ಉತ್ಸವ ಬ್ಯಾನರ್‌ಗಳಲ್ಲಿ ಶಾಸಕರ ಫೊಟೋಗೆ ಕೋಕ್. ಕೆಆರ್‌ಪಿಪಿ ಮುಖಂಡರಿಂದ ಡಿಸಿಗೆ ಘೇರಾವ್
ಗಂಗಾವತಿ.
ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಕ್ಷಣಗಣೆ ಆರಂಭವಾಗಿರುವ ಬೆನ್ನೆಲ್ಲೆ ಉತ್ಸವದ ಬ್ಯಾನರ್‌ಗಳಲ್ಲಿ ಕ್ಷೇತ್ರದ ಶಾಸಕ ಹಾಗೂ ಉತ್ಸವದ ರೂವಾರಿ ಗಾಲಿ ಜನಾರ್ಧನರೆಡ್ಡಿ ಅವರ ಫೊಟೋವನ್ನು ಹಾಕದೇ ಕೋಕ್ ನೀಡಿರುವ ಕಾರಣಕ್ಕೆ ಶಾಸಕರ ಬೆಂಬಲಿಗರು ಮತ್ತು ಕೆಆರ್‌ಪಿಪಿ ಮುಖಂಡರು ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಡಿಸಿ ನಲೀನ್ ಅತುಲ್‌ಗೆ ದಿಕ್ಕಾರ ಕೂಗಿ ಘೇರಾವ್ ಹಾಕಿದ ಘಟನೆ ನಡೆಯಿತು.
ಭಾನುವಾರ ಜಿಲ್ಲಾಧಿಕಾರಿ ನಲೀನ್ ಅತುಲ್, ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ, ಸಹಾಯಕ ಆಯುಕ್ತ ಕ್ಯಾಪ್ಟರ್ ಮಹೇಶ ಮಾಲಗಿತ್ತಿ ಮತ್ತಿತರ ಅಧಿಕಾರಿಗಳು ಉತ್ಸವದ ಪ್ರಮುಖ ವೇದಿಕೆ ಸಿದ್ಧತೆಯನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಆಗಮಿಸಿದ ಕೆಆರ್‌ಪಿಪಿ ಮುಖಂಡರು ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಜನಾರ್ಧನರೆಡ್ಡಿ ಬೆಂಬಲಿಗರು ಮತ್ತು ಕೆಆರ್‌ಪಿಪಿ ಮುಖಂಡರಾದ ರಾಜೇಶರೆಡ್ಡಿ, ಪಂಪಣ್ಣ ನಾಯಕ, ಜೀಲಾನಿ ಪಾಷಾ, ಅರ್ಜುನ ನಾಯಕ ಮತ್ತಿತರು ನೇರವಾಗಿ ಜಿಲ್ಲಾಧಿಕಾರಿಗಳನ್ನು ಶಾಸಕರ ಫೋಟೋ ಯಾಕೆ ಬಳಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಉತ್ಸವ ಸರಕಾರಿ ಕಾರ್ಯಕ್ರಮವಾಗಿದೆ. ಶಿಷ್ಟಾಚಾರದಂತೆ ಬ್ಯಾನರ್ ಹಾಕಲಾಗಿರುತ್ತದೆ. ಈ ಕುರಿತು ಶಾಸಕರಿಗೆ ನಾನು ಮನವರಿಕೆ ಮಾಡುತ್ತೇನೆ ಎಂದು ಸಮಜಾಯಿಸಿ ನೀಡಲು ಮುಂದಾದರು. ಇದಕ್ಕೆ ಒಪ್ಪದ ಶಾಸಕ ರೆಡ್ಡಿ ಬೆಂಬಲಿಗರು ಸರಕಾರಿ ಕಾರ್ಯಕ್ರವೆಂದರೆ ಶಾಸಕರು ಸರಕಾರದ ಪ್ರತಿನಿಧಿಗಳಲ್ಲವೇ. ಕನಕಗಿರಿ ಉತ್ಸವದ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಫೋಟೋ ಹಾಕಿದ್ದಿರಿ. ಈ ಹಿಂದೆ ನಡೆದ ಹಲವು ಆನೆಗೊಂದಿ ಉತ್ಸವದ ಬ್ಯಾನರ್‌ಗಳಲ್ಲಿ ಸ್ಥಳೀಯ ಶಾಸಕರ ಫೋಟೋ ಹಾಕುತ್ತಿದ್ದರು. ಈಗ ಶಾಸಕರ ಫೊಟೋ ಹಾಕದರಿರುವುದು ರಾಜಕೀಯ ನಡೆದಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದೇ ಜಿಲ್ಲಾಧಿಕಾರಿಗಳು ಶಾಸಕರ ಬೆಂಬಲಿಗರೊಂದಿಗೆ ಮಾತನಾಡದೇ ತೆರಳಿದರು. ಆದರೆ ಸಹಾಯಕ ಆಯುಕ್ತ ಕ್ಯಾಪ್ಟರ್ ಮಹೇಶ ಮಾಲಗಿತ್ತಿ ಮಧ್ಯಸ್ಥಿತಿಕೆವಹಿಸಿ ಜಿಲ್ಲಾಡಳಿತ ಶಾಸಕರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಿಲ್ಲ ಎಂದು ಸಮಜಾಯಿಸಿ ನೀಡಲು ಮುಂದಾದರು. ಆದರೆ ಇದಕ್ಕೆ ಒಪ್ಪದ ಕೆಆರ್‌ಪಿಪಿ ಮುಖಂಡ ರಾಜೇಶರೆಡ್ಡಿ, ಜೀಲಾನಿ ಪಾಷ್ ಮತ್ತಿತರು ಉತ್ಸವದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಶಾಸಕರು ಕಳೆದ ಹತ್ತು ದಿನಗಳಿಂದ ಹಗಲು ರಾತ್ರಿ ಶ್ರಮವಹಿಸಿ ಉತ್ಸವದ ಯಶಸ್ವಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಶಾಸಕರ ಬಗ್ಗೆ ಸಂಪೂರ್ಣ ನಿರ್ಲಕ್ಷವಹಿಸುತ್ತಿರುವುದು ಕಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್‌ಪಿಪಿ ಮುಖಂಡರ ಆರೋಪಕ್ಕೆ ಕಿವಿಗೊಡದೇ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರಿಗಳ ತಂಡದೊಂದಿಗೆ ನಿರ್ಗಮಿಸಿದ ಘಟನೆ ನಡೆಯಿತು.
ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಕೆಆರ್‌ಪಿಪಿ ಮುಖಂಡರು ಆನೆಗೊಂದಿ ಉತ್ಸವ ಅದ್ದೂರಿಯಾಗಿ ನಡೆಸಲು ಶಾಸಕರು ವಿಶೇಷ ಆಸಕ್ತಿವಹಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಇದರಲ್ಲಿ ರಾಜಕೀಯ ನಡೆಯುತ್ತಿದೆ. ಶಾಸಕರು ಉತ್ಸವದ ಸಂಪೂರ್ಣ ನೇತೃತ್ವವಹಿಸಿದ್ದು, ಅಧ್ಯಕ್ಷತೆಯೂ ಅವರದೇ ಇರುತ್ತದೆ. ಆದರೆ ಶಿಷ್ಟಾಚಾರ ಪಾಲನೆಯಿಂದಾಗಿ ಬ್ಯಾನರ್‌ಗಳಲ್ಲಿ ಫೊಟೋ ಹಾಕಿಲ್ಲ ಎಂದು ಜಿಲ್ಲಾಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಶಾಸಕರನ್ನು ನಿರ್ಲಕ್ಷ ಮಾಡಿದರೆ ಕಾರ್ಯಕ್ರಮದಿಂದಲೇ ಶಾಸಕರನ್ನು ದೂರ ಉಳಿಯುವಂತೆ ಒತ್ತಾಯಿಸುತ್ತವೆ ಎಂದು ಜೀಲಾನಿಪಾಷಾ ಮತ್ತಿತರು ಎಚ್ಚರಿಕೆ ನೀಡಿದರು.
ಬಾಕ್ಸ್:
ಉತ್ಸವಕ್ಕೆ ಕೈಕೊಟ್ಟ ಸಿಎಂ, ಡಿಸಿಎಂ..!!
ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿಗೆ ಉದ್ಘಾಟನೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರುಗಳು ಐತಿಹಾಸಿಕ ಆನೆಗೊಂದಿ ಉತ್ಸವ ಉದ್ಘಾಟನೆಗೆ ಕೈ ಕೊಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟನೆ, ಪ್ರವಾಸೋಧ್ಯಮ ಸಚಿವ ಹೆಚ್.ಕೆ.ಪಾಟೀಲ್ ಘನ ಉಪಸ್ಥಿತಿ ಎಂಬ ಮಾಹಿತಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಉತ್ಸವದ ಅಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿದೆ. ಹೀಗಾಗಿ ಸಿಎಂ ಡಿಸಿಎಂ ಬರುವುದಿಲ್ಲ ಎಂಬುದು ಪಕ್ಕಾ ಆಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಪ್ರತಿಕ್ರೀಯೆ ನೀಡಿದ್ದು, ಸಿಎಂ ಮತ್ತು ಡಿಸಿಎಂ ಪ್ರವಾಸ ಕಾರ್ಯಕ್ರಮದ(ಟಿಪಿ) ನಮಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು. ಕಳೆದ ಮಾ.೨ ರಂದು ಸುದ್ದಿಗೋಷ್ಟಿ ನಡೆಸಿದ್ದ ಶಾಸಕ ಜನಾರ್ಧನರೆಡ್ಡಿ ಆನೆಗೊಂದಿ ಉತ್ಸವವನ್ನು ಮುಖ್ಯಮಂತ್ರಿ ಉದ್ಘಾಟಿಸುತ್ತಾರೆ. ಮತ್ತು ಸಮಾರೋಪಕ್ಕೆ ಕೇಂದ್ರ ಸಚಿವ ಗಡ್ಕರಿಯನ್ನು ಅಹ್ವಾನಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ಅಹ್ವಾನ ಪತ್ರಿಕೆಯಲ್ಲಿ ಶಾಸಕ ರೆಡ್ಡಿ ಹೇಳಿದಂತೆ ಆಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿರುವುದು ಉತ್ಸವ ಪ್ರೀಯರಿಗೆ ಬೇಸರ ಮೂಡಿಸಿದೆ.