‘ಆರ್ಟಿಕಲ್ 370’ ಚಲನಚಿತ್ರ: ಗಂಗಾವತಿಯಲ್ಲಿ ಪ್ರದರ್ಶನ.. ಮಾಜಿ ಶಾಸಕ ಪರಣ್ಣ ಮುನವಳ್ಳಿ ವೀಕ್ಷಣೆ: ಮೆಚ್ಚುಗೆ ಮೋಹಿನುದ್ದೀನ್ ಟಾಕೀಜ್‌ನಲ್ಲಿ ಪ್ರದರ್ಶನ/ ಪ್ರತಿಯೊಬ್ಬ ಭಾರತೀಯ ನೋಡಬೇಕಾಗ ಚಲನಚಿತ್ರ
ಗಂಗಾವತಿ.
ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರಕ್ಕೆ ಸಮಸ್ಯೆಯಾಗಿದ್ದ ‘ಆರ್ಟಿಕಲ್ 37೦’ ಯನ್ನು ರದ್ದುಪಡಿಸಲು ಕೇಂದ್ರ ಸರಕಾರ ಕೈಗೊಂಡಿದ್ದ ನಿರ್ಣಯವನ್ನು ಬಿಂಬಿಸುವಂತಹ ನೈಜ ಘಟನೆ ಆಧಾರಿತ ‘ಆರ್ಟಿಕಲ್ ೩೭೦’ ಚಲನಚಿತ್ರ ಗಂಗಾವತಿ ನಗರದ ಮೋಹಿನುದ್ಧಿನ್ ಚಿತ್ರಮಂದಿರದಲ್ಲಿ ಕಳೆದ ಎರಡು ದಿನಗಳಿಂದ ಪ್ರದರ್ಶನಗೊಳ್ಳುತ್ತಿದ್ದು, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಬಿಜೆಪಿ ಮತ್ತಿತರ ಮುಖಂಡರು ಚಿತ್ರವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಸಂಜೆ ೬ ಗಂಟೆ ಸಮಯದ ಶೋಗೆ ಚಿತ್ರಮಂದಿರಕ್ಕೆ ಬಂದ ಪರಣ್ಣ ಮುನವಳ್ಳಿ ಚಲನಚಿತ್ರವನ್ನು ಪೂರ್ಣವಾಗಿ ವೀಕ್ಷಿಸಿ, ಜಮ್ಮು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವಂತಹ ಹುನ್ನಾರಕ್ಕೆ ಕಡಿವಾಣ ಹಾಕಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೊತ್ತು ಗೃಹಮಂತ್ರಿ ಅಮಿತ್ ಷಾ ಅವರು ಆರ್ಟಿಕಲ್ ೩೭೦ ಯನ್ನು ರದ್ದುಪಡಿಸಿ ಈಗ ಕಾಶ್ಮೀರದಲ್ಲಿ ಸರ್ವ ಜನರು ಮುಕ್ತವಾಗಿ ಬದುಕುವಂತಹ ವಾತಾವರಣ ನಿರ್ಮಿಸಿದ್ದಾರೆ. ಆರ್ಟಿಕಲ್ ೩೭೦ ರದ್ದುಪಡಿಸಲು ಕೇಂದ್ರ ಸರಕಾರ ಕೈಗೊಂಡಿದ್ದ ನಿರ್ಣಯ ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ಹೇಗೆ ಮೆಟ್ಟಿ ನಿಂತು ಮಹತ್ವದ ನಿರ್ಣಯವನ್ನು ಕೈಗೊಂಡರು ಎಂಬ ವಿಷಯವನ್ನು ಈ ಚಲನಚಿತ್ರದಲ್ಲಿ ನೈಜವಾಗಿ ಬಿಂಬಿಸಲಾಗಿದೆ. ಕೇವಲ ಕೆಲವು ವರ್ಗದ ಜನ ಮಾತ್ರ ಈ ಚಿತ್ರ ನೋಡಬೇಕೆಂಬ ಭ್ರಮೆಯಿಂದ ಹೊರ ಬಂದು ಪ್ರತಿಯೊಬ್ಬ ಭಾರತೀಯರು ಈ ಚಲನಚಿತ್ರವನ್ನು ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಚಿತ್ರಮಂದಿರದ ಮಾಲೀಕ ಡಾ|| ಇಲಿಯಾಸ್‌ಬಾಬಾ ಮಾತನಾಡಿ, ನಮ್ಮ ಚಿತ್ರಮಂದಿರದಲ್ಲಿ ಈ ಚಲನ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈ ಸಂಗತಿಯನ್ನು ತಿಳಿದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮತ್ತಿತರು ಆಗಮಿಸಿ ಪೂರ್ಣ ಚಿತ್ರವನ್ನು ವೀಕ್ಷಣೆ ಮಾಡಿರುವುದು ನಮಗೆ ಹರ್ಷವಾಗಿದೆ ಎಂದರು.
