ನೆಟ್ ವರ್ಕ್ ಗಾಗಿ ಮರ ನೀರಿನ ಟ್ಯಾಂಕ್ ಏರಿ ಸರ್ಕಾರದ ನೀತಿಯನ್ನು ಅಣಕಿಸಿದ ಸಮೀಕ್ಷಾ ದಾರರಿಗೆ ನೋಟಿಸ್ ! ಓರ್ವ ಸಮನ್ವಯಾಧಿಕಾರಿ ಅಮಾನತ್

ವಿಶೇಷ ವರದಿ ಸುಂದರರಾಜ್ BA ಕಾರಟಗಿ
ಬೀದರ್ / ಹೊಸನಗರ : ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ನೆಟ್ ವರ್ಕ್ ಗಾಗಿ ಮರ ಹಾಗೂ ನೀರಿನ ಟ್ಯಾಂಕ್ ಏರಿದ ಸಮೀಕ್ಷೆದಾರ ಶಿಕ್ಷಕರಿಗೆ ಬಸವಕಲ್ಯಾಣ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹುಲಸೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದ ಮಹಾರಾಜ, ಹಾಗೂ ಹಂದ್ರಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅನಿಲ್ ಕುಮಾರ್ ಶಾಸ್ತ್ರಿ ಇವರಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ .
ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡ ಇವರು ನೆಟ್ ವರ್ಕ್ ಗಾಗಿ ನೀರಿನ ಟ್ಯಾಂಕ್ ಮತ್ತು ಮರವನ್ನು ಏರಿ ಸರಕಾರದ ನೀತಿಯನ್ನು ಅಣಕಿಸಿದ್ದಾರೆ, ಸರ್ಕಾರಿ ನೌಕರರು ಅಲ್ಲದ ರೀತಿ ವರ್ತಿಸಿ, ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ, ನೆಟ್ ವರ್ಕ್ ಗಾಗಿ ಮರ ಮತ್ತು ನೀರಿನ ಟ್ಯಾಂಕ್ ಏರಿ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೀರಿ ಈ ಕುರಿತು ಮೂರು ದಿನಗಳೊಳಗೆ ಲಿಖಿತ ಉತ್ತರ ನೀಡಬೇಕು ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನಿಮ್ಮ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ
ಕ್ಷೇತ್ರ ಸಮಯ ಅಧಿಕಾರಿ ಅಮಾನತು :
ಹೊಸನಗರ ತಾಲೂಕಿನ ಬಿ ಆರ್ ಸಿ ರಂಗನಾಥ್ ಅವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಗೈರು ಹಾಜರಾಗಿದ್ದಾರೆ. ಇವರು ಪೂರ್ವಾನುಮತಿ ಪಡೆಯದೆ ರಜೆ ಹಾಕಿ ಮತ್ತು ಯಾವುದೇ ದೂರವಾಣಿ ಕರೆಗೂ ಸ್ಪಂದಿಸದೆ ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ತೊಡಕು ಉಂಟಾಗಿದ್ದು. ಈ ಹಿನ್ನೆಲೆಯಲ್ಲಿ
ತತ್ ಕ್ಷಣದಿಂದಲೇ ಬಿ ಆರ್ ಸಿ ಶ್ರೀರಂಗನಾಥ ಅವರನ್ನು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಇವರು ಅಮಾನತ್ ಮಾಡಿ ಆದೇಶ ಹೊರಡಿಸಿದ ಘಟನೆ ನಡೆದಿದೆ
ಒಟ್ಟಾರೆ ಹೇಳುವುದಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಸಮೀಕ್ಷೆದಾರರಿಗೆ ಸರ್ಕಾರ ಬಿಸಿ ಮುಟ್ಟಿಸುತ್ತಿದೆ. ಸಮೀಕ್ಷೆ ಕಾರ್ಯದಲ್ಲಿ ಸಮೀಕ್ಷೆದಾರರಿಗೆ ಸಮೀಕ್ಷೆ ವೇಳೆ ನೆಟ್ವರ್ಕ್ ಇಲ್ಲದಿದ್ದರೆ ಆಗುವ ತೊಂದರೆಗಳು ಯಾರ ಮುಂದೆಯೂ ಹೇಳಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ.ಹಳ್ಳಿಗಳಲ್ಲಿ ಸಮೀಕ್ಷೆ ವೇಳೆ ನೆಟ್ ವರ್ಕ್ ಸಿಗದೆ ಸಮೀಕ್ಷೆದಾರರು ತೊಂದರೆಗಳ ಅನುಭವಿಸುತ್ತಿದ್ದು ಸರ್ಕಾರವು ಸಮೀಕ್ಷೆದಾರರ ಹಿತವೂ ಕಾಪಾಡಬೇಕಿದೆ