

*ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್ಡಿಎಂಸಿ ರಚನೆ,,*
*ಶಾಲೆಯ ಉನ್ನತಿಕರಣದ ಜೊತೆಗೆ ವಿದ್ಯಾರ್ಥಿನಿಯರ ಉತ್ತಮ ಭವಿಷ್ಯಕ್ಕೆ ಶ್ರಮ ವಹಿಸುವೆ : ಪ್ರಕಾಶ ಚೆಂಡೂರು,,*
ಕುಕನೂರು : ಒಂದು ಶಾಲೆಯು ಉತ್ತಮವಾಗಿ ನಡೆಯಬೇಕಾದರೇ ಶಾಲಾ ಸುಧಾರಣಾ ಸಮಿತಿ ಮುಖ್ಯವಾಗಿದೆ. ಶಾಲಾ ಸುಧಾರಣಾ ಸಮಿತಿ ಇದ್ದಾಗಮಾತ್ರ ಶಾಲೆಯು ಪ್ರತಿಯೊಂದು ಹಂತವು ಉತ್ತಮವಾಗಿ ಸಾಗಬಲ್ಲದು ಎಂದು ಮಹಾಂತೇಶ ಹೂಗಾರ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ಶುಕ್ರವಾರದಂದು ಪಟ್ಟಣದ 5ನೇ ವಾರ್ಡಿನ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ, ನಿರ್ದೇಶಕರ ಆಯ್ಕೆ ಪ್ರಕ್ರಿಯೇ ಚುನಾವಣೆಯಲ್ಲಿ ಅಧ್ಯಕ್ಷರ ಹಾಗೂ ಇನ್ನೂಳಿದ ಸದಸ್ಯರ ಆಯ್ಕೆ ನಂತರ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಗೌರವಿಸಿ ಸನ್ಮಾನಿಸಿ ಮಾತನಾಡಿ ಈ ಹಿಂದಿನ ಅವಧಿಯಲ್ಲಿ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದಿಲ್ಲಾ, ಶಾಲೆಯ ವಿದ್ಯಾರ್ಥಿನಿಯರು, ಶಿಕ್ಷಕಿಯರು ಶೌಚಕ್ಕೆ ಹೊರಗೆ ಹೋಗುವ ಪರಸ್ಥಿತಿ ಇದ್ದರಿಂದ ಹಿಂದಿನ ಎಸ್ ಡಿ ಎಮ್ ಸಿಯವರು ಜವಾಬ್ದಾರಿಯುತವಾಗಿ ಪಟ್ಟಣ ಪಂಚಾಯತಿಯಿಂದ ಶೌಚಾಲಯ ನಿರ್ಮಾಣ ಮಾಡಿಸುವ ಮೂಲಕ ಮಹಿಳೆಯರ ಗೌರವ ಹೆಚ್ಚಿಸಿರುವುದು ಸ್ವಾಗತಾರ್ಹವಾಗಿದೆ.
ಇದರಂತೆ ಪ್ರತಿಯೊಂದು ವ್ಯವಸ್ಥೆ ಹಾಗೂ ಶಿಕ್ಷಣ, ಸ್ವಚ್ಚತೆಯ ಕಡೆಗೆ ಎಸ್ಡಿಎಮ್ ಸಿಯವರ ಗಮನ ಹರಿಸಿ ಶಾಲೆಯ ಉನ್ನತಿಕರಣದ ಬಗ್ಗೆ ನಿಗಾ ವಹಿಸಬೇಕು ಎಂದು ಮಹಾಂತೇಶ ಹೂಗಾರ ತಿಳಿಸಿದರು.
ಬೇರೆ ಶಾಲೆಗಳಲ್ಲಿ ಎಸ್ ಡಿ ಎಮ್ ಸಿ ಗೆ ಪೈಪೋಟಿ ನಡೆಯುತ್ತದೆ ಆದರೆ ಇಲ್ಲಿ ಕೆಲಸಗಾರರಿಗೆ ಪಾಲಕರು ಪ್ರಾಮುಖ್ಯತೆ ನೀಡುವ ಮೂಲಕ ಎರಡನೇಯ ಬಾರಿಗೆ ಪ್ರಕಾಶ ಚೆಂಡೂರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರು ಶಾಲೆಯ ಬಗ್ಗೆ ಅಭಿಮಾನದಿಂದ ಕರ್ತವ್ಯ ನಿರ್ವಹಿಸಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುತ್ತಾರೆ ಎಂದು ಹೇಳಿದರು.
ನಂತರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ ಚೆಂಡೂರ ಮಾತನಾಡಿ
ನನ್ನನ್ನು ಎರಡನೇ ಅವಧಿಗೆ ಅಧ್ಯಕ್ಷನನ್ನಾಗಿ ಮಾಡಿದ್ದು, ಜವಾಬ್ದಾರಿ ಇನ್ನಷ್ಟು ಹೆಚ್ಚಿದ್ದು, ಶಾಲೆಯ ಪ್ರಗತಿಯ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಶಾಲೆಯಲ್ಲಿ ಉತ್ತಮ ವಾತಾವರಣವಿದ್ದು, ವಿದ್ಯಾರ್ಥಿನಿಯರ ಉತ್ತಮ ಭವಿಷ್ಯಕ್ಕಾಗಿ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸುತ್ತೇನೆ ಜೊತೆಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ಬಳಿಸಿ ಶಾಲೆಗೆ ಬೇಕಿರುವ ಮೂಲಭೂತ ಸೌಕರ್ಯಗಳ ಹಾಗೂ ಸೌಲಭ್ಯಗಳ ಕಡೆ ಗಮನ ನೀಡಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಕನೂರು ಗ್ರಾಮೀಣ ವಲಯದ ಸಿಆರ್ಪಿ ಖಾಜಾಸಾಬ್ ಹೊಸಳ್ಳಿ ಹಾಗೂ ಕುಕನೂರು ನಗರ ವಲಯದ ಸಿಆರ್ಪಿ ಪೀರ್ಸಾಬ್ ದಫೇದಾರ್ ಅವರ ಉಪಸ್ಥಿತಿಯಲ್ಲಿ ಸರ್ಕಾರದ ಎಸ್ಡಿಎಂಸಿ ನಿಯಮಾವಳಿಗಳ ಪ್ರಕಾರ ಸಮಿತಿ ರಚನೆ ಪ್ರಕ್ರಿಯೆ ನಡೆಯಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಿಯಮಾನುಸಾರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಒಟ್ಟು 18 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 9 ಮಹಿಳೆಯರು ಹಾಗೂ 9 ಪುರುಷರು ಸಮಿತಿಯಲ್ಲಿ ಸ್ಥಾನ ಪಡೆದರು. ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಪ್ರಕಾಶ್ ಚಂಡೂರ್ ಹಾಗೂ ಉಪಾಧ್ಯಕ್ಷರಾಗಿ ಅನಿತಾ ಯತ್ನಳ್ಳಿ ಅವರು ಆಯ್ಕೆಯಾದರು.
ಆಯ್ಕೆಯಾದರು.
ಎಸ್ಡಿಎಂಸಿ ಸದಸ್ಯರು:
ಈರಪ್ಪ ಕಲ್ಲಪ್ಪ ಭಜಂತ್ರಿ, ಸತ್ಯವ್ವ ಶಿವಪ್ಪ ಸಾಲಿ, ಹನುಮಂತಪ್ಪ ದೇವಪ್ಪ ಗುಂಡಾಲಿ, ದೀಪಾ ಸುಭಾಷ ಹಿರೇಮನಿ, ಜಗದೀಶ ಸಂಗಪ್ಪ ಮ್ಯಾಗಳಮನಿ, ಮೈಬೂಖಾನ್ ಖಾಸೀಮಸಾಬ ಮುಲ್ಲಾ, ಅಲ್ಲಾಭಿ ರಾಜಾಸಾಬ್ ಪಿಂಜಾರ, ರುದ್ರಪ್ಪ ನಿಂಗಪ್ಪ ಕರಿಗಾರ, ರಾಮರಾವ್ ವೆಂಕಟರಾವ್ ಮೂಖಾಸಿ, ಶಿವರಾಜ ಅಡಿವೆಪ್ಪ ಹರ್ಲಾಪುರ, ಮಲ್ಲಪ್ಪ ಸೋಬಾನದ, ರೇಣುಕಪ್ಪ ಹೂಗಾರ, ಈರಮ್ಮ ಹನುಮಪ್ಪ ದಿವಟರ, ಭಾಗ್ಯಲಕ್ಷ್ಮೀ ರೇವಣಪ್ಪ ಯಡೆಯಾಪುರ, ಸುರೇಖಾ ರಾಮಣ್ಣ ಕಲಾಲ ಹಾಗೂ ಅಕ್ಕಮ್ಮ ಅಶೋಕ ಹೂಗಾರ ಆಯ್ಕೆಯಾದರು. ನಾಮನಿರ್ದೇಶಿತ ಸದಸ್ಯರಾಗಿ ಕವಿತಾ ಹೂಗಾರ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣವೇಣಿ, ಶಿಕ್ಷಕಿಯರಾದ ಶಾಂತಾ ಹಿರೇಮಠ ಹಾಗೂ ಸರೋಜ ಭಜಂತ್ರಿ, ವಿದ್ಯಾರ್ಥಿನಿಯರ ಪೋಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ ಚನ್ನಯ್ಯ ಹಿರೇಮಠ




