Blog

ಗಂಗಾವತಿ ಕಾಂಗ್ರೆಸ್‌ನಲ್ಲಿ ಮತ್ತೆ ಮುನಿಸು ಬಹಿರಂಗ- ಅನ್ಸಾರಿ ನೇತೃತ್ವದಲ್ಲಿ ಸಭೆ: ತಂಗಡಗಿ, ಸಂಗಣ್ಣ, ಹಿಟ್ನಾಳ ಭಾಗಿ- ಹೆಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪಗೆ ಕೋಕ್,,!!

ಗಂಗಾವತಿ.
ಲೋಕಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಪ್ರಮುಖ ಮುಖಂಡರ ನಡುವೆ ಇರುವ ಮುನಿಸು ಮತ್ತೆ ಬಹಿರಂಗವಾಗಿದೆ. ಸಮೀಪದ ಸಂಗಾಪುರ ಗ್ರಾಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಂಸದ ಸಂಗಣ್ಣ ಕರಡಿ, ಕ್ಷೇತ್ರದ ಉಸ್ತುವಾರಿ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ. ಆದರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶ್ರೀನಾಥ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಇನ್ನಿತರ ಅನ್ಸಾರಿ ವಿರೋಧಿ ಬಣದ ಮುಖಂಡರಿಗೆ ಕೋಕ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಶುಕ್ರವಾರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಚುನಾವಣೆಯ ಪ್ರಚಾರ ಸಭೆ ನಡೆಸಲಾಗಿದೆ. ನಗರಕ್ಕೆ ಕೂಗಳತೆಯಲ್ಲಿರುವ ಈ ಸಭೆಯಿಂದ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀನಾಥ ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರುಗಳು ಸಭೆಗೆ ಬಾರದಂತೆ ನೋಡಿಕೊಳ್ಳಲಾಗಿದೆ ಎಂದು ಶ್ರೀನಾಥ ಬಣದ ಕಾರ್ಯಕರ್ತರು ನೇರವಾಗಿ ಆರೋಪಿಸುತ್ತಿದ್ದಾರೆ.
ಚುನಾವಣೆ ಪ್ರಕ್ರೀಯೆ ಪ್ರಾರಂಭವಾಗುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಿವರಾಜ ತಂಗಡಗಿ, ಅಮರೇಗೌಡ ಬಯ್ಯಾಪುರ, ದೋಟಿಹಾಳ ಸಮ್ಮುಖದಲ್ಲಿ ಹೆಚ್.ಆರ್,ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ರಾಜಕೀಯದಿಂದ ದೂರ ಉಳಿದಿರುವ ಮಾಜಿ ಸಂಸದ ಹೆಚ್.ಜಿ.ರಾಮುಲು ವಿರುದ್ಧವು ಹಿಗ್ಗಾ ಮುಗ್ಗ ವಾಗ್ದಾಳಿ ನಡೆಸಿದ್ದರು. ಮತ್ತು ಹೆಚ್.ಜಿ.ರಾಮುಲು ನಿವಾಸಕ್ಕೆ ಹೋಗದಂತೆ ಮುಖಂಡರಿಗೆ ತಾಕೀತು ಮಾಡಿದ್ದ ಅನ್ಸಾರಿ ಗಂಗಾವತಿ ಕ್ಷೇತ್ರದಲ್ಲಿ ಯಾರ ಮನೆಗೆ ಹೋಗಬೇಕೆಂಬುದು ತಮ್ಮಿಂದ ನಿರ್ಧಾರವಾಗಬೇಕೆಂದು ನೇರವಾಗಿ ಅಭ್ಯರ್ಥಿ ಹಿಟ್ನಾಳ್‌ಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಹೆಚ್.ಆರ್.ಶ್ರೀನಾಥ ಕುಡಾ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಯ್ಯಾಪುರ, ಹಸನ್‌ಸಾಬ್ ದೋಟಿಹಾಳ, ಮಲ್ಲಿಕಾರ್ಜುನ ನಾಗಪ್ಪ ಮತ್ತಿತರನ್ನು ಅಹ್ವಾನಿಸಿ ಅನ್ಸಾರಿಗೆ ಟಾಂಗ್ ನೀಡಿದ್ದರು. ಈ ಸಭೆಗೆ ಸಚಿವ ಶಿವರಾಜ ತಂಗಡಗಿ ಗೈರಾಗಿ ತಾವು ಅನ್ಸಾರಿ ಬಣದ ಕಡೆ ಎಂಬ ಸಂದೇಶ ರವಾನಿಸಿದ್ದರಿಂಂದ ಸಭೆಯಲ್ಲಿ ಶ್ರೀನಾಥ ಅವರು ತಂಗಡಗಿ ವಿರುದ್ಧ ಹರಿಹಾಯ್ದಿದ್ದರು. ಈ ಸಭೆಯ ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿನ ಬಣ ರಾಜಕಾರಣವನ್ನು ಶಮನ ಮಾಡಲಾಗುವುದು. ಗಂಗಾವತಿಯಲ್ಲಿ ಇನ್ನು ಮುಂದೆ ನಡೆಯುವ ಪ್ರಚಾರ ಸಭೆಯಲ್ಲಿ ಅನ್ಸಾರಿ ಮತ್ತು ಹೆಚ್.