Uncategorized

ಮಹಿಳಾ ಶೌಚಾಲಯದ ಸ್ವಚ್ಛತೆ ಕಾಪಾಡುವುದು ಸಾರ್ವಜನಿಕರ ಜವಾಬ್ದಾರಿ: ಸತ್ಯನಾರಾಯಣ ಹರಪನಹಳ್ಳಿ

ಮಹಿಳೆಯರ ಗೌರವ, ಅನುಕೂಲಕ್ಕೆ ಆದ್ಯತೆ – ಮೂಲಸೌಕರ್ಯ ಕಲ್ಪಿಸಿದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

  • ಮಹಿಳಾ ಶೌಚಾಲಯದ ಸ್ವಚ್ಛತೆ ಕಾಪಾಡುವುದು ಸಾರ್ವಜನಿಕರ ಜವಾಬ್ದಾರಿ: ಸತ್ಯನಾರಾಯಣ ಹರಪನಹಳ್ಳಿ

ಕೋಳಿಪೇಟೆಯಲ್ಲಿ ಮಹಿಳೆಯರಿಗೊಂದು ಗೌರವದ ಸೌಲಭ್ಯ,,

  • ಮಹಿಳೆಯರ ಗೌರವ, ಅನುಕೂಲಕ್ಕೆ ಆದ್ಯತೆ – ಮೂಲಸೌಕರ್ಯ ಕಲ್ಪಿಸಿದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಕುಕನೂರು: ಪಟ್ಟಣದ ಏಳನೇ ವಾರ್ಡಿನ ಮಹಿಳೆಯರ ಅನುಕೂಲಕ್ಕಾಗಿ ನಿರ್ಮಿಸಲಾದ ನೂತನ ಮಹಿಳಾ ಶೌಚಾಲಯವನ್ನು ಸ್ಥಳೀಯ ಮಹಿಳೆಯರೇ ಉದ್ಘಾಟಿಸುವ ಮೂಲಕ ವಿಶೇಷ ಗಮನ ಸೆಳೆದರು. ಮಹಿಳೆಯರ ಬಹುದಿನಗಳ ಅಗತ್ಯಕ್ಕೆ ಸ್ಪಂದಿಸಿ ನಿರ್ಮಿಸಲಾದ ಈ ಸೌಲಭ್ಯಕ್ಕೆ ಚಾಲನೆ ದೊರೆತ ಹಿನ್ನೆಲೆಯಲ್ಲಿ ಸ್ಥಳೀಯ ಮಹಿಳೆಯರು ಸಂತಸ ವ್ಯಕ್ತಪಡಿಸಿದರು.

ಮಹಿಳಾ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಸತ್ಯನಾರಾಯಣಪ್ಪ ಹರಪನಹಳ್ಳಿ ಅವರು ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಮಹಿಳೆಯರ ಅನುಕೂಲಕ್ಕಾಗಿ ನೂತನ ಶೌಚಾಲಯ ನಿರ್ಮಿಸಿರುವುದು ಉತ್ತಮ ಕಾರ್ಯವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರಿಗಾಗಿ ಅಗತ್ಯ ಶೌಚಾಲಯಗಳನ್ನು ನಿರ್ಮಿಸಿಕೊಡುವುದು ಒಂದು ಕಾರ್ಯವಾದರೆ, ನಿರ್ಮಿಸಿದ ಶೌಚಾಲಯಗಳನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಂಡು, ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಮತ್ತೊಂದು ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯವನ್ನು ಪ್ರತಿಯೊಬ್ಬರೂ ತಮ್ಮ ಮನೆಯ ಶೌಚಾಲಯದಂತೆ ಭಾವಿಸಿ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಶೌಚಾಲಯವನ್ನು ಬಳಸುವಾಗ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ, ಇತರ ಸಾರ್ವಜನಿಕರಿಗೂ ಉಪಯೋಗವಾಗುವ ರೀತಿಯಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸುವುದರ ಜೊತೆಗೆ ಅವುಗಳ ನಿರ್ವಹಣೆಯಲ್ಲಿಯೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಇಂತಹ ಸೌಲಭ್ಯಗಳು ದೀರ್ಘಕಾಲ ಜನರಿಗೆ ಅನುಕೂಲವಾಗಲಿವೆ ಎಂದು ತಿಳಿಸಿದರು.

ನಂತರ ಏಳನೇ ವಾರ್ಡ್ ಸದಸ್ಯರಾದ ಗಗನ ನೋಟಗಾರ ಮಾತನಾಡಿ, ಪಟ್ಟಣದ ಅಭಿವೃದ್ಧಿಯ ಜೊತೆಗೆ ಸಾರ್ವಜನಿಕರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಚಿವರಾದ ಬಸವರಾಜ ರಾಯರಡ್ಡಿ ಅವರು ಮಹಿಳೆಯರ ಅನುಕೂಲ ಹಾಗೂ ಗೌರವಕ್ಕೆ ಆದ್ಯತೆ ನೀಡಿ ಇಂತಹ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಮುಂಚೂಣಿಯಲ್ಲಿ ಚಾಲನೆ ನೀಡಿರುವುದು ಶ್ಲಾಘನೀಯ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ ಮಾತನಾಡಿ, ಸಚಿವರಾದ ಬಸವರಾಜ ರಾಯರಡ್ಡಿ ಅವರು ಮಹಿಳೆಯರಿಗೆ ಮೊದಲ ಆದ್ಯತೆ ನೀಡಿ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸಂತಸದ ಸಂಗತಿಯಾಗಿದೆ. ಮಹಿಳೆಯರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಮುಖ್ಯಾಧಿಕಾರಿ ನಾಗೇಶ, ಗ್ಯಾರಂಟಿ ಯೋಜನೆ ಕುಕನೂರು ತಾಲ್ಲೂಕಾಧ್ಯಕ್ಷ ಸಂಗಮೇಶ ಗುತ್ತಿ, ನಿರ್ಮಿತಿ ಕೇಂದ್ರದ ಅಧಿಕಾರಿ ಮಹಾದೇವ ಪತ್ತಾರ, ಸಿದ್ದಯ್ಯ ಕಳ್ಳಿಮಠ, ರೆಹಮಾನ್ ಸಾಬ್ ಮುಕ್ಕಪ್ಪನವರ್, ಚಂದ್ರು ಬಗನಾಳ, ಬಸವರಾಜ ಬಗನಾಳ, ಪ್ರಕಾಶ ಚಂಡೂರ, ಬಸಣ್ಣ ಈಬೇರಿ, ಈರಣ್ಣ ಈಬೇರಿ, ಶರಣಪ್ಪ ಚಂಡೂರು, ಮಹಾಂತೇಶ ಹೂಗಾರ , ಕಳಕಪ್ಪ ಕುಂಬಾರ, ಸುವರ್ಣ ಈಬೇರಿ, ಹನುಮವ್ವ ಮಾಳೆಕೊಪ್ಪ, ರೇಣುಕಾ ಬಗನಾಳ, ಶಶಿಕಲಾ ಈಬೇರಿ, ಬಸಮ್ಮ ಸೇರಿದಂತೆ ವಾರ್ಡಿನ ಮಹಿಳೆಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವರದಿ: ಚನ್ನಯ್ಯ ಹಿರೇಮಠ

Related Articles

Leave a Reply

Your email address will not be published. Required fields are marked *

Back to top button
error: Content is protected !!