ಶೈಲಜಾ ಹಿರೇಮಠಗೆ ಮಾಧ್ಯಮ ಸಂಯೋಜಕಿ ಹುದ್ದೆ- ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಜವಬ್ದಾರಿ
ಕೊಪ್ಪಳ.
ಲೋಕಸಭೆ ಚುನಾವಣೆ ಕಾವು ದಿನೇ ದಿನೇ ಏರುತ್ತಿದೆ. ಕಾಂಗ್ರೆಸ್ ಪಕ್ಷ ಈ ಭಾರಿ ಬಿಜೆಪಿಗಿಂತ ಹೆಚ್ಚು ಸ್ಥಾನವನ್ನು ಪಡೆದುಕೊಳ್ಳಲು ಭಾರಿ ಕಸರತ್ತು ನಡೆಸಿದೆ. ಹೀಗಾಗಿ ಕೆಪಿಸಿಸಿ ವಿವಿಧ ಹುದ್ದೆಗಳನ್ನು ಸೃಷ್ಟಿ ಮಾಡಿ ತಮ್ಮ ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಜವಬ್ದಾರಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ೨೮ ಲೋಕಸಭೆ ಕ್ಷೇತ್ರಗಳಿಗೆ ಮಾಧ್ಯಮ ಸಂಯೋಜಕರನ್ನು ನೇಮಕ ಮಾಡಿದ್ದು, ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಗಂಗಾವತಿಯ ಶೈಲಜಾ ಹಿರೇಮಠ ಅವರಿಗೆ ಜವಬ್ದಾರಿ ನೀಡಿದ್ದಾರೆ.
ಮಾಧ್ಯಮ ಸಂಯೋಜಕರನ್ನು ನೇಮಕ ಮಾಡಿರುವ ಕುರಿತು ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಪ್ರಕಟಣೆ ನೀಡಲಾಗಿದೆ. ಗಂಗಾವತಿ ನಗರದ ನಿವಾಸಿಯಾಗಿರುವ ಶೈಲಜಾ ಹಿರೇಮಠ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ಜವಬ್ದಾರಿ ನಿಭಾಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿ ತಂಗಡಗಿ ಗೆಲುವಿಗೆ ಕೈ ಜೋಡಿಸಿದ್ದರು. ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವ ಶೈಲಜಾ ಹಿರೇಮಠ ಮಹಿಳಾಪರ ಧ್ವನಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಅವರನ್ನು ಮಾಧ್ಯಮ ಸಂಯೋಜಕಿಯಾಗಿ ಡಿ.ಕೆ.ಶಿವಕುಮಾರ ನೇಮಕ ಮಾಡಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತು ಅಭ್ಯರ್ಥಿ ಪರವಾಗಿ ಸಕ್ರೀಯರಾಗಿ ಕೆಲಸ ಮಾಡಬೇಕು. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪಕ್ಷಕ್ಕೆ ಒಲವು ಮೂಡಿಸುವಂತಹ ಕೆಲಸ ಮಾಡುವಂತೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ.