ಕೊಪ್ಪಳಜಿಲ್ಲಾ ಸುದ್ದಿಗಳು

ಯಲಬುರ್ಗಾ ತಾಲೂಕಿನ ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ನಿಧನ,

ಯಲಬುರ್ಗಾ ತಾಲೂಕಿನ ಹಿರಿಯ ಪತ್ರಕರ್ತರಾದ ಕೊಟ್ರಪ್ಪ ತೋಟದ ಸಾ. ಮುತ್ತಾಳ ಇವರ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು ಸಂಸ್ಥೆಯ ಅಧ್ಯಕ್ಷರಾಗಿದ್ದರು ಇವರು ಯಾವಾಗಲೂ ಶಿಸ್ತಿನ ಸಿಪಾಯಿ ತೆರೆಯ ಮೇಲೆ ಗಾಂಧಿ ಟೋಪಿಗಿ. ಜುಬ್ಬಾ ಪೈಜಾಮು ಹಣೆಯಲ್ಲಿ ವಿಭೂತಿ ಯಾವಾಗಲೂ ಲಕ್ಷಣ ಮಯವಾಗಿರುತ್ತಿದ್ದರು ಕನ್ನಡ ಇಂಗ್ಲಿಷ್ ತೆಲುಗು ಹಿಂದಿ ಭಾಷೆಯಲ್ಲಿ ಪರಿಣಿತರು ಖಡಕಾಗಿ ತಮ್ಮ ಭಾಷಣ ಮಾಡುತ್ತಿದ್ದರು. ಕೊಟ್ರಪ್ಪ ಕೋಟೆದ ಇವರಿಗೆ ಇಬ್ಬರು ಪುತ್ರಯರು ಓರ್ವ ಪುತ್ರ ಪತ್ನಿ ಬಿಟ್ಟು ಅಗಲಿದ್ದಾರೆ.

ನಿಧನ ಗುರುವಾರ ರಾತ್ರಿ 11:35ಕ್ಕೆ ಸುದ್ದಿ ನಮಗೆ ತುಂಬಾ ಆಘಾತವನ್ನುಂಟು ಮಾಡಿದ್ದು ಸುಮಾರು ಐದು ದಶಕಗಳ ಕಾಲ ನಮ್ಮ ಯಲಬುರ್ಗಾ ತಾಲೂಕಿನ ಪತ್ರಕರ್ತರಾಗಿ ನವೋದಯ, ಕಿತ್ತೂರು ಕರ್ನಾಟಕ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ತಮ್ಮದೇ ಆದ ವಿಶೇಷ ಬರವಣಿಗೆ ಹಾಗೂ ಲೇಖನಗಳು ಹಾಗೂ ನಮ್ಮ ಭಾಗದ ಮಠ, ಮಾನ್ಯಗಳ ಪರಿಚಯ ಹಾಗೂ ಸ್ವಾಮೀಜಿಗಳ ಕುರಿತು ಅವರ ಜೀವನ ಚರಿತ್ರೆಗಳನ್ನು ಮತ್ತು ರಾಜಕೀಯ ಧುರೀಣರ, ಮುಖಂಡರ, ಸಾಹಿತಿಗಳ, ಶರಣ, ಶರಣೆಯರ ಕುರಿತು ತಮ್ಮದೇ ಆದ ಶೈಲಿಯಲ್ಲಿ ಅತ್ಯದ್ಭುತ ಬರವಣಿಗೆ ಮೂಲಕ ಪತ್ರಿಕಾ ರಂಗದಲ್ಲಿ ವಿಶೇಷ ಛಾಪು ಮೂಡಿಸಿದ ವ್ಯಕ್ತಿತ್ವ ಹೊಂದಿದವರಾಗಿದ್ದರು.

ಕೊಪ್ಪಳ ಜಿಲ್ಲೆಯಲ್ಲಿನ ಮೂಲೆ ಮೂಲೆಯಲ್ಲಿನ ಮಠ, ಮಂದಿರ, ಸೇರಿದಂತೆ ಹಲವಾರು ಪುರಾತನ ದೇವಾಲಯಗಳ ಕುರಿತು ಅದರ ಮಹತ್ವ ಸಾರುವಂತೆ ಅವುಗಳ ಕುರಿತು ಸವಿಸ್ತಾರ ಲೇಖನಗಳನ್ನು ಬರೆದ ಶ್ರೇಷ್ಠ ವ್ಯಕ್ತಿತ್ವ ಹೊಂದಿದ ಇವರು, ನೆರ, ನಿಷ್ಠುರವಾದಿಯಾಗಿ ತಮಗೆ ತೋಚಿದಂತೆ ನೇರವಾಗಿ ಮಾತನಾಡುವ ವ್ಯಕ್ತಿಯಾಗಿದ್ದರು, ಯಾರು ಏನು ಅಂದುಕೊಳ್ಳುವರು ಎನ್ನುವ ಮುಲಾಜಿಲ್ಲದೇ ನೇರವಾಗಿ ಮಾತನಾಡುವ ವ್ಯಕ್ತಿತ್ವ ಇವರದಾಗಿತ್ತು.

