Uncategorized

ಗದಗ ಜಿಲ್ಲೆಯ 36 ಅಂಗನವಾಡಿ ಮೇಲ್ವಿಚಾರಕಿಯರಿಂದ ಕುಕನೂರು ತಾಲೂಕಿನ ಅಂಗನವಾಡಿಗಳಿಗೆ ಶೈಕ್ಷಣಿಕ ಭೇಟಿ

ಕೊಪ್ಪಳ ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣ ಮಾದರಿಗೆ ಮೆಚ್ಚುಗೆ – ಗದಗ ಜಿಲ್ಲೆಯಲ್ಲಿಯೂ ಅಳವಡಿಸಿಕೊಳ್ಳಲು ಆಸಕ್ತಿ

ಗದಗ ಜಿಲ್ಲೆಯ 36 ಅಂಗನವಾಡಿ ಮೇಲ್ವಿಚಾರಕಿಯರಿಂದ ಕುಕನೂರು ತಾಲೂಕಿನ ಅಂಗನವಾಡಿಗಳಿಗೆ ಶೈಕ್ಷಣಿಕ ಭೇಟಿ

ಕೊಪ್ಪಳ ಜಿಲ್ಲೆಯ ಶಾಲಾ ಪೂರ್ವ ಶಿಕ್ಷಣ ಮಾದರಿಗೆ ಮೆಚ್ಚುಗೆ – ಗದಗ ಜಿಲ್ಲೆಯಲ್ಲಿಯೂ ಅಳವಡಿಸಿಕೊಳ್ಳಲು ಆಸಕ್ತಿ

ಕುಕನೂರು: ಗದಗ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 36 ಅಂಗನವಾಡಿ ಮೇಲ್ವಿಚಾರಕಿಯರು ನವೆಂಬರ್ 16ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಶೈಕ್ಷಣಿಕ ಭೇಟಿ ನೀಡಿ, ಮಕ್ಕಳಿಗೆ ನೀಡಲಾಗುತ್ತಿರುವ ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ವೀಕ್ಷಿಸಿದರು.

ತಾಲೂಕಿನ ತಳಕಲ್ ಗ್ರಾಮದ 2, 4 ಮತ್ತು 6ನೇ ಅಂಗನವಾಡಿ ಕೇಂದ್ರಗಳು ಸೇರಿದಂತೆ ಮಂಡಲಗೇರಿ, ಇಟಗಿ, ಬಾನಾಪುರ, ಲಕ್ಷ್ಮಾಪುರ ಹಾಗೂ ಕೋಳೂರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಣ ಪದ್ಧತಿ ಮತ್ತು ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು.

ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮವನ್ನು ಮಾದರಿಯಾಗಿ ಪರಿಗಣಿಸಿ, ಗದಗ್ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿಯೂ ಇದೇ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಶೈಕ್ಷಣಿಕ ಭೇಟಿ ಆಯೋಜಿಸಲಾಗಿತ್ತು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1:30ರವರೆಗೆ ನಡೆದ ವೀಕ್ಷಣೆಯಲ್ಲಿ ಮುಕ್ತ ಆಟ, ಪ್ರಾರ್ಥನೆ, ಅಂಗನವಾಡಿ ನಿಯಮಗಳು, ಹೆಸರಿನ ಚೀಟಿ, ಕ್ಯಾಲೆಂಡರ್, ಹವಾಮಾನ ಪರಿಚಯ, ಕಥೆ ಹೇಳುವುದು, ಅಭಿನಯ ಗೀತೆ, ನಾಟ್ಯ ಸಂಗೀತ, ಆಟಗಳು, ಚರ್ಚೆ, ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಪುನರಾವಲೋಕನ ಸೇರಿದಂತೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಗದಗ್ ಜಿಲ್ಲೆಯ ಮೇಲ್ವಿಚಾರಕಿಯರು ಮಾತನಾಡಿ, ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಭಾಷಾ ಕೌಶಲ್ಯ, ಬೌದ್ಧಿಕ ಸಾಮರ್ಥ್ಯ, ಸೃಜನಶೀಲತೆ ಹಾಗೂ ಸಾಮಾಜಿಕ ಸಂವಹನ ಬೆಳೆಸಲು ಶಾಲಾ ಪೂರ್ವ ಶಿಕ್ಷಣ ಅತ್ಯಂತ ಸಹಕಾರಿಯಾಗಿದೆ. ಅಂಗನವಾಡಿ ಶಿಕ್ಷಕರು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಉತ್ತಮ ಶಿಕ್ಷಣ ಮಾದರಿಯನ್ನು ಗದಗ್ ಜಿಲ್ಲೆಯಲ್ಲಿಯೂ ಅಳವಡಿಸಿಕೊಳ್ಳಲು ಸಂತಸವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಜಯಲಕ್ಷ್ಮೀ ಮೆಣಸಿನಕಾಯಿ, ವಲಯದ ಹಿರಿಯ ಮೇಲ್ವಿಚಾರಕಿಯರು, ಅಶೋಕ್ ಸಿದ್ದಪ್ಪ ಕುರಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಅಂಗನವಾಡಿ ಶಿಕ್ಷಕರು, ಸಹಾಯಕಿಯರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.

ವರವಿ ಚನ್ನಯ್ಯ ಹಿರೇಮಠ 

Related Articles

Leave a Reply

Your email address will not be published. Required fields are marked *

Back to top button
error: Content is protected !!