Blog

ಜನಾರ್ಧನರೆಡ್ಡಿಗೆ ಮಾಹಿತಿ ಕೊರತೆ:ಸಂಗಣ್ಣ ಕರಡಿ ಟಾಂಗ್. ನನ್ನ ರಾಜಕೀಯ ಜೀವನ:ಹೆಚ್‌ಆರ್‌ಜಿ ಅವರನ್ನು ಕೇಳಿ

ಗಂಗಾವತಿ.
ನಾನು ೧೯೭೮ರಿಂದಲೂ ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಮಾಡಿದ್ದೇನೆ. ನನ್ನ ರಾಜಕಾರಣದ ಬಗ್ಗೆ ನನ್ನನ್ನು ಬೆಳೆಸಿರುವ ಗುರು ಮಾಜಿ ಸಂಸದರಾಗಿರುವ ಹೆಚ್.ಜಿ.ರಾಮುಲು ಅವರನ್ನು ಕೇಳಿ ತಿಳಿದುಕೊಳ್ಳಲಿ. ಆದರೆ ಮಾಹಿತಿ ಕೊರತೆಯಿಂದ ಎನ ಬೇಕಾದರೂ ಮಾತನಾಡಿದರೆ ಜನ ನಂಬುವುದಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರಿಗೆ ಸಂಸದ ಸಂಗಣ್ಣ ಕರಡಿ ಕಿವಿ ಮಾತು ಹೇಳಿದರು.
ಶುಕ್ರವಾರ ನಗರದ ಜಗಜೀವನರಾಮ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ತಮ್ಮ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರ ಬಗ್ಗೆ ಮಾತನಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಸಂಗಣ್ಣ ಕರಡಿ ಅವರು ರೆಡ್ಡಿಗೆ ತಿರುಗೇಟು ನೀಡಿದರು. ಜನಾರ್ಧನರೆಡ್ಡಿ ಅವರಿಗೆ ಗಂಗಾವತಿ ಜನತೆ ಆಶೀರ್ವಾದ ಮಾಡಿದ್ದಾರೆ. ಕೆಲಸ ಮಾಡಿ ತೋರಿಸಿ. ನೀವೂ ಎಂತವರು ಎಂಬುದು ಜಗತ್ತಿಗೆ ಗೊತ್ತಿದೆ. ಈಗಾಗಲೇ ನಿಮ್ಮ ಕೆಲಸದ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಆನಾಶೀರ್ವಾದದಂತೆ ಕ್ಷೇತ್ರದ ಅಭಿವೃದ್ಧಿ ಮಾಡಿ. ಅಭಿವೃದ್ಧಿ ವಿಷಯದಲ್ಲಿ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ. ಆದರೆ ನನಗೆ ಮತ್ತು ಶ್ರೀರಾಮುಲು ಅವರಿಗೆ ತಾಕತ್ ಇಲ್ಲ ಎಂದು ಹೇಳುವುದು ಸರಿಯಲ್ಲ. ನನ್ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಮಾತನಾಡಲಿ. ಬೇಕಾದರೆ ಹೆಚ್.ಜಿ.ರಾಮುಲು ಅವರನ್ನು ಕೇಳಿ. ಅಥವಾ ನಿಮ್ಮೊಂದಿಗೆ ಇರುವ ಶ್ರೀನಾಥ ಅವರನ್ನೆ ನನ್ನ ಬಗ್ಗೆ ಕೇಳಿ ತಿಳಿದುಕೊಳ್ಳಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಂದಾಗ ಸ್ಪರ್ಧೆ ಮಾಡಲು ಎಲ್ಲರಿಗೂ ಅವಕಾಶವಿರುತ್ತದೆ. ನೀವು ಹತ್ತು ಕ್ಷೇತ್ರದಲ್ಲಿ ಅಲ್ಲ ೨೮ ಕ್ಷೇತ್ರದಲ್ಲೂ ಸ್ಪರ್ಧಿಸಿ. ಕೊನೆಗೆ ಜನ ತಿರ್ಮಾನಿಸುತ್ತಾರೆ. ಆದರೆ ಸಣ್ಣತನದ ಮಾತನಾಡಿ ಹಾಸ್ಯಾಸ್ಪದಕ್ಕೆ ಗುರಿಯಾಗಬೇಡಿ. ನಾನು ಶಾಸಕನಾಗಿ ಮತ್ತು ಸಂಸದನಾಗಿ ಎನೆಲ್ಲಾ ಕೆಲಸ ಮಾಡಿದ್ದೇನೆ ಎಂಬುದು ಜನಾರ್ಧನರೆಡ್ಡಿ ಅವರು ಮಾಹಿತಿ ತರಿಸಿಕೊಳ್ಳಲಿ ಎಂದು ಶಾಸಕ ರೆಡ್ಡಿಗೆ ತಿರುಗೇಟು ನೀಡಿದರು.
