುಗುಪ್ಪ ಸಿಂಧನೂರು ಕಾರಟಗಿ ಕನಕಗಿರಿ ಗಂಗಾವತಿ ಮತ್ತು ಕುಷ್ಟಗಿ ಈ ಎಲ್ಲಾ ಕ್ಷೇತ್ರಗಳನ್ನು ಒಂದು ಸಾರಿ ಅವಲೋಕನ ಮಾಡಿದರೆ ಸಿರುಗುಪ್ಪ ಹೊರತುಪಡಿಸಿ ಎಲ್ಲಾ ಕ್ಷೇತ್ರದಲ್ಲೂ ಒಂದು ಹೆಜ್ಜೆ ಬಿಜೆಪಿ ಮುಂದೆ ಇದೆ ಅನ್ನುವುದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ,
ಸಿರಗುಪ್ಪದಲ್ಲಿ ಫಿಫ್ಟಿ ಫಿಫ್ಟಿ ಅನ್ನುವ ರೀತಿಯ ವಾತಾವರಣ ನಿರ್ಮಾಣವಾಗಿದೆ, ಗಂಗಾವತಿ ಭಾಗದಲ್ಲಿ ಮುಸ್ಲಿಂ ಜನಾಂಗ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದೆ ಆದರೆ ತೋರಿಸಿಕೊಳ್ಳುತ್ತಿಲ್ಲ.
ಗಂಗಾವತಿ ಭಾಗದಲ್ಲಿ ಈ ಬಾರಿ 10000ಕ್ಕೂ ಅಧಿಕ ನೋಟಾಕ್ಕೆ ಮತದಾನ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ,
ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ಇಕ್ಬಾಲ್ ಅನ್ಸಾರಿಗೆ ಮಾರಕ:
ಇಕ್ಬಾಲ್ ಅನ್ಸಾರಿಯವರು ಸಂಗಣ್ಣ ಕರಡಿ ಸೇರ್ಪಡೆಯಿಂದ ವಿಚಲಿತರಾದಂತೆ ಕಾಣುತ್ತಿದೆ, ಕೇವಲ ತೋರಿಕೆಗೆ ಮಾತ್ರ ಅಲ್ಲಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಮುಂದೆ ಸಂಗಣ್ಣ ಕರಡಿಯವರು ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಇಚ್ಛೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಟ್ಟಾಗ ಅದಕ್ಕೆ ಒಪ್ಪಿಗೆ ಸಿಕ್ಕಿದೆ ಅನ್ನುವುದು ಕಾಂಗ್ರೆಸ್ ಮುಖ್ಯ ವಲಯದಲ್ಲಿ ಕೇಳಿ ಬಂದಿದೆ ಇದರಿಂದ ಮುಸ್ಲಿಂ ಮತಗಳು ವಿಭಜನೆ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ, ಕೊಪ್ಪಳದಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟರೆ ಗಂಗಾವತಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಬಿಜೆಪಿ. ಕನಕಗಿರಿ ಮತ್ತು ಕಾರಟಗಿ ಭಾಗದಲ್ಲಿ ಬಿಜೆಪಿಯ ಮತಗಳೆ ಹೆಚ್ಚು ಇವೆ,
ಸಿಂಧನೂರು ಭಾಗ ಕಾಂಗ್ರೆಸ್ ಗೆ ಬಿಸಿ ತುಪ್ಪ :
ಸಿಂಧನೂರು ಭಾಗದಲ್ಲಿ ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮತ್ತು ಅವರ ಮಗ ಕೆ ಕರಿಯಪ್ಪನವರು ಇಟ್ನಾಳ್ ಕುಟುಂಬದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ, ಯಾವುದೇ ಕಾರಣಕ್ಕೂ ಸಿಂಧನೂರು ಭಾಗದಲ್ಲಿ ಕಾಂಗ್ರೆಸ್ ಒಂದು ವೋಟು ಕೂಡ ಜಾಸ್ತಿ ಆಗದಂತೆ ನಾವು ತಡೆಯುತ್ತೇವೆ ಅನ್ನುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ ಕೆ ವಿರುಪಾಕ್ಷಪ್ಪ,
ಇನ್ನು ಸಂಗಣ್ಣ ಕರಡಿಯವರು ಬಿಜೆಪಿ ಸೇರಿ ಎರಡು ಮೂರು ದಿನಗಳು ಆಗಿವೆ, ಮುಂದೆ ಸಂಗಣ್ಣ ಕರಡಿಯವರು ಕ್ಷೇತ್ರದಲ್ಲಿ ಸಂಚಾರ ಮಾಡಿದ ಮೇಲೆ ಯಾವ ರೀತಿ ಬದಲಾವಣೆಗಳು ಆಗುತ್ತವೆ ಅನ್ನುವುದನ್ನು ಕಾದು ನೋಡಬೇಕಾಗಿದೆ.