Blog

ಗಂಗಾವತಿಯಲ್ಲಿ ಅಂಬೇಡ್ಕರ್ ಮೂರ್ತಿಗೆ ಅವಮಾನ.. ದಲಿತ ಸಂಘಟನೆ ಮುಖಂಡರಿಂದ ದ ಪ್ರತಿಭಟನೆ- ಕಿಡಿಕೆಡಿಗಳ ಬಂಧನಕ್ಕೆ ಅಗ್ರಹ: ಪ್ರಕರಣ ದಾಖಲು

ಗಂಗಾವತಿ.
ಕೋರ್ಟ್ ಎದುರಿಗೆ ಇರುವ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಟಮಾಟೋ ಸಾಸ್ ಮತ್ತಿತರ ಕೆಟ್ಟ ಪದಾರ್ಥವನ್ನು ಎಸಗಿದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ. ಘಟನೆ ವಿಷಯ ತಿಳಿದು ವೃತ್ತಕ್ಕೆ ಆಗಮಿಸಿದ ದಲಿತಪರ ಮತ್ತಿತರ ಸಮಾಜದ ಮುಖಂಡರು, ಯುವಕರು ದಿಡೀರ್ ಪ್ರತಿಭಟನೆ ನಡೆಸಿ ಕಿಡಿಕೆಡಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಮಂತಕುಮಾರ, ಡಿವೈಎಸ್‌ಪಿ ಸಿದ್ಧಪ್ಪಗೌಡನ ಪಾಟೀಲ್, ತಹಶೀಲ್ದಾರ ಯು.ನಾಗರಾಜ, ಪಿಐ ಪ್ರಕಾಶ ಮಾಳಿ, ಪೌರಾಯುಕ್ತ ವಿರುಪಾಕ್ಷಮೂರ್ತಿ ಪರಿಶೀಲಿಸಿ, ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ ಘಟನೆ ನಡೆದಿದ್ದು, ವಿಷಯ ತಿಳಿದು ಸೋಮವಾರ ದಲಿತಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಶಾಸಕ ಗಾಲಿ ಜನಾರ್ಧನರೆಡ್ಡಿ ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಖಂಡಿಸಿದರಲ್ಲದೇ ಕಡಿಕೆಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿಗೆ ಸೂಚನೆ ನೀಡಿದರು. ಮತ್ತು ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿರುವ ಘಟನೆ ನನ್ನ ಮನಸ್ಸಿಗೂ ಘಾಸಿಯಾಗಿದೆ. ಘಟನೆ ಕಾರಣರಾದವರನ್ನು ಪತ್ತೆ ಹಚ್ಚುವಂತೆ ನಾನು ಡಿವೈಎಸ್‌ಪಿಗೆ ಸೂಚನೆ ನೀಡಿದ್ದೇನೆ. ತಕ್ಷಣ ಮೂರ್ತಿಯನ್ನು ಸ್ವಚ್ಚಗೊಳಿಸಿ ಪೂಜೆ ಮಾಡೋಣ ಎಂದು ಸಮಾಧಾನಪಡಿಸಿದರು. ಆದರೂ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಸುತ್ತಲು ಸಿಸಿ ಕ್ಯಾಮರಾ ಅಳವಡಿಸಬೇಕು. ನಿರ್ಲಕ್ಷ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಧರಣಿ ಮುಂದುವರೆಸಿದರು. ನಂತರ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ ಆಗಮಿಸಿ ಸಂಘಟನೆ ಮುಖಂಡರೊಂದಿಗೆ ಧರಣಿ ನಡೆಸಿ ಪೊಲೀಸರೊಂದಿಗೆ ಚರ್ಚಿಸಿದಿರು. ನಂತರ ಹೆಚ್ಚುವರಿ ಎಸ್‌ಪಿ ಅವರು ಆಗಮಿಸಿ ಘಟನೆ ಕುರಿತಂತೆ ಈಗಾಗಲೇ ನಗರಸಭೆ ಆರೋಗ್ಯ ನಿರೀಕ್ಷಕರು ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ದಿನದಲ್ಲಿ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಸ್‌ಪಿ ಭರವಸೆಗೆ ಒಪ್ಪಿದ ಮುಖಂಡರು ಪ್ರತಿಭಟನೆ ಹಿಂದಕ್ಕೆ ಪಡೆದು ಎರಡು ದಿನದಲ್ಲಿ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ನಾವು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿ ಧರಣಿ ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆ ಸೇರಿದಂತೆ ಹಿಂದುಪರ ಸಂಘಟನೆ, ಎಸ್‌ಎಫ್‌ಐ ಸಂಘಟನೆ, ಕಾಂಗ್ರೆಸ್, ಕೆಆರ್‌ಪಿಪಿ, ಬಿಜೆಪಿ ಮುಖಂಡರು, ಕಾರ್ಯಕರ್ತರು, ವಿವಿಧ ಸಮಾಜದ ಮುಖಂಡರು ಘಟನೆಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಂತರ ನಗರಸಭೆ ಸಿಬ್ಬಂದಿಗಳು ಮೂರ್ತಿಯನ್ನು ನೀರಿನಿಂದ ಸ್ವಚ್ಚಗೊಳಿಸಿ ಹಾರ ಹಾಕಿ ಪೂಜೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿವಿಧ ದಲಿತ ಮುಖಂಡರಾದ ಕುಂಟೋಜಿ ಮರೆಯಪ್ಪ, ಬೋಜಪ್ಪ, ಹುಲ್ಲೇಶ ದೇವರಮನಿ, ಮರಿಸ್ವಾಮಿ ಮುಸ್ಟೂರು, ನಗರಸಭೆ ಸದಸ್ಯ ಎಫ್.ರಾಘವೇಂದ್ರ, ಹುಸೇನಪ್ಪಸ್ವಾಮಿ ಹಂಚಿನಾಳ, ಸೋಮನಾಥ ಭಂಡಾರಿ, ದೇವಣ್ಣ ಸಂಗಾಪುರ, ಅಂಬಣ್ಣ ನಾಯಕ, ಹುಲಗಪ್ಪ ಮಾಗಿ, ಲಕ್ಷ್ಮಣ ನಾಯಕ್, ಶಿವಪ್ಪ ಪೂಜಾರಿ, ಸಂಗಮೇಶ ಅಯೋಧ್ಯಾ, ಶಿವಕುಮಾರ, ವೆಂಕಟೇಶ ಚಲುವಾದಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಸೇರಿದಂತೆ ದಲಿತಪರ ಸಂಘಟನೆಗಳ ಮುಖಂಡರು, ನೂರಾರು ಯುವಕರು, ಬಿಜೆಪಿ, ಕೆಆರ್‌ಪಿಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಘಟನೆಯನ್ನು ಖಂಡಿಸಿದರು.

 

 

Related Articles

Leave a Reply

Your email address will not be published. Required fields are marked *

Back to top button