ನಮ್ಮ ಹಿರಿಯರಾದ ಕೊಟ್ರಪ್ಪ ತೋಟದ ಅವರು ನಮಗೆ ಸುಮಾರು ಮೂವತ್ತು ವರ್ಷಗಳಿಂದ ಚಿರ ಪರಿಚಿತರಾಗಿದ್ದು ನಮಗೆ ಪತ್ರಿಕಾ ರಂಗದ ಸಲಹೆ ಸೂಚನೆಗಳನ್ನು ನೀಡುತ್ತಾ, ಸದಾ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂದಿರುತ್ತಿದ್ದರು.

ತಮಗೆ ಇಡಿ ರಾಜ್ಯದಲ್ಲಿ ಯಾರು ಪರಿಚಿತರಿರುವರು ಅವರ ಮನೆಯಲ್ಲಿ ಶುಭ ಸಮಾರಂಭ ಇದೆ ಎಂದು ಗೊತ್ತಾದರೇ ಅವರ ಆಹ್ವಾನ ನೀಡದಿದ್ದರೂ ಅವರೇ ಹೋಗಿ ಭಾಗಿಯಾಗಿ ಬರುವಂತಹ ಮುಗ್ದ ಮನಸ್ಸಿನ, ಬಾಲ್ಯ ಮಕ್ಕಳ ಸ್ವಭಾವ ಗುಣಗಳನ್ನು ಹೊಂದಿದವರಾಗಿದ್ದರು.

ಅದಲ್ಲದೇ ಅವರಿಗೆ ಪರಿಚಯವಿರುವ ಯಾರೇ ಆಗಲಿ ಮೃತರಾದ ಸುದ್ದಿ ತಿಳಿದಲ್ಲಿ ಕ್ಷಣ ಮಾತ್ರದಲ್ಲಿ ಅಲ್ಲಿಗೆ ಹಾಜರಾಗಿ ಅವರ ಆತ್ಮಕ್ಕೆ ಶಾಂತಿ ಕೋರಿ ಬರುತ್ತಿದ್ದರು. ಇವರು ಬಸವಣ್ಣನವರ ಅನುಯಾಯಿಗಳಾಗಿದ್ದು ಸರ್ವ ಜನಾಂಗದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು.

ಕೊಟ್ರಪ್ಪ ತೋಟದ ಅವರೆಂದರೇ ಕೊಪ್ಪಳ ಜಿಲ್ಲೆಯ ಮೆರು ಸಾಹಿತಿ ಹಾಗೂ ಸಂಸ್ಕೃತಿಯ ಗಣಿ ಇದ್ದಂತೆ. ಅವರ ನಿಲುವು, ವೈಚಾರಿಖತೆಯ ಕುರಿತು ಹೇಳುವುದಾದರೇ ಅದು ಒಂದು ಪುಟ, ಒಂದು ದಿನಕ್ಕೆ ಸಾಲದ ವಿಷಯ. ಒಟ್ಟಾರೇ ಕೊಟ್ರಪ್ಪ ತೋಟದ ಅವರು ನಮ್ಮ ಜಿಲ್ಲೆಯ ಪತ್ರಕರ್ತರಲ್ಲಿ ವಿಷೇಶ ಛಾಪನ್ನು ಹೊಂದಿದವರಾಗಿದ್ದ ಇಂತಹ ನಮ್ಮ ಪತ್ರಿಕಾ ಹಿರಿಯರು ಇಂದು ನಮ್ಮೆಲ್ಲ ಪತ್ರಿಕಾ ಬಳಗವನ್ನು ಅಗಲಿದ ವಿಷಯದಿಂದ ನಮ್ಮಲ್ಲಿ ತುಂಬಾ ನೋವುಂಟು ಮಾಡಿದೆ. ಇಂತಹ ವ್ಯಕ್ತಿತ್ವದ ವ್ಯಕ್ತಿ ಮತ್ತೊಮ್ಮೆ ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬರಲಿ, ಜೊತೆಗೆ ಅವರ ಈ ನಿಧನದಿಂದ ಕುಟುಂಬಕ್ಕೆ ನೋವನ್ನು ದುಖಃ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ನಮ್ಮ ಕೊಪ್ಪಳ ಜಿಲ್ಲೆಯ ಸಮಸ್ತ ಪತ್ರಕರ್ತರ ಪರವಾಗಿ ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ,,,

Related Articles

Leave a Reply

Your email address will not be published. Required fields are marked *

Back to top button