Blog

ಉನ್ನತ ಅಧಿಕಾರಿಗಳು, ರಾಜಕಾರಣಿಗಳಿಗೆ ಶಿಕ್ಷಣ ನೀಡಿದ ಸಿಂಧನೂರು ಸರಕಾರಿ ಪದವಿ ಕಾಲೇಜಿಗೆ ಸುವರ್ಣ ಸಂಭ್ರಮ

ಉನ್ನತ ಅಧಿಕಾರಿಗಳು, ರಾಜಕಾರಣಿಗಳಿಗೆ ಶಿಕ್ಷಣ ನೀಡಿದ
ಸಿಂಧನೂರು ಸರಕಾರಿ ಪದವಿ ಕಾಲೇಜಿಗೆ ಸುವರ್ಣ ಸಂಭ್ರಮ
ಸಮರ್ಥವಾಣಿ ವಾರ್ತೆ
ರಮೇಶ
ಸಿಂಧನೂರು,ಡಿ.29: ೧೯೭೧ರ ದಶಕದಲ್ಲಿ ವಿದ್ಯಾರ್ಥಿಗಳ ಸತತ ಹೋರಾಟದಿಂದ ಹಾಗೂ ಮಾಜಿ ಶಾಸಕ ಗದ್ರಟಗಿ ಅಮರೇಗೌಡರ ಅವಿರತ ಶ್ರಮದಿಂದಾಗಿ ಸಿಂಧನೂರಿಗೆ ಸರ್ಕಾರಿ ಕಾಲೇಜ ಮಂಜೂರಾಯಿತು. ೧೯೭೧ರಲ್ಲಿ ಕೇವಲ ೨೨ ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜ್‌ನಲ್ಲಿ ಪ್ರಸ್ತುತ ೩೧೦೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ಆರಂಭದಿಂದ ಇಲ್ಲಿಯವರೆಗೆ ಒಟ್ಟು ೩೫ ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು, ವಿವಿಧ ಉನ್ನತ ಹುದ್ದೆಗಳಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕಾಲೇಜ್ ಪ್ರಾರಂಭದ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆ ಎದುರುಗಡೆ ಇದ್ದ ಪಿ.ಎಲ್.ಡಿ. ಬ್ಯಾಂಕಿನಲ್ಲಿ ತರಗತಿಗಳು ನಡೆಯುತ್ತಿದ್ದವು. ಹಲವು ವ?ಗಳ ನಂತರ ಕು?ಗಿ ರಸ್ತೆಯಲ್ಲಿ ೩೨ ಎಕರೆ ಸರ್ಕಾರಿ ಜಮೀನಿನಲ್ಲಿ ಕಾಲೇಜ್ ಕಟ್ಟಡವನ್ನು ೧೯೮೧ ರಲ್ಲಿ ನಿರ್ಮಿಸಲಾಯಿತು. ನಂತರ ೨೦೦೩ ರಲ್ಲಿ ಕಲಬುರಗಿ ವಿಶ್ವವಿದ್ಯಾಲಯಕ್ಕೆ ವ್ಯಾಪ್ತಿಗೆ ಒಳಪಟ್ಟಿತ್ತು. ೨೦೨೧-೨೨ ನೇ ಸಾಲಿನಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಪ್ರಸ್ತುತ ಪದವಿ ಕಾಲೇಜು ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹೈಟೆಕ್ ಕಾಲೇಜ್ ಆಗಿ ಬೆಳೆದು ಬಂದದ್ದು ಇತಿಹಾಸವೇ ಸರಿ.
ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಹೊರತು ಪಡಿಸಿದರೆ ಸಿಂಧನೂರಿನ ಪ್ರಥಮ ದರ್ಜೆ ಸರ್ಕಾರಿ ಮಹಾವಿದ್ಯಾಲಯ ಅತ್ಯಂತ ಹಳೆಯದಾದ ಮತ್ತು ಮಹತ್ವದ ಸಾಧನೆ ಮಾಡಿದ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಈಗ ೫೦ರ ಸಂಭ್ರಮದಲ್ಲಿದ್ದು, ಡಿ.೩೦. ೩೧ ಮತ್ತು ಜ.೧ ರಂದು ಕಾಲೇಜ್‌ನಲ್ಲಿ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ೬ ಜನ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಿರುವುದು ವಿಶೇ?ವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!