

ವಕೀಲರ ಸೌಕರ್ಯಗಳ ಈಡೇರಿಕೆಗೆ ಪ್ರಾಮಾಣಿಕ ಬದ್ಧ-ಪ್ರಕಾಶ್ ಆನಂದಳ್ಳಿ
ಕುಕನೂರು,
ವಕೀಲರ ಸೌಕರ್ಯಗಳ ಈಡೇರಿಕೆಗೆ ಪ್ರಾಮಾಣಿಕ ಬದ್ಧ ಎಂದು ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷ ಪ್ರಕಾಶ್ ಆನಂದಳ್ಳಿ ಹೇಳಿದರು.
ಪಟ್ಟಣದಲ್ಲಿ ಎಮ್.ಎಸ್. ಚಾರಿಟೆಬಲ್ ಟ್ರಸ್ಟವತಿಯಿಂದಾ
ಅಖಿಲ ಭಾರತ ವಕೀಲರ ಪರೀಕ್ಷೆ ಉತ್ತೀರ್ಣರಾದ ವಕೀಲರಿಗೆ ಮತ್ತು ನೂತನವಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,
ವಕೀಲರ ಯಾವುದೇ ಮಟ್ಟದ ಸಮಸ್ಯೆಗಳನ್ನು ನಾನು ನಿವಾರಿಸಲು ನಾನು ಸದಾ ಬದ್ದ ಹಾಗೇ ನೂತನವಾಗಿ ಭಾರತ ವಕೀಲರ ಪರೀಕ್ಷೆ ಉತ್ತೀರ್ಣರಾದ ನೂತನ ವಕೀಲರು ವಕೀಲ ವೃತ್ತಿಯಲ್ಲಿ ಯಾವಾಗಲೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಈ ವೃತ್ತಿಯಲ್ಲಿ ಪೈಪೋಟಿಯನ್ನು ಇಟ್ಟುಕೊಂಡು ವೃತ್ತಿಗೆ ಇಳಿಯಬೇಡಿ ಇಂದಿನ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಿಗಿಂತ ವಕೀಲ ವೃತ್ತಿ ಬಹಳ ಮಹತ್ವದ್ದಾಗಿದೆ ವಕೀಲದ ವೃತ್ತಿಯ ಜೊತೆಗೆ ಸಾಮಾಜಿಕ ಬದ್ಧತಿಯನ್ನು ಕಾಪಾಡು ಓಣೆಗಾರಿಕೆ ನಮ್ಮೆಲ್ಲರ ಮೇಲಿದೆ ಈ ಕಾರಣದಿಂದ ಎಲ್ಲರ ವಿಶ್ವಾಸ ಪಡೆದ ಪರಿಣಾಮವಾಗಿ ವಕೀಲರ ಅಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚಿನ ಮತವನ್ನು ಪಡೆದು ತಮ್ಮ ಆಶೀರ್ವಾದದೊಂದಿಗೆ ಅಧಿಕಾರ ಅನುಭವಿಸುತ್ತಿದ್ದೇನೆ ಅದರಂತೆ ನೀವು ಕೂಡ ಉಜ್ವಲ ಭವಿಷ್ಯ ಕಂಡುಕೊಳ್ಳಲು ಮುಂದಾಗಬೇಕೆಂದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ವಕೀಲರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಸಂಘದ ಮೇಲಿದೆ ಹಿಂದಿನ ದಿನಮಾನಗಳಲ್ಲಿ ಎಲ್ಲರೂ ವಕೀಲ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವೃತ್ತಿ ಕಡಿಮೆಯಾಗುತ್ತಿದೆ ಬರುವ 20 ವರ್ಷಗಳಲ್ಲಿ ವಕೀಲರ ಕ್ಷೇತ್ರ ಅತ್ಯಂತ ಪರಿಣಾಮಕಾರಿ ಪ್ರಜ್ವಲ್ಲಿಸಲಿದೆ ಆದ ಕಾರಣ ಯುವ ವಕೀಲರು ಶಿಸ್ತು ಮತ್ತು ಸಮವಸ್ತ್ರವನ್ನು ಕ್ರಮಬದ್ಧವಾಗಿ ಪಾಲಿಸಲು ಮುಂದಾಗಬೇಕು.
