ಫ್ಲೇಕ್ಸ್‌ಗೆ ಕಡಿವಾಣ: ಪೌರಾಯುಕ್ತ ಸೂಚನೆ ಅನುಮತಿ ಇಲ್ಲದೇ ಹಾಕಿದರೆ ಕ್ರಿಮಿನಲ್ ಪ್ರಕರಣ
ಗಂಗಾವತಿ.
ನಗರದಾದ್ಯಂತ ಅನಧಿಕೃತವಾಗಿ ಫ್ಲೇಕ್ಸ್ ಬ್ಯಾನರ್ ಅಳವಡಿಕೆಗೆ ಕಡಿವಾಣ ಹಾಕಲಾಗುತ್ತಿದೆ. ಜ.೧ ರಿಂದಲೇ ಈ ಆದೇಶ ಜಾರಿಯಾಗಲಿದೆ. ನಗರಸಭಗೆ ಅನುಮತಿ ಪಡೆಯದೇ ಫ್ಲೇಕ್ಸ್, ಬ್ಯಾನರ್ ಅಳವಡಿಸಿದರೆ ಸಂಬಂಧಿಸಿದ ಪ್ರೀಂಟಿಂಗ್ ಪ್ರೇಸ್ ಮಾಲೀಕರು ಮತ್ತು ಮೇದಾರ್ ಅವರನ್ನೆ ಹೊಣೆ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್.ವಿರುಪಾಕ್ಷಮೂರ್ತಿ ಸೂಚನೆ ನೀಡಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳ ಮೂಲಕ ನಗರದ ಸಾರ್ವಜನಿಕರಿಗೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ಗಳಿಗೆ ಹಾವಳಿಗೆ ಕಡಿವಾಣ ಹಾಕುವ ಉದ್ದೇಶಕ್ಕೆ ನಗರಸಭೆಯ ಅನುಮತಿ ಕಡ್ಡಾಯಗೊಳಿಸಲಾಗಿದೆ. ಹಬ್ಬ, ಜಾತ್ರೆ, ಹೊಸವರ್ಷ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರು ವಿಶೇಷ ಸಂದರ್ಭದಲ್ಲಿ
ನಗರದಲ್ಲಿ ಫ್ಲೆಕ್ಸ್- ಬ್ಯಾನರ್ ಅಳವಡಿಸಲು ಕಡ್ಡಾಯವಾಗಿ ನಗರಸಭೆಯ ಅನುಮತಿಪಡೆಯಬೇಕು. ಅನುಮತಿ ಅವಧಿ ಮುಗಿದ ತಕ್ಷಣ ಕಡ್ಡಾಯವಾಗಿ ತೆರವು ಮಾಡಿಕೊಳ್ಳಬೇಕು. ನಗರಸಭೆಯ ಅಧಿಕೃತ ಅನುಮತಿ ಪಡೆಯದೇ ಫ್ಲೆಕ್ಸ್ ಬ್ಯಾನರ್ ಅಳವಡಿಸಿದ್ದಲ್ಲಿ ಅಂತಹ ಮೇದಾರರು ಹಾಗೂ ಪ್ರಿಟಿಂಗ್ ಮಷಿನ್ ಗಳ ಮಾಲಿಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ನಗರದ ಜನರಿಗೆ ಉತ್ತಮ ಹಾಗೂ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಮತ್ತು ನಗರವನ್ನು ಸುಂದರೀಕರಣಗೊಳಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ನಗರದ ಸಾರ್ವಜನಿಕರು ನಗರಸಭೆಗೆ ಸಹಕಾರ ನೀಡಬೇಕು ಎಂದು ಪೌರಾಯುಕ್ತರು ಕೊರಿದ್ದಾರೆ.