ಧಾರವಾಡ ಕಾಂಗ್ರೆಸ್ ಟಿಕೆಟ್ ಬದಲಾವಣೆ ಡಿಕೇಶಿ ಹೇಳಿಕೆ ವಿಚಾರ, ಇದಕ್ಕೆ ಅವರೇ ಉತ್ತರಿಸಬೇಕು- ಸಚಿವ ಲಾಡ್
ಧಾರವಾಡ: ಟಿಕೆಟ್ ಬದಲಾವಣೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಏನ ಹೇಳುದ್ದಾರೋ ನನಗೆ ಗೊತ್ತಿಲ್ಲ, ಈಗಾಗಲೆ ನಾವು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರವನ್ನ ಮಾಡುತ್ತಿದ್ದೆವೆ. 70% ರಷ್ಟು ಪ್ರಚಾರ ಮಾಡಿದ್ದೇವೆ, ನಮ್ಮ ಅಭ್ಯರ್ಥಿ ಬಿ ಪಾರಂ ಕೂಡಾ ಪಡೆದುಕೊಂಡಿದ್ದಾರೆ. ಇದಕ್ಕೆ ಅಧ್ಯಕ್ಷರೇ ಉತ್ತರ ಕೊಡಬೇಕು ಎಂದು ಸಚಿವ ಸಂತೋಷ ಲಾಡ್ ಹೇಳುದರು.
ನಗರದಲ್ಲಿಂದು ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಜ್ಯಧ್ಯಕ್ಷರಾದ ಡಿಕೆಶಿ ಅವರ ಸ್ಟೆಟ್ ಮೆಂಟ್ ನಾನು ನೋಡಿಲ್ಲಾ. ಹಾಗಾಗಿ ಇದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ, ಅವರ ಯಾವ ಅರ್ಥದಲ್ಲಿ ಹಾಗೇ ಹೇಳಿದ್ದಾರೋ ಡಿಕೆಶಿ ಅವರೇ ಮಾತನಾಡಬೇಕು. ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪರ ನಾವು ಪ್ರಚಾರ ಮಾಡುತ್ತಿದ್ದೇವೆ. ನಮ್ಮಗಿನ್ನಿಸಿರೋ ಪ್ರಕಾರ ಬದಲಾವಣೆ ಅಂತೂ ಇಲ್ಲ ಅನ್ಸುತ್ತೆ ಎಂದ ಅವರು, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ದಿಂಗಾಲೇಶ್ವರ ಶ್ರೀಗಳ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಸ್ವಾಮಿಜಿ ಅವರು ಮೋಸ್ಟ ಪವರ ಪುಲ್ ಇದಾರೆ. ಅವರದ್ದೆ ಆದ ಭಕ್ತರನಗನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಇದು ಮೊದಲನೆಯ ಟೈಂ ಸ್ವಾಮೀಜಿ ಸ್ಪರ್ದೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಯಾವುದೆ ಜಾತಿ ರಾಜಕಾರಣ ಮಾಡಲ್ಲ, ನಮ್ಮಲ್ಲಿ ಎಲ್ಲರಿಗೂ ಟಿಕೆಟ್ ಕೊಟ್ಟೆ ಕೊಡ್ತೆವಿ. ಚೇಂಜ್ ಮಾಡಿದರೆ ಹೈ ಕಮಾಂಡ ನಿರ್ಧಾರ, ಅದಕ್ಕೆ ನಾವು ಬದ್ದರಿದ್ದೆವೆ. ಇನ್ನೂ ಕಾಂಗ್ರೆಸ್ ಪಕ್ಷ ದಿಂದ ಲೋ ಕ್ಯಾಂಡಿಡೇಟ್ ನ್ನ ಜೋಶಿ ಅವರೆ ಹಾಕಿಸಿಕ್ಕೊಂಡಿದ್ದಾರೆ ಎಂದು ಶ್ರೀಗಳು ಹೇಳುವುದು ಸರಿಯಲ್ಲ. ಯಾರದೋ ಒಬ್ಬರ ಇಂಟಿಗ್ರೆಟಿ ಮಾಡಲಾಗುತ್ತದೆ. ಸ್ವಾಮೀಜಿ ಇಲ್ಲಂದ್ರು ನಾವು ಪೈಟ್ ಮಾಡುತ್ತೆವೆ. ಸ್ವಾಮಿಜಿ ಅವರು ಈ ರೀತಿ ಹೇಳಿಕೆ ಕೊಡಬಾರದು ಎಂದು ಕುಟುಕಿದರು.