ಗಂಗಾವತಿಯ ಸಲ್ಮಾನ್ ಬಿಚ್ಚಗತ್ತಿ ನಾಮಪತ್ರ ಸಲ್ಲಿಕೆ- ಕಾಂಗ್ರೆಸ್ ಬಿಜೆಪಿ ಮತ ಸೆಳೆಯಲು ಸ್ಪರ್ಧೆ
ಕೊಪ್ಪಳ
ಲೋಕಸಭೆ ಚುನಾವಣೆಯಲ್ಲಿ ಬಹುತೇಕ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುತ್ತಾರೆ ಎಂಬ ಚರ್ಚೆಯ ನಡುವೆ ಗಂಗಾವತಿ ನಗರದ ಯುವ ಮುಖಂಡ ಗಂಗಾವತಿ ನಗರಸಭೆಯ ನಾಮ ನಿರ್ದೇಶಿತ ಮಾಜಿ ಸದಸ್ಯ ಸಲ್ಮಾನ್ ಬಿಚ್ಚಗತ್ತಿ ನಾಮಪತ್ರ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಶುಕ್ರವಾರ ಮಹ್ಮದ್ ಸಲ್ಮಾನ್ ಬಿಚ್ಚಗತ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ನಾನು ಗಂಗಾವತಿ ನಗರಸಭೆಯಲ್ಲಿ ಈ ಹಿಂದೆ ನಾಮ ನಿರ್ದೇಶಿತ ಸದಸ್ಯನಾಗಿ ರಾಜಕೀಯ ಅನುಭವ ಹೊಂದಿದ್ದೇನೆ. ಕೊಪ್ಪಳ ಜಿಲ್ಲೆಯ ರಾಜಕಾರಣದಲ್ಲಿ ಕೇವಲ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬಗ್ಗೆ ಜನತೆ ಬೇಸತ್ತಿದ್ದಾರೆ. ಎರಡು ಪಕ್ಷದ ಮುಖಂಡರು ತಮ್ಮ ವೈಯಕ್ತಿಕ ಹಿತಾಶಕ್ತಿಗಾಗಿ ಕಾರ್ಯಕರ್ತರನ್ನು ಬಲಿಕೊಡುತ್ತಿದ್ದಾರೆ. ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನಾರ್ಧನರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಆದರೆ ಅವರು ಕೂಡಾ ಈಗ ಬಿಜೆಪಿ ಸೇರಿದ್ದರಿಂದ ಎರಡು ಪಕ್ಷಗಳ ಬಗ್ಗೆ ನಂಬಿಕೆ ಇಲ್ಲದಂತಾಗಿ ಈ ಚುನಾವಣೆಯಲ್ಲಿ ಪಕ್ಷೇತರರವಾಗಿ ಸ್ಪರ್ಧೆ ಮಾಡಿದ್ದೇನೆ. ಮುಸ್ಲಿಂ ಸಮುದಾಯ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮತ ಹಾಕುತ್ತಾರೆ ಎಂಬ ಮಾತು ಸರಿಯಲ್ಲ. ನಮ್ಮ ಸಮುದಾಯ ಎಲ್ಲರೊಂದಿಗೆ ಬಾಂಧವ್ಯದಿಂದ ಇದ್ದಾರೆ. ಮತ್ತು ನಾನು ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಕಾಂಗ್ರೆಸ್ ಬಿಜೆಪಿಗೆ ಠಕ್ಕರ್ ನೀಡುತ್ತೇನೆ. ಜನರು ನನಗೆ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ. ಯಾವುದೇ ಒತ್ತಡ ಬಂದರು ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದರು.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಗ್ಯಾಸ್ ರಫೀಕ್, ಪಾಷಾ ಸಾಬ್, ತಮೀಮ್ ಅನ್ಸಾರಿ, ಭಾಷಾ, ನಾಗರಾಜ ಇದ್ದರು.
೧೯ ಜಿವಿಟಿ ಫೊಟೋ-೯ ( ನಾಮಪತ್ರ ಸಲ್ಲಿಸಿರುವುದು)
—————————