ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಶಾಸಕ ಎಂ ಆರ್ ಮಂಜುನಾಥ್
ಕೊಳ್ಳೇಗಾಲ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಶಾಸಕ ಎಂ ಆರ್ ಮಂಜುನಾಥ ಪಂಚಾಯ್ತಿ ಅಧಿಕಾರಿಗೆ ಸೂಚನೆ ನೀಡಿದರು.
ತಾಲ್ಲೂಕಿನ ಪಾಳ್ಯ ಗ್ರಾಮ ಪಂಚಾಯ್ತಿ ನೂತನ ಕಚೇರಿ ಉದ್ಘಾಟನೆ ಮಾಡಿ ಕಾರ್ಯಕ್ರಮದ ವೇದಿಕೆ ಸಮಾವೇಶದಲ್ಲಿ ಅವರು ಮಾತನಾಡಿದ್ದರು.
ಪಾಳ್ಯ ಗ್ರಾಮದಲ್ಲಿ 7500 ಸಾವಿರ ಜನಸಂಖ್ಯೆ ಇದ್ದು ಸುಮಾರು ಮಹಿಳೆಯರ ಸಂಘ ಸಂಸ್ಥೆಗಳ ಜೊತೆ 30ದೇವಸ್ಥಾನಗಳು ಇದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದೇನೆ, ಹಿಂದೆ ಇದ್ದವರು ಗ್ರಾಮದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರೋ ಏನೋ ಗೊತ್ತಿಲ್ಲ ಆದ್ರೆ ನಾನು ಸಂಪೂರ್ಣ ಮಾಹಿತಿ ಪಡೆದುಕೊಂಡು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಸುಂದರವಾದ ನಕ್ಷೆಯನ್ನು ಸಿದ್ದಪಡಿಸಿಕೊಂಡಿದ್ದೇನೆ ಗ್ರಾಮಕ್ಕೆ ಆಗಬೇಕಾದ ಕೆಲಸಗಳು ಯಾವ ರೀತಿ ಮಾಡಬೇಕು ಅವುಗಳನ್ನು ಮಾಡಿ ತೋರಿಸುತ್ತೇನೆ, ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮದ ಸ್ವಚ್ಛತಾ ಬಗ್ಗೆ ಗಮನ ಕೊಡಬೇಕು ನಾನು ನೋಡಿದ ಅನೇಕ ಕಡೆ ಅನೈರ್ಮಲ್ಯ ಎದ್ದು ಕಾಣುತ್ತ ಇದೆ, ಮನೆ ಮನೆಗೆ ತೆರಳಿ ಸ್ವಚ್ಛತಾ ಬಗ್ಗೆ ಅರಿವು ಮೂಡಿಸಿ ಸ್ವಚ್ಛತಾ ಕಾಪಾಡಿಕೊಳ್ಳಬೇಕು ಗ್ರಾಮ ಪಂಚಾಯ್ತಿಗೆ ಬರುವ ಅನುದಾನವನ್ನು ಕಾಟಾಚಾರಕ್ಕೆ ಬಳಸದೆ ಗ್ರಾಮದ ಸ್ವಚ್ಛತೆ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕು ಎಂದು ಪಂಚಾಯ್ತಿ ಅಧಿಕಾರಿಗಳಿಗೆ ತಾಕಿತ್ತು ಮಾಡಿದ್ದರು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಮಾಹಿತಿ ತೆಗೆದುಕೊಂಡು ನನ್ನನ ಭೇಟಿ ಮಾಡಿ ಎಂದು ತಿಳಿಸಿದ್ದರು,
ಗ್ರಾಮದ ಬಗ್ಗೆ ಒಂದು ಒಳ್ಳೆ ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದು ಗ್ರಾಮಕ್ಕೆ ಕ್ರೀಡಾಂಗಣ, ರಸ್ತೆ ಹಾಗೂ ಇನ್ನು ಅನೇಕ ಕೆಲಸಗಳನ್ನು ಮಾತನಾಡಿ ಹೇಳುವುದ್ಕಕಿಂತ ಮಾಡಿ ತೋರಿಸುತ್ತೇನೇ ಎಂದು ತಿಳಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಚೈತ್ರ, ಮಾಜಿ ಅಧ್ಯಕ್ಷ ಹಾಗೂ ಸದಸ್ಯ ರವಿ, ಗ್ರಾಮ ಪಂಚಾಯ್ತಿ ಅಧಿಕಾರಿ ಜುನೈದ್ ಅಹಮದ್, ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಸಿಬ್ಬಂದಿಗಳು ಸಾರ್ವಜನಿಕರು ಇನ್ನಿತ್ತರು ಇದ್ದರು.
ವರದಿಗಾರರು ಪಿ ಸುರೇಶ್, ಬಿ ಗುಂಡಾಪುರ 7022991304