ತೆರವು ಮಾಡದ ಜಾಹಿರಾತು ಫಲಕ- ನೀತಿ ಸಂಹಿತಿ ಉಲ್ಲಂಘಿಸುತ್ತಿರುವ ಕೆಕೆಆರ್‌ಟಿಸಿ
ಗಂಗಾವತಿ.
ಶನಿವಾರ ಮಧ್ಯಾಹ್ನದ ೩ ಗಂಟೆಯಿಂದ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತಿ ಜಾರಿಯಾಗಿದೆ. ಆದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಬಸ್ಸಿಗೆ ಅಂಟಿಸಿರುವ ಜಾಹಿರಾತು ಫಲಕವನ್ನು ತೆರವು ಮಾಡದೇ ಗಂಗಾವತಿ ಕೆಎಸ್‌ಆರ್‌ಟಿ ಘಟಕ ನೀತಿ ಸಂಹಿತೆ ಉಲ್ಲಂಘಿಸುತ್ತಿರುವುದು ಬಹಿರಂಗವಾಗಿದೆ.
ಭಾನುವಾರ ಸಂಜೆ ೫ ಗಂಟೆಗೆ ಕೊಲ್ಲಾಪುರದಿಂದ ಗಂಗಾವತಿಗೆ ಬಂದಿರುವ ಸಂಖ್ಯೆ ಕೆಎ.೩೭, ಎಫ್.೦೮೩೭ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಬಸ್ಸಿಗೆ ಅಂಟಿಸಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರವಿರುವ ಕನಕಗಿರಿ ಉತ್ಸವದ ಜಾಹಿರಾತು ಫಲಕ ತೆರವು ಮಾಡಿಲ್ಲ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಸ್‌ಗೆ ಅಂಟಿಸಿರುವ ರಾಜಕೀಯ ನಾಯಕರ ಮತ್ತು ಜನಪ್ರತಿನಿಧಿಗಳ ಜಾಹಿರಾತನ್ನು ತೆರವು ಮಾಡುವಂತೆ ಅಧಿಕೃತವಾಗಿ ಆದೇಶ ಮಾಡಲಾಗಿದೆ. ಆದರೆ ಗಂಗಾವತಿ ಕೆಎಸ್‌ಆರ್‌ಟಿಸಿ ಘಕದ ಬಸ್‌ಗಳ ಮೇಲೆ ಜಾಹಿರಾತು ಫಲಕಗಳು ರಾರಾಜಿಸುತ್ತಿವೆ. ಈ ಕುರಿತು ನಗರಸಭೆ ಸದಸ್ಯ ಉಮೇಶ ಸಿಂಗನಾಳ ಭಾನುವಾರ ಸಂಜೆ ಕೊಲ್ಲಾಪುರ ಗಂಗಾವತಿ ಮಾರ್ಗದ ಬಸ್ಸಿಗೆ ಅಂಟಿಸಿರುವ ಜಾಹಿರಾತು ಫಲಕವನ್ನು ಗಮನಿಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್‌ಗೆ ಅಂಟಿಸಿರುವ ಜಾಹಿರಾತು ಫಲಕ ತೆರವು ಮಾಡದೇ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ಮತ್ತು ತಕ್ಷಣ ಎಲ್ಲಾ ಬಸ್‌ಗಳಿಗೆ ಅಂಟಿಸಿರುವ ಜನಪ್ರತಿನಿಧಿಗಳಿರುವ ಜಾಹಿರಾತು ಫಲಕಗಳನ್ನು ತೆರವು ಮಾಡುವಂತೆ ಅಗ್ರಹಿಸಿದರು.