

ಕುಕನೂರಿನಲ್ಲಿ ಆಗಸ್ಟ್ 4 *ಜ್ಯೋತಿ ಆಗು ಜಗಕೆಲ್ಲ* *ಜ್ಞಾನಪದ ಬೆಳಗು*
*ಹಾಡು ಹಕ್ಕಿಗಳ ಜಾನಪದ ವೈಭವ* *ಕಾರ್ಯಕ್ರಮ*
ಕುಕನೂರು : ಪಟ್ಟಣದ ಜಗದ್ಗುರು ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಸಭಾ ಭವನದಲ್ಲಿ ಆಗಸ್ಟ್ 4ರಂದು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇವರ ಸಯೋಗದಲ್ಲಿ *”ಜ್ಯೋತಿ ಆಗು ಜಗವೆಲ್ಲ” ಜ್ಞಾನಪದ ಬೆಳಗು, ಹಾಡು ಹಕ್ಕಿಗಳ ಜಾನಪದ ವೈಭವ ಸಾಂಸ್ಕೃತಿಕ ಕಾರ್ಯಕ್ರಮ* ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಪ್ರಕಾರದ ಜಾನಪದ ಕಲಾವಿದರು ಭಾಗವಹಿಸಲಿದ್ದು ಜಾನಪದ ಕಲೆ, ಸಾಹಿತ್ಯ, ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಜನಪದ ಶೈಲಿಯ ಗೀಗಿ ಪದ, ಚೌಡಕಿ ಪದ, , ಜಾನಪದ ಸಂಗೀತ ಸಾಂಪ್ರದಾಯಿಕ ಸೋಬಾನ ಪದಗಳು ಇನ್ನು ಅನೇಕ ಕಲಾ ಪ್ರಕಾರಗಳು ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತವೆ. ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಕುಕುನೂರು ಶಾಖಾ ಮಠದ ಪರಮಪೂಜ್ಯ ಡಾ. *ಮಹಾದೇವ ಮಹಾಸ್ವಾಮಿಗಳು*
ಸಾನಿಧ್ಯ ವಹಿಸುವರು.
ಮಾಜಿ ಸಚಿವರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಮಾನ್ಯ ಶ್ರೀ *ಬಸವರಾಜ ರಾಯರೆಡ್ಡಿ* ಅವರು ಸಮಾರಂಭವನ್ನು ಉದ್ಘಾಟಿಸುವರು. *ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್* , ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟರ್ ಎಸ್. ನಮ್ರತಾ ಮತ್ತು ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ಜಾನಪದ ಕಲಾವಿದರಾದ ಮತ್ತು *ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಡಾ ಜೀವನ್ ಸಾಬ್ ವಾಲಿಕಾರ್ ಬಿನ್ನಾಳ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ವರದಿ ಚನ್ನಯ್ಯ ಹಿರೇಮಠ ಕುಕನೂರ




