ಕಾರಟಗಿ

ಅಧಿಕಾರ ಸ್ವೀಕಾರ ಘಂಟೆಗಳ ಅವಧಿಯಲ್ಲಿ ಕೆಇಬಿ ಗೆ ನೋಟಿಸ್ ನೀಡಿದ ಪುರಸಭೆ ಮುಖ್ಯಾಧಿಕಾರಿ ಡಾಕ್ಟರ್ ಶ್ರೀ ಸಾಬಣ್ಣ ಕಟ್ಟೆಕಾರ್

ವರದಿ ಸುಂದರರಾಜ್ BA ಕಾರಟಗಿ

ಕಾರಟಗಿ ಪುರಸಭೆಗೆ ನಯಾ ಚೀಫ್ ಆಫೀಸರ್,,ಅಧಿಕಾರ ಸ್ವೀಕಾರ ಬೆನ್ನಲ್ಲೇ ಕೆಇಬಿ ಗೆ ನೋಟಿಸ್ ನೀಡಿದ ಡಾಕ್ಟರ್ ಸಾಬಣ್ಣ ಕಟ್ಟೆಕಾರ್

ಕಾರಟಗಿ ; ಪಟ್ಟಣದ ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ವರ್ಗಾವಣೆಯಾಗಿದ್ದು ಅವರ ಸ್ಥಾನದಲ್ಲಿ ಜೂನ್ 26 ಗುರುವಾರ ಡಾಕ್ಟರ್ ಸಾಬಣ್ಣ ಕಟ್ಟೆಕಾರ್ ಅಧಿಕಾರ ವಹಿಸಿಕೊಂಡಿದ್ದಾರೆ, ಡಾಕ್ಟರ್ ಸಾಬಣ್ಣ ಕಟ್ಟೆಕಾರ್ 2018ರಿಂದ ರಾಯಚೂರು ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಜಾಲಹಳ್ಳಿ ದೇವದುರ್ಗ ಲಿಂಗಸೂಗೂರು ಹಟ್ಟಿ, ತುರವಿಹಾಳ ಪಟ್ಟಣ ಪಂಚಾಯಿತಿಗಳಲ್ಲಿ ಮುಖ್ಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮೂಲತಃ ಇವರು ದೇವದುರ್ಗ ಮಸರಕಟ್ಟಿ ಗ್ರಾಮದವರಾಗಿದ್ದು, ಇವರ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಹಿರಿಯ ಅಧಿಕಾರಿಗಳ ಪ್ರಶಂಸೆಗೂ ಪಾತ್ರರಾಗಿದ್ದಾರೆ, ಇದೀಗ ಇವರು ಕಾರಟಗಿ ಪುರಸಭೆಯ ಮುಖ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು ಇವರಿಂದ ಪಟ್ಟಣ ಜನತೆ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯನ್ನು ನಿರೀಕ್ಷಿಸಬಹುದಾಗಿದೆ,

ಅಧಿಕಾರ ಸ್ವೀಕರಿಸಿದ ದಿನದಂದೆ ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರಟಗಿ ಉಪ ವಿಭಾಗದ ಕಚೇರಿಗೆ ನೋಟಿಸ್ ಕರ್ತವ್ಯನಿಷ್ಠೆ ಮೆರೆದಿದ್ದಾರೆ, ಹೌದು ಅಧಿಕಾರ ಸ್ವೀಕರಿಸಿದ ನಂತರ ಇವರು ಪಟ್ಟಣದಲ್ಲಿ ಹಗಲಿರಳು ಉರಿಯುತ್ತಿರುವ ಬೀದಿ ದೀಪಗಳು ಕಣ್ಣಿಗೆ ಬಿದ್ದಿವೆ, ಕೂಡಲೇ ಈ ಕುರಿತು ಕಾರಟಗಿ ಕೆಇಬಿ ಎ ಇ ಇ ರವರಿಗೆ ಪತ್ರ ಬರೆದಿದ್ದಾರೆ
ಪುರಸಭೆ ವ್ಯಾಪ್ತಿಯಲ್ಲಿ ಬರುವ ಬೀದಿ ದೀಪಗಳ ಲೈನ್‌ಗಳನ್ನು ಅಳವಡಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ,ಪುರಸಭೆ ವ್ಯಾಪ್ತಿಯಲ್ಲಿ ಬರುವ 1 ರಿಂದ 23 ವಾರ್ಡಗಳಲ್ಲಿ ಬೀದಿ ದೀಪಗಳು ಹಗಲು ರಾತ್ರಿ ಉರಿಯುತ್ತೀರುವುದರಿಂದ ಸದರಿ ಬೀದಿ ದೀಪಗಳನ್ನು ಆನ್ ಆಫ್ ಮಾಡಲು ಅನುಕೂಲವಾಗುವಂತ ಹಾಗೂ ಅನವಶ್ಯಕವಾದ ವಿದ್ಯುತ್ ಬಳಕೆಯನ್ನು ತಡೆಯಲು ಬೀದಿ ದೀಪಗಳ ನಿರ್ವಹಣೆಗಾಗಿ ಬಜಾರ್ ಲೈನ್ ಗಳನ್ನು ಅಳವಡಿಸಿಕೊಡಬೇಕಾಗಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಮುಖ್ಯವಾಗಿ ಬೀಡಾಡಿ ದನಗಳು ಹೆಚ್ಚಾಗಿ ಓಡಾಡುತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು GB NEWS KANNADA ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು ಬಿಡಾಡಿ ದನಗಳನ್ನು ಮಾಲಕರು ರಸ್ತೆ ಮೇಲೆ ದನಗಳನ್ನು ಬಿಡದಂತೆ ಮಾಲಕರಿಗೆ ನೋಟಿಸ್ ನೀಡಲಾಗುತ್ತದೆ ಒಂದು ವೇಳೆ ಮಾಲಕರು ಮಾತು ಕೇಳದಿದ್ದರೆ ದನಗಳನ್ನು ಗೋ ಶಾಲೆಗಳಿಗೆ ಬಿಡುತ್ತೇವೆ ಎಂದರು ಅದೇ ರೀತಿ ಪಟ್ಟಣದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸುವಂತೆ ಪಟ್ಟಣದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ವಹಿವಾಟಗಳು ಸುಗಮವಾಗಿ ನಡೆಸಲು ಟ್ರಾಫಿಕ್ ಜಾಮ್ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!