Blog

ಇಕ್ಬಾಲ್ ಅನ್ಸಾರಿ ವೇಸ್ಟ್‌ಫೇಲೋ.. ಶಾಸಕ ಜನಾರ್ಧನರೆಡ್ಡಿ ರೆಡ್ಡಿ ಆರೋಪ

ಗಂಗಾವತಿ.
ಕ್ಷೇತ್ರದಲ್ಲಿ ಸೋತು ಸುಣ್ಣಾಗಿದ್ದರೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಡಳಿತ ಮತ್ತು ಅಭಿವೃದ್ಧಿ ವಿಷಯದಲ್ಲಿ ಅಡ್ಡಗಾಲು ಆಗುತ್ತಿದ್ದಾರೆ. ಅವರೊಬ್ಬ ವೆಸ್ಟ್‌ಫೇಲೋ ರಾಜಕಾರಣಿ ಎಂಬುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದ ನಾಯಕರೇ ಅವರನ್ನು ಡಸ್ಟ್‌ಬಿನ್‌ಗೆ ಹಾಕುತ್ತಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೇರವಾಗಿ ಆರೋಪಿಸಿದರು.
ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ನಾಮ ನಿರ್ದೇಶನ ಸದಸ್ಯತ್ವದ ಆದೇಶವನ್ನು ರದ್ದುಪಡಿಸಿರುವುದು ಮತ್ತು ಕ್ಷೇತ್ರದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಸರಕಾರದ ಮೂಲಕ ಕೊಕ್ಕೆ ಹಾಕಿಸುವ ಸಂಗತಿ ಕುರಿತು ಶಾಸಕ ಜನಾರ್ಧನರೆಡ್ಡಿ ಅನ್ಸಾರಿ ವಿರುದ್ಧ ಗುಡುಗಿದರು. ಜನರ ಆಪೇಕ್ಷೆಯಂತೆ ನಾನು ಗಂಗಾವತಿ ಕ್ಷೇತ್ರದ ಶಾಸಕನಾಗಿದ್ದೇನೆ. ಹೀಗಾಗಿ ಗಂಗಾವತಿಯ ಅಭಿವೃದ್ಧಿಗೆ ನಾನು ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಗಂಗಾವತಿ ಕ್ಷೇತ್ರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಶಾಸಕರಾಗಿರುವ ಅವರು ಅಭಿವೃದ್ಧಿ ವಿಷಯದಲ್ಲಿ ಮತ್ತು ನಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ನಾಯಕರು ಅವರನ್ನು ಓಲೈಸುತ್ತಾರೆ. ಚುನಾವಣೆ ಮುಗಿದ ನಂತರ ಕಾಂಗ್ರೆಸ್ ನಾಯಕರೇ ಅವರನ್ನು ಸಂಪೂರ್ಣ ನಿರ್ಲಕ್ಷ ಮಾಡುತ್ತಾರೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಬರುವ ದಿನಗಳಲ್ಲಿ ಗಂಗಾವತಿ ಅಭಿವೃದ್ಧಿಯನ್ನು ರಾಜ್ಯಕ್ಕೆ ಮಾದರಿಯಾಗಿ ತೋರಿಸುತ್ತೇನೆ. ಪ್ರತಿಷ್ಟೆಗಾಗಿ ಯಾರು ರಾಜಕಾರಣ ಮಾಡಬಾರದು. ಅಭಿವೃದ್ಧಿ ವಿಷಯದಲ್ಲಿ ಪ್ರಬುದ್ಧತೆ ಮೆರೆಯಬೇಕು ಎಂದು ಜನಾರ್ಧನರೆಡ್ಡಿ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button