Uncategorized

*ಮಹರ್ಷಿ ವಾಲ್ಮೀಕಿ ವೃತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ : ವಾಲ್ಮೀಕಿ ಸಮಾಜದಿಂದ ಸಚಿವ ರಾಯರಡ್ಡಿಗೆ ಮನವಿ*

*ಮಹರ್ಷಿ ವಾಲ್ಮೀಕಿ ವೃತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ : ವಾಲ್ಮೀಕಿ ಸಮಾಜದಿಂದ ಸಚಿವ ರಾಯರಡ್ಡಿಗೆ ಮನವಿ*

ಕುಕನೂರು : ಸ್ಥಳೀಯ ಪಟ್ಟಣ ಪಂಚಾಯತಿ ಹತ್ತಿರದಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ವಾಲ್ಮೀಕಿಯವರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಸಮಾಜದ ಮುಖಂಡರು ಸಚಿವ ಬಸವರಾಜ ರಾಯರಡ್ಡಿಯವರಿಗೆ ಮನವಿ ಮಾಡಿದರು.

ಗುರುವಾರದಂದು ಸಚಿವ ಬಸವರಾಜ ರಾಯರಡ್ಡಿವರು ನೂತನ ಸಚಿವರಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರ ಯಲಬುರ್ಗಾ ತಾಲ್ಲೂಕಿನ ಬರ ವೀಕ್ಷಣೆಗೆ ಆಗಮಿಸಿದ್ದರಿಂದ ಅವರಿಗೆ ವಾಲ್ಮೀಕಿ ಸಮಾಜದ ವತಿಯಿಂದ ಸನ್ಮಾನಿಸಿದರು.

ನಂತರದಲ್ಲಿ ಸಮಾಜದ ಅಧ್ಯಕ್ಷ ರಾಮಣ್ಣ ಮುಂದಲಮನಿ ಸೇರಿದಂತೆ ಮುಖಂಡರು ಸಚಿವರೊಂದಿಗೆ ಮಾತನಾಡಿ 2010ರಿಂದ ಪಟ್ಟಣ ಪಂಚಾಯತಿ ಪಕ್ಕದಲ್ಲಿ ವಾಲ್ಮೀಕಿ ವೃತ್ತವಿದ್ದು, ವೃತ್ತದಲ್ಲಿ ನಾಮ ಫಲಕ ಇರುವ ಜಾಗೆಯಲ್ಲಿ ಮಹರ್ಷಿಗಳ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಸಮಾಜ ಒಪ್ಪಿಗೆ ಸೂಚಿಸಿ, ಅದಕ್ಕಾಗಿ ಸಮಾಜದ ವತಿಯಿಂದ ಹಣವನ್ನು ಸಂಗ್ರಹಿಸಿದ್ದು, ಈಗ ಪ್ರತಿಷ್ಠಾಪನೆಗೆ ಅಣಿಯಾಗುತ್ತಿರುವ ಬಸವೇಶ್ವರ ಪುತ್ಥಳಿ ಪಕ್ಕದಲ್ಲಿಯೇ ವಾಲ್ಮೀಕಿ ವೃತ್ತವಿರುವದರಿಂದ ವಾಲ್ಮೀಕಿಯವರ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಸಚಿವರಿಗೆ ಮನವಿ ಮಾಡಿದರು.

ಈ ಸಚಿವ ರಾಯರಡ್ಡಿಯವರು ಈ ಸ್ಥಳದಲ್ಲಿ ಬಿಟ್ಟು ಬೇರೆ ಎಲ್ಲಿಯಾದರು ಸ್ಥಳ ಗುರುತಿಸಿ ಕೊಡಿ, ಅಲ್ಲಿ ನಿರ್ಮಾಣ ಮಾಡಲು ಅನುದಾನ ಕೊಡಿಸುವೆ ಎಂದರು. ಅದಕ್ಕೆ ಒಪ್ಪದ ಸಮಾಜದ ಮುಖಂಡರು ಪಟ್ಟು ಹಿಡಿದು ನೀವು ಅನುದಾನ ನೀಡಿದಿದ್ದರೂ ಪರವಾಗಿಲ್ಲಾ, ಸಮಾಜದ ವತಿಯಿಂದ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಸಚಿವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರತ್ನಾಕರ್ ತಳವಾರ, ರಾಮಣ್ಣ ಕಲ್ಲಣ್ಣವರ್, ಸಂಜೀವಪ್ಪ ಸಂಗಟಿ, ಮುತ್ತು ವಾಲ್ಮೀಕಿ, ಸುಭಾಸ ಪೂಜಾರ, ಶ್ರೀಕಾಂತ ಬಿಳಗಿ, ಕನಕಪ್ಪ ಬ್ಯಾಡರ್, ಗಂಗಾಧರ ನಾರಾಯಣಿ, ಭರಮಪ್ಪ ತಳವಾರ, ಮಂಗಳೇಶ ಮಂಗಳೂರು, ಸುಭಾಸ ಪೂಜಾರ, ಸಿದ್ದು ವಾಲ್ಮೀಕಿ, ಎಚ್. ಕೆ ಹೈತಾಪೂರ, ಕರಿಯಪ್ಪ ಅಡವಿಹಳ್ಳಿ, ಯಲ್ಲಪ್ಪ ಮುಂದಲಮನಿ, ರಾಮಣ್ಣ ಯಡ್ಡೋಣಿ, ಹನುಮಪ್ಪ ಮರಡಿ, ಯಮನೂರಪ್ಪ ತಳವಾರ, ಶಿವಪ್ಪ ತಳವಾರ, ಬಸವರಾಜ, ಸುರೇಶ ಸೇರಿದಂತೆ ಸಮಾಜದ ಹಿರಿಯರು, ಯುವಕರು, ಮುಖಂಡರು ಇದ್ದರು.

 

ವರದಿ :-ಚನ್ನಯ್ಯ ಹಿರೇಮಠ ಕುಕನೂರು

Related Articles

Leave a Reply

Your email address will not be published. Required fields are marked *

Back to top button
error: Content is protected !!