ಹಿರೇಸೂಳಿಕೇರಿ ವನ್ಯಜೀವಿ ಸಂವರಕ್ಷಣಾ ಪ್ರದೇಶ. ಸರಕಾರ ಘೋಷಣೆ:ಶಾಸಕ ಜನಾರ್ಧನರೆಡ್ಡಿ ಹರ್ಷ
ಗಂಗಾವತಿ.
ಕೊಪ್ಪಳ ತಾಲೂಕು ಮತ್ತು ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿರೇಸೂಳಿಕೇರಿ ಹಾಸಗಲ್, ಚಿಲಕಮುಖಿ, ಅರಸಿನಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಕರಡಿ ಮತ್ತಿತರ ವನ್ಯ ಜೀವಿಗಳ ಸಂತತಿ ಹೆಚ್ಚಿರುವುದರಿಂದ ಸುಮಾರು ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೯೭ರ ಅಡಿಯಲ್ಲಿ ರಾಜ್ಯ ಸರಕಾರ ೨೯೧೮ ಎಕರೆ ಪ್ರದೇಶವನ್ನು ಕರಡಿ ಸಂರಕ್ಷಣಾ ಪ್ರದೇಶವೆಂದು ಘೊಷಣೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಅರಣ್ಯ ಸಚಿವರು ಮತ್ತು ಸರಕಾರದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಕಳೆದ ಜ.೧೯ ರಂದು ಸರಕಾರದ ಅರಣ್ಯ ಇಲಾಖೆ ಅಧಿನ ಕಾರ್ಯದರ್ಶಿ ಅವರು ಹೊರಡಿಸಿರುವ ಅಧಿಸೂಚನೆಯ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನರೆಡ್ಡಿ ಅವರು ಮಾಧ್ಯಮಗಳ ಮೂಲಕ ಸರಕಾರಕ್ಕೆ ಅಭಿನಂದಿಸಿದ್ದು, ತಾವು ಚುನಾವಣೆಯಲ್ಲಿ ಅಲ್ಲಿನ ಜನತೆಗೆ ನೀಡಿದ್ದ ಭರವಸೆಯಂತೆ ಮತ್ತು ಈ ಪ್ರದೇಶದಲ್ಲಿ ಕರಡಿ ಮತ್ತಿತರ ವನ್ಯ ಜೀವಿಗಳಿಂದ ಅಲ್ಲಿನ ರೈತ ಸಮುದಾಯ ಸಮಸ್ಯೆ ಎದುರಿಸುತ್ತಿತ್ತು. ಈ ಸಮಸ್ಯೆಗೆ ಮುಕ್ತಿ ಹಾಡಲು ನಾನು ಸರಕಾರಕ್ಕೆ ನಿರಂತರ ಮನವಿ ಸಲ್ಲಿಸಿ ಈ ಪ್ರದೇಶವನ್ನು ವನ್ಯಜೀವಿ ಸಂವರಕ್ಷಣಾ ಪ್ರದೇಶವೆಂದು ಘೋಷಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದ್ದೆ. ನನ್ನ ಮನವಿಯನ್ನು ಪರಿಗಣಿಸಿರುವ ಸರಕಾರ ಈಗ ಹಿರೇಸೂಳಿಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಹಿರೇಸೂಳೆಕೆರೆ, ಹಾಸಗಲ್, ಚಿಲಕಮುಖಿ, ಅರಸಿನಕೆರೆ ಗ್ರಾಮದ ಹಲವು ಸವೇ ನಂಬರ್‌ಗಳ ಭೂ ಪ್ರದೇಶದ ಸುಮಾರು ೨೯೧೮ ಎಕರೆ ಪ್ರದೇಶವನ್ನು ಕರಡಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದೆ. ಮತ್ತು ಈ ಪ್ರದೇಶದ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಂದ ರಕ್ಷಿಸಲು ಹಲವು ಕ್ರಮ ಕೈಗೊಳ್ಳಬೇಕು. ಮತ್ತು ವನ್ಯಜೀವಿಗಳಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರಕಾರ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನಮೂದಿಸಿದೆ.
ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಕರಡಿ ಮತ್ತಿತರ ವನ್ಯಜೀವಿಗಳಿಂದ ರೈತರು, ಜನ ಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮತ್ತು ಕರಡಿ ದಾಳಿಗೆ ತುತ್ತಾಗಿದ್ದಾರೆ. ಇದರಿಂದ ಮುಕ್ತಿ ನೀಡಲು ಈ ಭಾಗದ ಜನರು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಜನರ ಬೇಡಿಕೆಯನ್ನು ನಾನು ಗಮನಿಸಿ ಜನರ ಮತ್ತು ವನ್ಯಜೀವಿಗಳ ರಕ್ಷಣೆಯ ಉದ್ದೇಶವನ್ನಿಟ್ಟುಕೊಂಡು ಈ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಸಿಸಲು ಒತ್ತಾಯ ಮಾಡುತ್ತಿದೆ. ಹತ್ತು ತಿಂಗಳ ಅವಧಿಯಲ್ಲಿ ನನ್ನ ಮನವಿಗೆ ಸರಕಾರ ಸ್ಪಂದಿಸಿ ಈಗ ೨೦೧೯ ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಪ್ರದೇಶವೆಂದು ಘೋಷಣೆ ಮಾಡಿ ಜನರಿಗೆ ಒಳಿತು ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದ ಸುತ್ತಲು ರಕ್ಷಣೆ ಗೊಡೆ ಮತ್ತಿತರ ಮರಗಳನ್ನು ಬೆಳೆಸಿ ವನ್ಯಜೀವಿ ಸಂರಕ್ಷಣೆಗೆ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮತ್ತು ಈ ಭಾಗದಲ್ಲಿ ಕರಡಿ ಧಾಮ ಅಥವಾ ವನ್ಯಜೀವಿಗಳ ಸಂಗ್ರಾಲಯ ಪ್ರಾರಂಭಿಸುವ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಜನಾರ್ಧನರೆಡ್ಡಿ ಹೇಳಿದ್ದಾರೆ.