ಭಾರತದ ಅಂಗವಾಗಿ ಜಮ್ಮು ಕಾಶ್ಮೀರವನ್ನು ಕಳೆದ ೭೦ ವರ್ಷಗಳಿಂದ ಪ್ರತ್ಯೇಕವಾಗಿ ಇಟ್ಟಿದ್ದ ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದ್ದ ದಬ್ಬಾಳಿಕಗೆ ಮುಕ್ತಿ ಹಾಡಲು ಕೇಂದ್ರ ಸರಕಾರ ಜಮ್ಮು ಕಾಶ್ಮೀರಕ್ಕೆ ಮಿಸಲಾಗಿದ್ದ ‘ಆರ್ಟಿಕಲ್ ೩೭೦’ ರದ್ದುಪಡಿಸಲು ಕೈಗೊಳ್ಳುವಾಗ ಎದುರಾಗಿದ್ದ ಸಮಸ್ಯೆಗಳನ್ನು ಹೇಗೆ ಮೆಟ್ಟಿ ನಿಂತರು. ಮತ್ತು ಇದಕ್ಕೆ ಹಲವು ಅಧಿಕಾರಿಗಳು ಸರಕಾರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ಮಹತ್ವದ ನಿರ್ಣಯ ಕೈಗೊಳ್ಳುವಾಗ ಎಷ್ಟೊಂದು ಗಟ್ಟಿ ನಿಲುವು ತಾಳಿದ್ದರು ಎಂಬ ಸಂದೇಶವಿರುವ ಮತ್ತು ದೇಶದ ಹಿತಕ್ಕಾಗಿ ಆರ್ಟಿಕಲ್ ೩೭೦ ರದ್ದುಪಡಿಸಿರುವ ನೈಜ ಘಟನೆ ಆಧಾರಿತ ಚಿತ್ರ ಇದಾಗಿದೆ. ಪ್ರತಿಯೊಬ್ಬರು ಚಲನಚಿತ್ರ ಮಂದಿರಕ್ಕೆ ಹೋಗಿ ಆರ್ಟಿಕಲ್ ೩೭೦ ಚಲನಚಿತ್ರವನ್ನು ವೀಕ್ಷಣೆ ಮಾಡಬೇಕು ಎಂದು ಚಿತ್ರ ವೀಕ್ಷಣೆ ಮಾಡಿದ ಪಂಪಾಪತಿ ಸಿಂಗನಾಳ, ನರಸಿಂಗ್‌ರಾವ್ ಕುಲಕರ್ಣಿ, ಸಂತೋಷ ಕೆಲೋಜಿ ಮತ್ತಿತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರಾದ ನವೀನ್ ಮಾಲೀಪಾಟೀಲ್, ಉಮೇಶ ಸಿಂಗನಾಳ, ವಾಸುದೇವ ನವಲಿ, ಪರಶುರಾಮ ಮಡ್ಡೇರ್, ನೀಲಕಂಠ ಕಟ್ಟಿಮನಿ, ಮುಖಂಡರಾದ ಕಾಶಿನಾಥ ಚಿತ್ರಗಾರ, ರಾಚಪ್ಪ ಸಿದ್ಧಾಪುರ, ವೆಂಕಟೇಶ ಕೆ, ಆನಂದ ಅಕ್ಕಿ, ರವಿ ಬಸಾಪಟ್ಟಣ, ಮಂಜುನಾಥ ಕಟ್ಟಿಮನಿ, ಶ್ರೀನಿವಾಸ ಧೂಳ ಮತ್ತಿತರು ಚಲನಚಿತ್ರ ವೀಕ್ಷಿಸಿದರು.
ಬಾಕ್ಸ್:
ನಿತ್ಯ ಎರಡು ಶೋ ಪ್ರದರ್ಶನ
ಆರ್ಟಿಕಲ್ ೩೭೦ ಚಲನಚಿತ್ರ ನಮ್ಮ ಮೊಹಿನುದ್ಧಿನ್ ಚಿತ್ರಮಂದಿರದಲ್ಲಿ ಕಳೆದ ಎರಡು ದಿನಗಳಿಂದ ಪ್ರದರ್ಶನವಾಗುತ್ತಿದೆ. ಪ್ರತಿನಿತ್ಯ ಸಂಜೆ ೬ ಗಂಟೆ ಮತ್ತು ೯ ಗಂಟೆಯ ಎರಡು ಶೋಗಳನ್ನು ಪ್ರದರ್ಶಿಲಾಗುತ್ತಿದೆ. ಇನ್ನು ನಾಲ್ಕೈದು ದಿನ ಈ ಚಿತ್ರ ಪ್ರದರ್ಶನವಾಗಲಿದೆ. ಪ್ರೇಕ್ಷರ ನಿರೀಕ್ಷೆ ನೋಡಿಕೊಂಡು ಚಿತ್ರದ ಪ್ರದರ್ಶನ ಮುಂದುವರೆಸುವ ಬಗ್ಗೆ ನಿರ್ಧರಿಸುತ್ತೇವೆ.
ಡಾ|| ಇಲಿಯಾಸ್‌ಬಾಬಾ, ಮಾಲೀಕರು, ಮೊಹಿನುದ್ಧಿನ್ ಚಿತ್ರಮಂದಿರ, ಗಂಗಾವತಿ.