ಮುಂದುವರೆದು ಮಾತನಾಡಿದ ಅವರು ನಾನು ಎರಡು ಅವಧಿಗೆ ಸಂಸದನಾಗಿ ಕೊಪ್ಪಳ ಜಿಲ್ಲೆಯಾದ್ಯಂತ ರೈಲ್ವೆ ಯೋಜನೆ ಪ್ರಮಾಣಿಕವಾಗಿ ಅನುಷ್ಟಾನಗೊಳಿಸಿದ್ದೇನೆ. ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಗೊಳಿಸಿದ್ದೇನೆ. ಗಂಗಾವತಿ, ಕಾರಟಗಿಗೆ ರೈಲು ಸಂಚಾರ ಪ್ರಾರಂಭವಾಗಿದೆ. ಸಿಂಧನೂರಿಗೂ ಶೀಘ್ರ ರೈಲು ಬರಲಿದೆ. ಜಿಲ್ಲೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಿದ್ದೇನೆ. ಗದಗ, ವಾಡಿ ರೈಲು ಈಗ ಕುಷ್ಟಗಿವರೆಗೂ ಪ್ರಾರಂಭವಾಗಲಿದೆ. ದರೋಜಿ ಗಂಗಾವತಿ ರೈಲ್ವೆ ಲೈನ್ ಸರ್ವೇ ನಡೆಯುತ್ತಿದೆ. ಇದು ಬಾಗಲಕೋಟೆವರೆಗೂ ವಿಸ್ತರಿಸಲು ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಗಂಗಾವತಿಗೆ ಕೇಂದ್ರೀಯ ವಿದ್ಯಾಲಯ ತಂದಿದೆ. ಅಮೃತಸಿಟಿ ಯೋಜನೆ, ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಿದೆ. ಅಂಜನಾದ್ರಿ ಅಭಿವೃದ್ಧಿಯಾಗಿರುವುದು ಬಿಜೆಪಿ ಅವಧಿಯಲ್ಲಿ ಎಂಬುದು ಗಂಗಾವತಿ ಶಾಸಕರು ಮರೆಯಬಾರದು. ಈ ಹಿಂದಿನ ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಗಂಗಾವತಿಗೆ ಇಂಜನೀಯರಿಂಗ್, ಕೃಷಿ ಕಾಲೇಜ್ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿ ಈಗ ಸಾಮಾನ್ಯರಿಗೂ ಅತ್ಯುತ್ತಮ ಆರೋಗ್ಯ ಸೇವೆ ತಲುಪವಂತೆ ಮಾಡಿದ್ದಾರೆ. ಗಿಣಿಗೇರಿ ರಾಯಚೂರುವರೆಗೆ ರಾಷ್ಟ್ರೀಯ ಹೆದ್ದಾರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ರಾಜ್ಯ ಸರಕಾರದಿಂದ ಬೈಪಾಸ್ ರಸ್ತೆ ಮಾಡಲು ಮುಂದಾಗಬೇಕು ಎಂದರು.
ಗ್ರೇಡ್-೨ ತಹಶೀಲ್ದಾರ ಮಹಾಂತಗೌಡ, ಪೌರಾಯುಕ್ತ ವಿರುಪಾಕ್ಷಮೂರ್ತಿ, ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ನಗರಸಭೆ ಅಧ್ಯಕ್ಷ ರಾಘವೇಂದ್ರಶೆಟ್ಟಿ, ಹನುಮಂತಪ್ಪ ನಾಯಕ, ಬಿಜೆಪಿ ಮುಖಂಡ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ ಮತ್ತಿತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button