ಮೂವತೈದು ವರ್ಷಗಳ ಕಾಲ ಯಲಬುರ್ಗಾ ಕ್ಷೇತ್ರದ ಪ್ರತಿನಿಧಿಯಾಗಿದ್ದವರಿಗೆ ನೀರಾವರಿ ಕಲ್ಪಿಸುವ ಪರಿಕಲ್ಪನೆ ಮೂಡಲಿಲ್ಲ
ಮೂವತೈದು ವರ್ಷಗಳ ಕಾಲ ಯಲಬುರ್ಗಾ ಕ್ಷೇತ್ರದ ಪ್ರತಿನಿಧಿಯಾಗಿದ್ದವರಿಗೆ
ನೀರಾವರಿ ಕಲ್ಪಿಸುವ ಪರಿಕಲ್ಪನೆ ಮೂಡಲಿಲ್ಲ
ತರಲಕಟ್ಟಿ ಕರೆಗೆ ಬಾಗೀನ ಅರ್ಪಿಸಿದ ಮಾಜಿ ಸಚಿವ ಹಾಲಪ್ಪ ಆಚಾರ್
ಶಾಸಕ ಬಸವರಾಜ ರಾಯರೆಡ್ಡಿ ವೈಫಲ್ಯಗಳ ಬಗ್ಗೆ ರೈತರಿಗೆ ಮನವರಿಕೆ
ಸಮರ್ಥವಾಣಿ ವಾರ್ತೆ
ಯಲಬುರ್ಗಾ,ಜ.2: ಸುಮಾರು ಮೂವತೈದು ವರ್ಷಗಳ ಕಾಲ ಯಲಬುರ್ಗಾ ಕ್ಷೇತ್ರದ ಪ್ರತಿನಿಧಿ ಯಾಗಿದ್ದವರಿಗೆ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತ ಸಮೂಹಕ್ಕೆ ನೀರಾವರಿ ಕಲ್ಪಿಸಬೇಕು ಎಂಬ ಕಿಂಚಿತ್ತು ಪರಿಕಲ್ಪನೆ ಮೂಡಲಿಲ್ಲ. ಕೇವಲ ಬಾಯಿ ಮಾತಿನಲ್ಲೇ ಶುಷ್ಕ ಅಭಿವೃದ್ಧಿ ಪಟಗಳನ್ನು ತೋರಿಸುತ್ತಾ ಕ್ಷೇತ್ರದ ರೈತರನ್ನು ಬಡತನದಲ್ಲೇ ನರಳುವಂತೆ ಮಾಡಿದರು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಪರೋಕ್ಷವಾಗಿ ಶಾಸಕ ಬಸವರಾಜ ರಾಯರೆಡ್ಡಿ ಅವರ ವೈಫಲ್ಯಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು ತಾಲೂಕಿನ ತರಲಕಟ್ಟಿ ಗ್ರಾಮದ ತುಂಬಿದ ೯೭ ಎಕರೆ ವಿಸ್ತೀರ್ಣ ಕೆರೆಗೆ ಮಾಜಿ ಸಚಿವ ಹಾಲಪ್ಪ ಆಚಾರ ತಮ್ಮ ಬೆಂಬಲಿಗರೊಂದಿಗೆ ಬಾಗೀನ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿ ನಂತರ ನೆರೆದಿದ್ದ ರೈತ ಸಮೂಹವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೃಷ್ಣ ಬಿ-ಸ್ಕೀಮ್ ಅಡಿಯಲ್ಲಿ ಯಲಬುರ್ಗಾ ಕ್ಷೇತ್ರವನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿ ಹಾಕಿ ಉಡಾಫೆ ಮಾತುಗಳನ್ನು ಆಡುತ್ತಾ ಕಾಲಹರಣ ಮಾಡಿದ್ದರು. ಕೃಷ್ಣ ಕೊಳ್ಳದ ನೀರನ್ನು ಯಲಬುರ್ಗಾ ಕ್ಷೇತ್ರಕ್ಕೆ ಹರಿಸುವ ಮೂಲಕ ನೀರಾವರಿ ಕಲ್ಪಿಸುವ ಸಂಕಲ್ಪವನ್ನು ಕಾರ್ಯ ಗತಗೊಳಿಸಲು ಅಡಿಗಲ್ಲು ಪೂಜೆ ನೆರವೇರಿಸದಾಗ ಇದು ಅಡಿಗಲ್ಲು ಅಲ್ಲ, ಅಡ್ಡಗಲ್ಲು