Uncategorized

ವಲಯ ಮಟ್ಟದ ಕ್ರೀಡಾಕೂಟ: ಕೆಪಿಎಸ್ ಮಂಗಳೂರು ವಿದ್ಯಾರ್ಥಿಗಳ ಅಮೋಘ ಸಾಧನೆ

ವಲಯ ಮಟ್ಟದ ಕ್ರೀಡಾಕೂಟ: ಕೆಪಿಎಸ್ ಮಂಗಳೂರು ವಿದ್ಯಾರ್ಥಿಗಳ ಅಮೋಘ ಸಾಧನೆ

ಕುಕನೂರು: ಇತ್ತೀಚೆಗೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟಗಳು ನಡೆದವು. ಕ್ರೀಡಾಕೂಟದಲ್ಲಿ ಕೆಪಿಎಸ್ ಮಂಗಳೂರಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಬಾಲಕರ ಕಬಡ್ಡಿ ಹಾಗೂ ಬಾಲಕಿಯರ ವಾಲಿಬಾಲ್ ತಂಡಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸತತ ಎರಡನೇ ಬಾರಿಗೆ ಆಯ್ಕೆಯಾಗಿವೆ.
ಇದೇ ವೇಳೆ ಸರಪಳಿ ಗುಂಡು ಎಸೆತದಲ್ಲಿ ಹನುಮೇಶ್ ಬೆವಿನಗಿಡದ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ತರುಣ್, ಶ್ರೀದೇವಿ, ಸಂಜನಾ, ಪ್ರಜ್ವಲ್ ಕಟ್ಟಿಮನಿ, ನವೀನ್ ಕುಮಾರ್, ಶಶಿಕಲಾ ಸೇರಿದಂತೆ ಹಲವು ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಭಿನಂದನೆ
ತಾಲೂಕು ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳಿಗೆ ಎಸ್‌ಡಿಎಂಸಿ ಉಪಾಧ್ಯಕ್ಷ ಅನಿಲ್ ಕುಮಾರ್ ಎಂ. ಕಲ್ಭಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಬನಿಗೋಳ್, ಪ್ರಾಂಶುಪಾಲ ಗೋಪಾಲಯ್ಯ ಟಿ., ಉಪಪ್ರಾಂಶುಪಾಲ ಹನಮಂತಪ್ಪ ಆವಾರದಮನಿ, ತಾಲೂಕು ದೈಹಿಕ ಪರಿವೀಕ್ಷಕ ಶರಣಪ್ಪ ವೀರಾಪೂರ, ಮುಖ್ಯೋಪಾಧ್ಯಾಯರಾದ ಶಕುಂತಲಾ ಮಾಲಿಪಾಟೀಲ್, ಸ್ಥಾಯಿ ಸಮಿತಿ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರು, ಶಾಲೆಯ ದೈಹಿಕ ಶಿಕ್ಷಕಿ ಲಕ್ಷ್ಮೀದೇವಿ ಸೇರಿದಂತೆ ಶಿಕ್ಷಕರು ಹಾಗೂ ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಸೋಮಪ್ಪ ನಾಯಕ್, ರವಿ ಡಿ. ಮಳಗಿ, ಮಹಾವೀರ ಕಲ್ಭಾವಿ, ಆನಂದ ಚಿನ್ನೂರ್, ಬಾಬುಸಾಬ ಗುಡಿಹಿಂದಲ್ ಹಾಗೂ ಇತರ ಶಿಕ್ಷಕರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ವರದಿ ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!