

*ಕ್ರೀಡೆ ಜೀವನೋತ್ಸಕ್ಕೆ ಸಹಕಾರಿ : ಬಿಇಒ ಶ್ರೀನಿವಾಸ ಬನ್ನಿಗೋಳ,,*
ಕುಕನೂರು : ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೋಳ್ಳುವದರಿಂದವ್ಯಕ್ತಿತ್ವ ವಿಕಸನದ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಿಸುವುದಲ್ಲದೇ ಕ್ರೀಡೆ ಜೀವನೋತ್ಸಕ್ಕೆ ಸಹಕಾರಿಯಾಗಲಿದೆ ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಬನ್ನಿಗೋಳ ಹೇಳಿದರು.
ಅವರು ತಾಲ್ಲೂಕಿನ ಬಳಗೇರಿ ಗ್ರಾಮದ ಶ್ರೀಮತಿ ಶಿವಮ್ಮ ಬಸವರಡ್ಡೆಪ್ಪ ರಡ್ಡೇರ ಸರಕಾರಿ ಪ್ರೌಢ ಶಾಲೆಯಲ್ಲಿ ಕುಕನೂರು ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾ ಕೂಟದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಕ್ರೀಡೆಯಲ್ಲಿ ತೊಡಗುವುದರಿಂದ ವಿವಿಧ ಖಾಯಿಲೆಗಳನ್ನು ದೂರ ಮಾಡಲು ಸಹಕಾರಿಯಾಗುತ್ತದೆ. ಆಟಗಳು ಬದುಕಿನ ಅವಿಭಾಜ್ಯ ಅಂಗಗಳಾಗಿವೆ ಎಂದರು.
ಪ್ರತಿಯೊಬ್ಬ ಮಕ್ಕಳು ಕ್ರೀಡಾ ಮನೋಭಾವನೆ ಹೊಂದಿದವರಾಗಿರಬೇಕು, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲಾ, ಭಾಗ ವಹಿಸುವ ಮನೋಭಾವನೆ ಮುಖ್ಯ ಎಂದರು.
ನಂತರ ಬಳಗೇರಿ ಸರಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯರಾದ ಅಕ್ಕಮಹಾದೇವಿ ಜಿ. ಎನ್ ಮಠ ಮಾತನಾಡಿ
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿದಾಗ ಶಾರೀರಿಕ, ಭೌದ್ದಿಕ ಬೆಳವಣಿಗೆಯ ಜೊತೆಗೆ ಆರೋಗ್ಯ ಪೂರ್ಣ ಬದುಕು ನಡೆಸಲು ಸಹಕಾರಿಯಾಗುತ್ತದೆಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ದೈಹಿಕ ಶಿಕ್ಷಕ ಶಿವಾನಂದ ಹೊಸ್ಮನಿ ಕ್ರೀಡಾಕೂಟದ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಈ ವೇಳೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಖೋಖೋ, ಕಬ್ಬಡ್ಡಿ, ವ್ಹಾಲಿಬಾಲ್ ಸೇರಿದಂತೆ ಗುಂಪು ಆಟ, ವಯಕ್ತಿಕ ಆಟಗಳು ಜರುಗಿದವು.
ಈ ಸಂದರ್ಭದಲ್ಲಿ ಯಲಬುರ್ಗಾ ಬಿಆರ್ಸಿ ಅಶೋಕಗೌಡರ್, ನಿವೃತ್ತ ಮುಖ್ಯ ಶಿಕ್ಷಕ ವಿ. ಎಸ್. ಬೆಣಕಲ್, ದೈಹಿಕ ಶಿಕ್ಷಕ ಶರಣಪ್ಪ ವೀರಾಪೂರ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ರಾಜಶೇಖರ ಹೂಗಾರ, ಶರಣಪ್ಪ ಬೂದಗುಂಪಿ, ಉಪಾಧ್ಯಕ್ಷ ರವಿ ತಳವಾರ, ನೌಕರ ಸಂಘದ ಅಧ್ಯಕ್ಷ ಮಹೇಶ ಸಬರದ, ಮುಖ್ಯ ಶಿಕ್ಷಕ ಭೀಮಪ್ಪ ಮೀಸಿ, ಬಸವರಾಜ ಮೇಟಿ, ಸುರೇಶ ಅಬ್ಬಿಗೇರಿ, ಉಮೇಶ ಕಂಬಳಿ, ಕಳಕರಡ್ಡಿ ತಿಮ್ಮರೆಡ್ಡಿ, ಸುರೇಶ ಮಾದಿನೂರ, ಶರಣಪ್ಪ ಬಿಸರಳ್ಳಿ, ಶರಣಪ್ಪ ಮದ್ಲಾಪೂರ, ಹನುಮಂತಗೌಡ ದಾದ್ಮಿ, ಮುಖಂಡರಾದ ಟಿ. ಎಸ್ ಹೂಗಾರ, ನೀಲಕಂಠಪ್ಪ ಕಂಬಳಿ, ಸುಧಾಕರ ಕುಲಕರ್ಣಿ, ಈರಪ್ಪ ದಳಪತಿ, ದೊಡ್ಡಪ್ಪ ಕೋಮಾರ, ಬಸಪ್ಪ ತಳವಾರ ಸೇರಿದಂತೆ ಶಾಲಾ ಸುಧಾರಣಾ ಸಮಿತಿ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಇನ್ನೀತರರು ಇದ್ದರು.
ವರದಿ :-ಚನ್ನಯ್ಯ ಹಿರೇಮಠ ಕುಕನೂರು


