Blog

ಅಂಬೇಡ್ಕರ್ ಮೂರ್ತಿಗೆ ಅವಮಾನ: ಪ್ರತಿಭಟನೆ ಶಾಸಕ ರೆಡ್ಡಿ ಖಂಡನೆ: ಕ್ರಮಕ್ಕೆ ಸೂಚನೆ

ಗಂಗಾವತಿ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿರುವ ಘಟನೆಗೆ ಸಂಬಂಧಿಸಿದ ವಿವಿಧ ದಲಿತಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಗಾಲಿ ಜನಾರ್ಧನರೆಡ್ಡಿ ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಘಟನೆಗೆ ನನ್ನ ಮನಸ್ಸಿಗೂ ನೋವ್ವಾಗಿದೆ. ಘಟನೆಗೆ ಕರಣರಾಗಿರುವ ಕಿಡಿಕಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಡಿವೈಎಸ್‌ಪಿ ಮತ್ತು ತಹಶೀಲ್ದಾರರಿಗೆ ಸೂಚನೆ ನೀಡಿದರು. ಮತ್ತು ಎರಡು ದಿನದಲ್ಲಿ ಕಿಡಿಕೆಡಿಗಳನ್ನು ಪತ್ತೆ ಹೆಚ್ಚಿ ಸುತ್ತಲು ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸುತ್ತಿದ್ದೇನೆ. ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಸಂಘಟನೆ ಮುಖಂಡರಿಗೆ ಮನವಿ ಮಾಡಿದರು.
ಸೋಮವಾರ ಬೆಳೆಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ಆಗಮಿಸಿದ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಡಿವೈಎಸ್‌ಪಿ ಮತ್ತು ತಹಶೀಲ್ದಾರರೊಂದಿಗೆ ಚರ್ಚಿಸಿ ತಕ್ಷಣ ಪತ್ತೆ ಹೆಚ್ಚುವಂತೆ ಸೂಚನೆ ನೀಡಿದರು. ಮತ್ತು ದಲಿತ ಸಂಘಟನೆ ಮುಖಂಡರೊಂದಿಗೆ ಮಾತನಾಡಿ, ಈ ಘಟನೆ ನಡೆದಿರುವುದು ನಾನು ಖಂಡಿಸುತ್ತಿದ್ದೇನೆ. ಗಂಗಾವತಿಯಲ್ಲಿ ಶಾಂತಿ ಕದಡಿಸಲು ಕೆಲವು ವ್ಯಕ್ತಿಗಳು ಇಂತಹ ಘಟನೆ ನಡೆಸಲು ಪ್ರಯತ್ನಿಸಿರಬಹುದು. ಇದಕ್ಕೆ ನಾನು ಆಸ್ಪದ ಕೊಡುವುದಿಲ್ಲ. ಮುಂದೆ ಈ ರೀತಿ ಘಟನೆ ನಡೆಯದಂತೆ ಅಂಬೇಡ್ಕರ್ ವೃತ್ತ ಸೇರಿದಂತೆ ಎಲ್ಲಾ ವೃತ್ತಗಳಲ್ಲೂ ಮತ್ತು ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಮಾಧಾನಪಡಿಸಿದರು. ಶಾಸಕರ ಮಾತಿಗೆ ಜಗ್ಗದ ದಲಿತ ಸಂಘಟನೆ ಮುಖಂಡರು ಮತ್ತು ಯುವಕರು ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಕಿಡಿಕೇಡಿಗಳನ್ನು ಬಂಧಿಸಬೇಕು. ಈ ಹಿಂದೆ ಸಿಸಿ ಕ್ಯಾಮರಾ ಅಳವಡಿಸಿದ್ದು, ತೆಗೆಯಲಾಗಿದೆ. ನೇರವಾಗಿ ಪೌರಾಯುಕ್ತರು ಹೊಣೆಯಾಗಿದ್ದಾರೆ. ಈ ರೀತಿ ಘಟನೆ ನಡೆಯಲು ಅಧಿಕಾರಿಗಳ ನಿರ್ಲಕ್ಷ ಕಾರಣವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದರು. ನಂತರ ಶಾಸಕರು ಎಸ್‌ಪಿ ಅವರೊಂದಿಗೆ ಮಾತನಾಡಿ ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಗೊಳಿಸುವಂತೆ ಸೂಚನೆ ನೀಡಿದರು. ಹೆಚ್ಚುವರಿ ಎಸ್‌ಪಿ ಹೇಮಂತಕುಮಾರ ಆಗಮಿಸಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಎರಡು ದಿನದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನೆ ಮುಕ್ತಾಯಗೊಳಿಸಿದರು.

 

Related Articles

Leave a Reply

Your email address will not be published. Required fields are marked *

Back to top button