ಇಂದಿನ ತಂತ್ರಜ್ಞಾನವನ್ನು ಕೂಡ ಕಡ್ಡಾಯವಾಗಿ ಕಲಿತು ಮುಂದುವರಿಯಬೇಕು ಬರುವ ದಿನಗಳಲ್ಲಿ ನೂತನ ಪದಾಧಿಕಾರಿಗಳು ಅಭಿವೃದ್ಧಿ ಕೆಲಸಗಳಿಗೆ ನಮ್ಮ ಸಹಕಾರ ಬೆಂಬಲ ಯಾವತ್ತಿಗೂ ಇದ್ದೇ ಇರುತ್ತದೆ.
ನಂತರ ವಕೀಲರ ಸಂಫದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ ಸಜ್ಜನ್ ಮಾತನಾಡಿ, ಕುಕನೂರಿನ ಶ್ರೀಮಠದಲ್ಲಿ ಐಜಿಸಿರುವ ಈ ಕಾರ್ಯಕ್ರಮ ನನಗೆ ಸಂತಸವನ್ನು ತಂದಿದೆ ನಾಲ್ಕು ಬಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ನನಗೆ ಮತ್ತಷ್ಟು ಉಮ್ಮಸ್ಸನ್ನು ತಂದಿದೆ ಕಕ್ಷಿದಾರರ ಹಿತಕ್ಕಾಗಿ ಮತ್ತು ನ್ಯಾಯಾಂಗ ಕ್ಷೇತ್ರದ ಗೌರವ ಸ್ಥಾನಮಾನ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕಾಗಿದೆಎಂದು ಹೇಳಿದರು.
ದಿವ್ಯಾ ಸಾನಿಧ್ಯವನ್ನು ರಾಜೂರಿನ ಈ ಶರಣ ಬಸವೇಶ್ವರ ಸುಕ್ಷೇತ್ರದ ಅಭಿನವ ಪಂಚಾಕ್ಷರ ಮಹಾಸ್ವಾಮಿಗಳು ಹಾಗೂ ಯಲಬುರ್ಗಾದ ಶ್ರೀಧರ್ ಮುರುಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳು, ಅನ್ನದಾನೀಶ್ವರ ಶಾಖಾಮಠದ ಡಾ।। ಮಹಾದೇವ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಕೀಲರ ಸಂಘದ ತಾಲೂಕ ಅಧ್ಯಕ್ಷರಾದ ಸುಭಾಷ್ ಹೊಂಬಳರವರು ಸಸಿ ನೀರು ಹಾಕುವ ಮೂಲಕ ಉದ್ಘಾಟಿಸಿದರು, ವಕೀಲರ ಸಂಘದ ಉಪಾಧ್ಯಕ್ಷರಾದ ಅಂದಾನಗೌಡ ಮಾಲಿಪಾಟೀಲ,ಜಂಟಿ ಕಾರ್ಯದರ್ಶಿಗಳಾದ ಬಸವರಾಜ ಮೇಲುಸಕ್ಕರಿ, ಖಜಾಂಚಿ ಪುಷ್ಪಾ ಬೆವೂರು, ವಕೀಲರ ಸಂಘದ ಮಾಜಿ ಅಧ್ಯಕ್ಷರು ಆನಂದ ಉಳ್ಳಾಗಡ್ಡಿ, ಮಹಾಂತೇಶ ಬೂದಗುಂಪಿ, ಬಸವರಾಜ ಜಂಗ್ಲಿ, ಪ್ರಾಸ್ತಾವಿಕವಾಗಿ ರವಿ ನಿಂಗಪ್ಪ ಅಗೋಲಿ ಮಾತನಾಡಿದರು ಹಾಗೂ ಇತರರು ಇದ್ದರು. ನಿರೋಪಣೆಯನ್ನು ರುಂದ್ರಪ್ಪ ಭಂಡಾರಿ ನಿರ್ವಹಿಸಿದರು.
ವರದಿ ಚನ್ನಯ್ಯ ಹಿರೇಮಠ ಕುಕುನೂರು




