Blog

ಹನುಮ ಧ್ವಜ ತೆರವು: ಸುಗ್ರೀವಾ ಖಂಡನೆ.. ಹನುಮಂತನ ಬಗ್ಗೆಯೂ ಕಾಂಗ್ರೆಸ್ಸಿಗೆ ದುರ್ಬುದ್ಧಿ

ಗಂಗಾವತಿ.
ಕಳೆದ ವಾರವಷ್ಟೇ ದೇಶವಷ್ಟೇ ಅಲ್ಲ ಜಗತ್ತಿನ ಜನ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ಕ್ಷಣವನ್ನು ಶ್ರದ್ಧಾ, ಭಕ್ತಿಯಿಂದ ಸಂಭ್ರಮಿಸಿದರು. ಆದರೆ ಇದನ್ನು ಸಹಿಸದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕರ್ನಾಟಕದ ಕಾಂಗ್ರೆಸ್ ಸರಕಾರ ಶ್ರೀರಾಮನ ಬಗ್ಗೆ ಅಪಸ್ವರ ಎತ್ತಿದ್ದರು. ಒಂದು ವಾರ ಕಳೆಯುವುದರಲ್ಲಿ ಶ್ರೀರಾಮನ ಬಂಟ ಹನುಮಂತನ ಭಕ್ತರ ಭಾವನೆಗೂ ಧಕ್ಕೆ ತಂದಿರುವ ಕಾಂಗ್ರೆಸ್ ಸರಕಾರ ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ತೆರವು ಮಾಡುವ ಮೂಲಕ ತನ್ನ ದುರ್ಬುದ್ಧಿಯನ್ನು ತೋರಿಸಿದೆ ಎಂದು ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವಾ ಆಕ್ರೋಶ ವ್ಯಕ್ತಪಡಿಸಿದರು.
ಕೆರೆಗೋಡು ಗ್ರಾಮದ ಘಟನೆ ಕುರಿತು ಸಮರ್ಥವಾಣಿಯೊಂದಿಗೆ ಮಾತನಾಡಿದ ಅವರು ಗ್ರಾಮದ ಸಮಸ್ಥ ಜನರು ಸೇರಿ ಹನುಮಂತನ ಮೇಲಿನ ಶ್ರದ್ಧೆಯಿಂದ ಅಲ್ಲಿ ಹನುಮ ಧ್ವಜವನ್ನು ಹಾಕಿದೆ. ಇದನ್ನು ಸಹಿಸದ ಕಾಂಗ್ರೆಸ್ ಸರಕಾರ ಏಕಾ ಏಕಿ ಧ್ವಜವನ್ನು ತೆರವು ಮಾಡಿ ಹಿಂದು ಜನರ ಭಕ್ತಿಯ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದೆ. ಯಾರನ್ನೋ ಓಲೈಸುವುದಕ್ಕಾಗಿ ಸಮಸ್ಥ ಹಿಂದೂಗಳಿಗೆ ಕಾಂಗ್ರೆಸ್ ಅನ್ಯಾಯ ಮಾಡಲು ಹೊರಟಿದೆ. ಕೆರೆಗೋಡು ಗ್ರಾಮಸ್ಥರು ಹನುಮ ಧ್ವಜವನ್ನು ಹಾಕಿರುವಾಗ ಅದನ್ನು ಯಾರು ವಿರೋಧಿಸಿಲ್ಲ. ಆದರೂ ಕಾಂಗ್ರೆಸ್ ಸರಕಾರ ಅಲ್ಲಿನ ಜಿಲ್ಲಾಡಳಿತದ ಮೂಲಕ ಹನುಮಮಂತನ ಧ್ವಜವನ್ನು ತೆರವು ಮಾಡಿ ಕಣ್ಣೊರೆಸುವ ತಂತ್ರ ಮಾಡಲು ರಾಷ್ಟ್ರಧ್ವಜ ಹಾಕಲು ಮುಂದಾಗಿದೆ. ಹನುಮ ಧ್ವಜವನ್ನು ತೆರವು ಮಾಡದೇ ಅದರ ಪಕ್ಕದಲ್ಲೇ ರಾಷ್ಟ್ರಧ್ವಜವನ್ನು ಹಾಕಿ ಹಿಂದು ಮತ್ತು ರಾಷ್ಟ್ರದ ಭಕ್ತಿಯನ್ನು ಕಾಂಗ್ರೆಸ್ ಮೆರೆಯಬೇಕಿತ್ತು. ಆದರೆ ಹನುಮ ಧ್ವಜ ತೆರವು ಮಾಡಿ ಜನರ ಭಾವನೆಯನ್ನು ಕೆರಳಿಸುವ ಕೆಲಸ ಮಾಡಿದೆ. ಇಂತಹ ಸರಕಾರವನ್ನು ಆಯ್ಕೆ ಮಾಡಿರುವ ಜನರು ಈಗ ಪರಿತಪಿಸುತ್ತಿದ್ದಾರೆ. ಹಿಂದುಗಳ ಬಗ್ಗೆ ದುರ್ಬದ್ಧಿ ಹೊಂದಿರುವ ಕಾಂಗ್ರೆಸ್ ಸರಕಾರಕ್ಕೆ ಕಾನೂನಿನ ಮೇಲೆಯೂ ಗೌರವ ಇಲ್ಲ. ಹನುಮ ಧ್ವಜ ತೆರವು ಮಾಡುವ ನೆಪದಲ್ಲಿ ಏಕಾ ಏಕಿ ರಾಷ್ಟ್ರಧ್ವಜ ಹಾಕಿದೆ. ರಾಷ್ಟ್ರಧ್ವಜ ಯಾವ ಸಮಯದಲ್ಲಿ ಹಾಕಬೇಕು. ಯಾವ ಸಮಯದಲ್ಲಿ ಇಳಿಸಬೇಕು. ಪರಿಜ್ಞಾನ ಇಲ್ಲದ ಕಾಂಗ್ರೆಸ್ ಮುಖಂಡರು ರಾಷ್ಟ್ರಧ್ವಜ ಹಾಕುವ ಸಂದರ್ಭದಲ್ಲಿ ಗೌರವ ಸಲ್ಲಿಸುವ ಕೆಲಸವು ಮಾಡದೇ ರಾಷ್ಟ್ರದ ಬಗ್ಗೆ ತನ್ನ ಅಗೌರವವನ್ನು ಪ್ರದರ್ಶಿಸಿದೆ ಎಂದು ಆರೋಪಿಸಿರುವ ಸಂಗಮೇಶ ಸುಗ್ರೀವಾ ಅವರು ತಕ್ಷಣ ಮುಖ್ಯಮಂತ್ರಿಗಳು ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಮತ್ತು ರಾಷ್ಟ್ರಧ್ವಜ ಎರಡನ್ನು ಹಾರಾಡುವಂತೆ ಮಾಡಿ ಗ್ರಾಮಸ್ಥರ ಆಕ್ರೋಶವನ್ನು ಶಮನ ಮಾಡಬೇಕು. ಮತ್ತು ಮಾಡಿರುವ ತಪ್ಪಿಗೆ ಅಲ್ಲಿನ ಜಿಲ್ಲಾಡಳಿತ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button