ಆರ್,ಶ್ರೀನಾಥ ಅವರನ್ನು ಒಂದೇ ವೇದಿಕೆಗೆ ಬರುವಂತೆ ಮಾಡಿ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಇಕ್ಬಾಲ್ ಅನ್ಸಾರಿ ಶುಕ್ರವಾರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಗೆ ಹೆಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಮತ್ತಿತರನ್ನು ಅಹ್ವಾನಿಸದೇ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಮಾಜಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಮಾಜಿ ಸಂಸದ ಹೆಚ್.ಜಿ.ರಾಮುಲು ಬಗ್ಗೆ ಗೌರವದ ಮಾತನಾಡಿದ್ದರು. ಆದರೆ ಇಂದು ಸಂಗಾಪುರದಲ್ಲಿ ನಡೆದ ಅನ್ಸಾರಿ ನೇತೃತ್ವದ ಸಭೆಯಲ್ಲಿ ಆಗಮಿಸಿದ್ದ ಸಂಗಣ್ಣ ಕರಡಿಯಾದರೂ ಹೆಚ್.ಆರ್.ಶ್ರೀನಾಥ ಅವರನ್ನು ಅಹ್ವಾನಿಸಲು ಸಲಹೆ ನೀಡದಿರುವುದು ಗಂಗಾವತಿ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಮತ್ತೊಮ್ಮೆ ಬಹಿರಂಗೊಂಡಿದೆ.
ಈ ನಡುವೆ ಸಂಗಣ್ಣ ಕರಡಿ ಸಂಗಾಪುರ ಗ್ರಾಮದಲ್ಲಿನ ಸಭೆಯ ನಂತರ ಮಾಜಿ ಸಂಸದ ಹೆಚ್.ಜಿ.ರಾಮುಲು ಅವರ ನಿವಾಸದ ಮುಂದೆಯೇ ತೆರಳಿ ನೇರವಾಗಿ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿರುವುದು ಹೆಚ್.ಆರ್.ಶ್ರೀನಾಥಗೆ ಬೇಸರ ಮೂಡಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬಾಕ್ಸ್:
ಸಂಗಾಪುರ ಕಾಂಗ್ರೆಸ್ ಸಭೆಗೆ ಅಹ್ವಾನಿಸಿಲ್ಲ
ಇಂದು ಸಂಗಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಚಾರ ಸಭೆ ನಡೆಸಲಾಗಿದೆ. ಈ ಸಭೆಗೆ ಸಚಿವ ಶಿವರಾಜ ತಂಗಡಗಿ, ಮಾಜಿ ಸಂಸದ ಸಂಗಣ್ಣ ಕರಡಿ, ಹಸನಸಾಬ್ ದೋಟಿಹಾಳ್ ಸೇರಿದಂತೆ ಶಾಸಕ ರಾಘವೇಂದ್ರ ಹಿಟ್ನಾಳ, ಅಭ್ಯರ್ಥಿ ರಾಜಶೇಖರ ಅವರು ಭಾಗವಹಿಸಿದ್ದಾರೆ. ಆದರೆ ಈ ಸಭೆಗೆ ನನಗೆ, ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲ. ಗಂಗಾವತಿ ಕ್ಷೇತ್ರದಲ್ಲಿ ಪಕ್ಷದ ಸಭೆ ನಡೆಸಿರುವ ಅಭ್ಯರ್ಥಿ ಹಿಟ್ನಾಳ್ ಈ ರೀತಿ ಭಿನ್ನ ನಿಲುವು ತಾಳುವುದು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂಡಲ ಮೂಡುತ್ತದೆ. ಮತ್ತು ಮುಖಂಡರಲ್ಲಿ ಭಿನ್ನಮತವಿದೆ ಎಂಬುದು ಮತ್ತಷ್ಟು ಬಹಿರಂಗವಾಗುತ್ತದೆ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಇದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕುರಿತು ವಿಚಾರಿಸುತ್ತೇನೆ.
ಹೆಚ್.ಆರ್.ಶ್ರೀನಾಥ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

Related Articles

Leave a Reply

Your email address will not be published. Required fields are marked *

Back to top button