ಎಂದು ಮತ್ತೇ ಉಡಾಫೆ ಮಾತಗಳನ್ನೇ ಆಡಿ ಅಪಹಾಸ್ಯ ಮಾಡಿದ್ದರು. ಇಂತಹ ವರಿಗೆ ದೀರ್ಘ ಕಾಲದ ಅವಕಾಶ ನೀಡಿರುವ ಯಲಬುರ್ಗಾ ಕ್ಷೇತ್ರದ ಮುಗ್ಧ ರೈತರು ಯಾವುದೋ ಪಾಪ ಮಾಡಿದ್ದಾರೆ ಎನಿಸುತ್ತದೆ. ಬೆಳಗಾವಿ, ಬಾಗಲಕೋಟ ಜಿಲ್ಲೆಗಳ ರೈತರ ಶ್ರೀಮಂತಿಕೆ ಯಲಬುರ್ಗಾ ಕ್ಷೇತ್ರದ ರೈತರಿಗೂ ಒದಗಿ ಬರಲಿ ಎಂಬ ಮಹತ್ವಾಕಾಂಕ್ಷೆಯಿಂದ ಕಾರ್ಯಗತ ಗೊಳಿಸಲಾದ ನೀರಾವರಿ ಯೋಜನೆ ಇಂದು ಫಲಪ್ರದವಾಗಿದ್ದು, ಆದರೆ ಕಳೆದ ೫ ವರ್ಷಗಳಲ್ಲಿ ನೀರಾವರಿ ಕ್ಷೇತ್ರದಲ್ಲಿ ೨೫ ಕೆರೆಗಳನ್ನು ತುಂಬಿಸ ಲಾಗಿದೆ. ಇದನ್ನು ಕಣ್ಣಾರೆ ಕಾಣುತ್ತಿ ರುವ ಇವರಿಗೆ ಕ್ಷೇತ್ರದ ಜನತೆಗೆ ಒದಗಿರುವ ಒಳ್ಳಯ ಅವಕಾಶದ ಬಗ್ಗೆ ಸ್ವಲ್ಪವಾದರೂ ಸಂತಸ ವ್ಯಕ್ತಪಡಿಸುವ ಮನಸ್ಥಿತಿ ಎಂದು ರಾಯರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷಗಳಿಂದ ಭಾರತದ ಅಭಿವೃದ್ಧಿ ಸತತವಾಗಿ ಏರುಗತಿಯಲ್ಲಿದೆ ಎಂಬುದು ಸಮಸ್ತ ಭಾರತೀಯರ ಅನುಭವಕ್ಕೆ ಬರುತ್ತಿದೆ. ಭಾರತ ವಿಶ್ವದ ಭೂಪೂಟದಲ್ಲಿ ಅತ್ಯಂತ ಎತ್ತರ ಸ್ಥಾನದಲ್ಲಿ ಇರಬೇಕು ಎಂಬ ಸಂಕಲ್ಪದೊಂದಿಗೆ ಹಗಲಿರಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ೨೦೨೪ಕ್ಕೆ ಮತ್ತೊಮ್ಮೆ ಗೆಲ್ಲಿಸಬೇಕು. ಆಮೂಲಕ ಭಾರತದ ಸಮಗ್ರ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ಕರೆ ನೀಡಿದರು.
ತರಲಕಟ್ಟಿ ಗ್ರಾಮದ ರೈತ ಮುಖಂಡರುಗಳಾದ ಶ್ರೀಕಾಂತಗೌಡ ಮಾಲಿಪಾಟೀಲ, ಈರಣ್ಣ ಹುಬ್ಬಳ್ಳಿ, ಹನಮಂತ ಕನಕಗಿರಿ, ಮುಖಂಡ ರಾದ ಶಂಕ್ರಪ್ಪ ಸುರಪೂರ, ಬಸಲಿಂಗಪ್ಪ ಭೂತೆ, ಹುಸೇನಬಿ ಅತ್ತಾರ, ಮಲ್ಲಪ್ಪ ಹರ್ಲಾಪೂರ, ಕಳಕಪ್ಪ ಬಂಡಿ, ಅಯ್ಯಪ್ಪ ಯಡ್ಡೋಣಿ, ಪಕೀರಪ್ಪ ತಳವಾರ, ಅಮರೇಶ ಹುಬ್ಬಳ್ಳಿ, ಶರಣಪ್ಪ ಇಂಗಳದಾಳ, ಶರಣಪ್ಪ ಹೊಸಗೇರಿ, ಗಾಳೆಪ್ಪ ಓಜನಹಳ್ಳಿ, ಬಸಪ್ಪ ಕೋಳೂರು ಪ್ರಭುಗೌಡ ಪಾಟೀಲ , ತೋಟಪ್ಪ ಬೇವೂರ, ಹನಮಂತಪ್ಪ ಸಾಹುಕಾರ, ರಂಗನಾಥ ವಲ್ಮಕೊಂಡಿ ಸೇರಿದಂತೆ ತರಲಟ್ಟಿ ಹಾಗೂ ನೀಲೋಗಲ್ ಗ್ರಾಮಸ್ಥರು ಪಾಲ್ಗೊಂಡಿದ್ದರು.