Blog
ನವೀನ ಗುಳಗಣ್ಣಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ

ಕೊಪ್ಪಳ.
ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಯಲಬುರ್ಗಾ ಬಿಜೆಪಿ ಯುವ ಮುಖಂಡ ನವೀನ್ ಗುಳಗಣ್ಣ ಅವರನ್ನು ನೇಮಕ ಮಾಡಲಾಗಿದೆ.
ಜ.14 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯದ ಎಲ್ಲಾ ಜಿಲ್ಲೆಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಿದ್ದಾರೆ. ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕ ಈಶಣ್ಣ ಗುಳಗಣ್ಣ ಅವರ ಪುತ್ರರಾಗಿರುವ ನವೀನ ಗುಳಗಣ್ಣ ಅವರು ಕಳೆದ ಹಲವು ವರ್ಷಗಳಿಂದ ಬಿಜೆಪಿ ಸಂಘಟಣೆಯಲ್ಲಿ ಸಕ್ರೀಯರಾಗಿ ಕೆಲಸ ಮಾಡುತ್ತಿದ್ದಾರೆ. ಯುವ ನಾಯಕರಾಗಿರುವ ಅವರು ಜಿಲ್ಲೆಯ ಬಿಜೆಪಿ ಎಲ್ಲಾ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮತ್ತು ಸಂಘ ಪರಿವಾರದೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದಾರೆ. ಈಗ ಜಿಲ್ಲೆಯ ಬಿಜೆಪಿ ಸಾರಥಿಯಾಗಿದ್ದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಲು ಅವರ ಮುಂದೆ ದೊಡ್ಡ ಸವಾಲಾಗಿದೆ..