

*ತಿಪ್ಪರಸನಾಳ ಮೊರಾರ್ಜಿ ವಸತಿ ನಿಲಯದಲ್ಲಿ ಶ್ರೀ ಮಂಜುನಾಥ ಟ್ರಸ್ಟ್‌ನಿಂದ 500 ಉಚಿತ ಗಿಡಗಳ ನೆಡುವ ಕಾರ್ಯಕ್ರಮ*
ಕುಕನೂರು, ಆ. 3: ಕುಕನೂರು ತಾಲ್ಲೂಕಿನ ತಿಪ್ಪರಸನಾಳ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ನಿಲಯದಲ್ಲಿ ಸೋಮವಾರ ಶ್ರೀ ಮಂಜುನಾಥ ಟ್ರಸ್ಟ್ ಕಮಿಟಿಯ ವತಿಯಿಂದ ಪರಿಸರ ಸಂರಕ್ಷಣೆಯ ಉದ್ದೇಶದಿಂದ 500 ಉಚಿತ ಗಿಡಗಳನ್ನು ನೆಟ್ಟು, ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಸತಿ ನಿಲಯದ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಗಿಡಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಿದರು.
ಈ ವೇಳೆ ಶ್ರೀ ಮಂಜುನಾಥ ಟ್ರಸ್ಟ್ ಕಮಿಟಿಯ ಶ್ರೀಶೈಲ , ವಕೀಲ ರಫಿ ಸಾಬ್ ಬಳಗೇರಿ, ಲಕ್ಷ್ಮಣ ಕಾಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಗಿಡಗಳಿಗೆ ನೀರೆರೆದು ಪರಿಸರ ಜಾಗೃತಿಯ ಸಂದೇಶ ಸಾರಿದರು.
ವರದಿ: ಚನ್ನಯ್ಯ ಹಿರೇಮಠ, ಕುಕನೂರು




