ಕೊಪ್ಪಳದಲ್ಲಿ ಮುಚ್ಚಿರುವ ಕನಕದಾಸರನ್ನು ಯಾವಾಗ ದರ್ಶನ ಮಾಡಿಸುತ್ತಾರೆ ಇಲ್ಲಿಯ ರಾಜಕಾರಣಿಗಳು
ಕೊಪ್ಪಳ ಕೊಪ್ಪಳ ಸೆಂಟ್ರಲ್ ಬಸ್ ನಿಲ್ದಾಣದ ಎದುರುಗಡೆ ಇರುವ ಕನಕದಾಸ ಅವರ ಮೂರ್ತಿಯನ್ನು ಸುಮಾರು ಮೂರು ವರ್ಷಗಳ ಹಿಂದೆಯೇ ಪ್ರತಿಷ್ಠಾಪಿಸಲಾಗಿದೆ,
ಆದರೆ ಇಲ್ಲಿಯವರೆಗೂ ಜನರ ದರ್ಶನಕ್ಕೆ ಕನಕದಾಸರು ಸಿಗುತ್ತಿಲ್ಲ, ಕಾರಣ ಇಲ್ಲಿಯ ರಾಜಕಾರಣಿಗಳಿಗೆ ಅನ್ನಬಹುದು.
ರಾಜಕಾರಣಿಗಳು ತಮ್ಮ ಪ್ರತಿಷ್ಠೆಗೋಸ್ಕರ ಕನಕದಾಸರ ವೃತ್ತದ ವಿಷಯವಾಗಿ ಗೊಂದಲದ ರಾಜಕೀಯ ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ, ಆದರೆ ಜನರ ದಾರಿ ತಪ್ಪಿಸಲು “ಈಗಿರುವ ಮೂರ್ತಿ ಸರಿ ಇಲ್ಲ ಆದ್ದರಿಂದ ಸರಿಯಾದ ಕನಕದಾಸರ ಮೂರ್ತಿಯನ್ನು ತಂದು ಇಡುವವರೆಗೂ ಅನಾವರಣಗೊಳಿಸುವುದಿಲ್ಲ” ಎಂದು ಸಬೂಬು ನೀಡುತ್ತಾರೆ.
ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ ಆದರೂ ಕೂಡ ಅಧಿಕಾರಿಗಳು ಇದರ ಬಗ್ಗೆ ಆಸಕ್ತಿ ವಹಿಸಿದರು ರಾಜಕಾರಣಿಗಳು ಆಸಕ್ತಿ ವಹಿಸುತ್ತಿಲ್ಲ ಅನ್ನುವುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ ಈ ಕೂಡಲೇ ಕನಕದಾಸ ವೃತ್ತದಲ್ಲಿ ಇರುವ ಕನಕದಾಸ ಮೂರ್ತಿಯನ್ನು ಅನಾವರಣಗೊಳಿಸದಿದ್ದರೆ ಮುಂದೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕೆಲವು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