Blog

ಗಂಗಾವತಿ-ದರೋಜಿ ರೇಲ್ವೆ ಲೈನ್.. ರೂ.900 ಕೋಟಿ ಡಿಪಿಆರ್ ಸಲ್ಲಿಕೆ

ಗಂಗಾವತಿ
ನಗರದ ರೇಲ್ವೆ ಸ್ಟೇಷನ್ ನಿಂದ ದರೋಜಿ ರೇಲ್ವೆ ಸ್ಟೇಷನ್ ವರೆಗೆ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅಂದಾಜುರೂ. 900 ಕೋಟಿಗಳ ಡಿಪಿಆರ್ನ್ನು  ರೇಲ್ವೆ ಬೋರ್ಡ್ ಗೆ  ಸಲ್ಲಿಸಲಾಗುದೆ ಎಂಬ ಮಾಹಿತಿ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಡಿ.23 ರಂದು ಸಲ್ಲಿಕೆಯಾಗಿರುವ ಬಗ್ಗೆ  ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.
ತೀವ್ರಗತಿಯಲ್ಲಿ ಈ ರೇಲ್ವೆ ಲೈನ್ ನ ಸರ್ವೇ ಕಾರ್ಯ ಮುಕ್ತಾಯವಾಗಲು ಸಂಸದ ಸಂಗಣ್ಣ ಕರಡಿಯವರ ಕಾಳಜಿ ಪ್ರಮುಖ ಕಾರಣವಾಗಿದೆ.  ಅಂದಾಜು ವೆಚ್ಚ ರೂ.900 ಕೋಟಿಗಳನ್ನು ಕೇಂದ್ರ ಸರಕಾರದಿಂದ ಮಂಜೂರು ಮಾಡಿಸಲು ಸಂಗಣ್ಣನವರು ಸಥ ಪ್ರಯತ್ನ ನಡೆಸುತ್ತಿದ್ದಾರೆ.  ಗಂಗಾವತಿ-ದರೋಜಿ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣವಾದಲ್ಲಿ ಗಂಗಾವತಿ-ಗಿಣಿಗೇರಾ-ಹೊಸಪೇಟೆ ಮಾರ್ಗವಾಗಿ ಬಳ್ಳಾರಿಯನ್ನು ತಲುಪಬೇಕಾದ ರೇಲ್ವೇಗಳು ನೇರವಾಗಿ ಬಳ್ಳಾರಿಯನ್ನು ತಲುಪುತ್ತವೆ.  ಇದರಿಂದ ಸಮಯ ಮತ್ತು ಇಂಧನದ ವ್ಯಚ್ಚ ಕೂಡಾ  ಉಳಿಯಲಿದೆ.  ಇದೇ ರೀತಿ ಬಾಡಿಗೆ ಮತ್ತು ಪ್ರಯಾಣಿಕರ ಟಿಕೆಟ್ ಹಣದಲ್ಲಿ ಉಳಿತಾಯವಾಗಲಿದೆ. ‌ ಈ ಯೋಜನೆ
ಲೋಕಸಭಾ ಚುನಾವಣೆಯ ಪೂರ್ವದಲ್ಲಿಯೇ ಸಂಸದ ಸಂಗಣ್ಣ  ಕರಡಿಯವರು ನೂತನ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅನುದಾನ ಒದಗಿಸುತ್ತಾರೆ ಎಂಬ ವಿಶ್ವಾಸವನ್ನು ಗಂಗಾವತಿ ಭಾಗದ ಜನರು ಹೊಂದಿದ್ದಾರೆ ಎಂದು ಅಶೋಕಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!