ಹನುಮ ಧ್ವಜ ತೆರವು:ಜನಾರ್ಧನರೆಡ್ಡಿ ಗರ್ಂ.. ಹನುಮ ಭಕ್ತರ ಕೆಣಕಿ ಕಾಂಗ್ರೆಸ್ ಭಸ್ಮವಾಗುತ್ತಿದೆ
ಮಂಡ್ಯ.
ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮಂತನ ಧ್ವಜವನ್ನು ತೆರವುಗೊಳಿಸಿ ಕಾಂಗ್ರೆಸ್ ಸರಕಾರ ಸಮಸ್ಥ ಹನುಮಂತ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಹಿಂದೆ ರಾವಣನೆಂಬ ರಾಕ್ಷಸ ಹನುಮಂತನ ಬಾಲಕ್ಕೆ ಬೆಂಕಿ ಹೆಚ್ಚಿ ತನ್ನ ಲಂಕಾ ಸಾಮ್ರಾಜ್ಯವನ್ನು ನಾಶ ಮಾಡಿಕೊಂಡಂತೆ ಕಾಂಗ್ರೆಸ್ ನಾಯಕರು ಕೆರೆಗೋಡು ಗ್ರಾಮದಲ್ಲಿ ಹನುಮಂತನ ಧ್ವಜ ತೆರವು ಮಾಡಿ ಕರ್ನಾಟಕದ್ಯಾಂತ ಹನುಮಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿರುವ ಕಾಂಗ್ರೆಸ್ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸರ್ವನಾಶವಾಗಲಿದೆ ಎಂದು ಗಂಗಾವತಿ ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ಸೋಮವಾರ ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ಹನುಮದ್ವಜ ತೆರವು ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಹನುಮ ಧ್ವಜ ಪ್ರದರ್ಶಿಸಿ ನಂತರ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಸಮಸ್ಥ ಗ್ರಾಮಸ್ಥರು ಸೇರಿ ಹನುಮಂತನ ನಾಮಸ್ಮರಣೆ ಮಾಡಿ ಅಲ್ಲಿ ಹನುಮ ಧ್ವಜವನ್ನು ಹಾಕಿದ್ದಾರೆ. ಈ ಘಟನೆಯಲ್ಲಿ ಯಾವುದೇ ರಾಜಕೀಯ ನಡೆದಿಲ್ಲ ಎಂಬುದು ನಾನು ಪ್ರತ್ಯಕ್ಷ ಕಂಡಿದ್ದೇನೆ. ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ನಾಯಕರು ಸ್ವತಃ ಹನುಮಂತನ ಧ್ವಜ ತೆರವು ಮಾಡಿ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ಸರಕಾರದ ಇಂತಹ ಕುಚೋದ್ಯದಿಂದಾಗಿ ಇಂದು ಮಂಡ್ಯ ಜಿಲ್ಲೆಯಲ್ಲಿ ಜನರು ಕಾಂಗ್ರೆಸ್ ಸರಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಹನುಮಂತನನ್ನು ಕೆಣಕುವ ಕೆಲಸ ಮಾಡಿದ್ದಾರೆ. ಹನುಮಂತ ಲಂಕೆಯ ಸಾಮ್ರಾಜ್ಯ ಭಸ್ಮ ಮಾಡಿದಂತೆ ಹನುಮಂತನ ಭಕ್ತರು ರಾವಣ ಸ್ವಭಾವ ಹೊಂದಿರುವ ಕಾಂಗ್ರೆಸ್ ಕೂಡಾ ಸರ್ವ ನಾಶವಾಗಲಿದೆ. ಈಗಲಾದರೂ ಎಚ್ಚತ್ತುಕೊಂಡು ಸರಕಾರ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಪುನಃ ಹಾಕಿ ಹನುಮ ಭಕ್ತರನ್ನು ಸಮಾಧಾನಪಡಿಸುವ ಕೆಲಸ ಮಾಡಬೇಕು ಎಂದು ರೆಡ್ಡಿ ಅಗ್ರಹಿಸಿದರು.